ಕಲಬುರಗಿ: ಎರಡು ಅಂಗಡಿಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಕರಕಲಾದ ಘಟನೆ ನಗರದ ಕೆ.ಬಿ.ಎನ್ ದರ್ಗಾ ಪ್ರದೇಶದ ನೂರಭಾಗ ಬಡಾವಣೆಯಲ್ಲಿ ಸಂಭವಿಸಿದೆ.
ಅಲ್- ಕರೀಮ್ ಬೈತುಲ್ ಮಾಲ್ ಬೆಂಕಿಗೆ ಆಹುತಿಯಾಗಿದ್ದು, ಘಟನೆಯಲ್ಲಿ ಸುಮಾರು 20 ಲಕ್ಷ ಮೌಲ್ಯದ ಬೆಲೆ ಬಾಳುವ ವಸ್ತು ಬೆಂಕಿಗೆ ಆಹುತಿಯಾಗಿವೆ. 1 ಟಾಟಾ-ಯಸ್ ವಾಹನ, 1ಟಿವಿಎಸ್ ಬೈಕ್, 3 ವಾಸಿಂಗ್ ಮಷಿನ್, 5 ಫ್ರೀಜ್ಡ್, 10 ಟಿವಿ ಸುಟ್ಟು ಕರಕಲಾಗಿವೆ.
ಪಕ್ಕದ ಪಡಿತರ ಅಂಗಡಿಗೂ ಬೆಂಕಿ ಕೆನ್ನಾಲಿಗೆ ವ್ಯಾಪಿಸಿದ ಪರಿಣಾಮ ಸಾರ್ವಜನಿಕ ವಿತರಣೆಗೆ ಇಟ್ಟಿದ್ದ ಪಡಿತರ ಆಹಾರ ಧಾನ್ಯ ಸುಟ್ಟು ಭಸ್ಮವಾಗಿವೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಅಹ್ನಿಶಾಮಕ ದಳದ ಸಿಬ್ವಂದಿ ಬೆಂಕಿ ನಂದಿಸಿದ್ದಾರೆ. ರೋಜಾ ಪೊಲೀಸರು ಪರೀಶಿಲನೆ ನಡೆಸುತ್ತಿದ್ದಾರೆ.