ಗುರುಭನದಲ್ಲಿ ಪತ್ರಿಕಾ ಕಚೇರಿ ತೆರೆಯಲು ಮುಖಂಡರ ಮನವಿ

0
114

ಆಳಂದ: ಪಟ್ಟಣದಲ್ಲಿ ಪತ್ರಕರ್ತರ ಸಂಘಕ್ಕೆ ಸ್ವಂತ ಕಟ್ಟಡ ಲಭ್ಯವಾಗುವರೆಗೆ ಗುರುಭವನದಲ್ಲಿ ಪತ್ರಿಕಾ ಕಚೇರಿ ತೆರೆದು ಕಾರ್ಯಾರಂಭಿಸಬೇಕು ಇದಕ್ಕೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ನರಸಪ್ಪ ಬಿರಾದಾರ ಪತ್ರಕರ್ತರ ಸಂಘಕ್ಕೆ ಮನವಿ ಮಾಡಿದರು.

ಪಟ್ಟಣದಲ್ಲಿ ಮಂಗಳವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಮಹಾದೇವ ವಡಗಾಂವ ಅವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪತ್ತಿನ ಸಹಕಾರ ಸಂಘ ಹಾಗೂ ಶಿಕ್ಷಣಾಧಿಕಾರಿಗಳು ನೀಡಿದ ಸನ್ಮಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗುರುಭವನದಲ್ಲಿನ ಸುಸರ್ಜಿತ ಕೋಣೆ, ಆಸನಗಳು, ಕಂಪ್ಯೂಟರ್, ವಿದ್ಯುತ್, ಪ್ಯಾನ್ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಶೀಘ್ರವೇ ಕಚೇರಿ ಆರಂಭಿಸಿ ಸುದ್ದಿಗೋಷ್ಠಿಗಳಿಗೆ ಮತ್ತು ಸಾರ್ವಜನಿಕರಿಗೆ ಸಂಪರ್ಕಕ್ಕೆ ಅನುಕೂಲವಾಗಿಸಲು ಪತ್ರಿಕಾ ಕಚೇರಿ ಆರಂಭಿಸಬೇಕು ಎಂದು ಹೇಳಿದರು.

Contact Your\'s Advertisement; 9902492681

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ಧರಾಮ ಪಾಟೀಲ, ಶಿಕ್ಷಕರ ಸಂಘದ ಅಧ್ಯಕ್ಷ ಗುರುನಾಥ ಬಾವಿ ಅವರು ಮಾತನಾಡಿ, ಪಟ್ಟಣದಲ್ಲಿ ಪತ್ರಿಕಾ ಕಚೇರಿ ಕೊರತೆ ನಿವಾರಣೆಗೆ ಎಲ್ಲ ರೀತಿಯಿಂದಲೂ ಸಹಕರಿಸಲಾಗುವುದು ಕಚೇರಿ ಆರಂಭಿಸಬೇಕು ಎಂದರು.

ಸನ್ಮಾನ ಸ್ವೀಕರಿಸಿದ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾದೇವ ವಡಗಾಂವ ಅವರು, ಪಟ್ಟಣದಲ್ಲಿ ಬಹುದಿನಗಳ ಬೇಡಿಕೆಯಾದ ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನದ ಕೊರತೆಯಿಂದ ನೆನಗುದ್ದಿಗೆ ಬಿದ್ದುಕೊಂಡಿದೆ. ಸದ್ಯ ನೌಕರ ಸಂಘದಿಂದ ಗುರುಭದನಲ್ಲೇ ಪತ್ರಿಕಾ ಸಂಘದ ಕಚೇರಿ ತೆರೆಯಲು ಅವಕಾಶ ಮಾಡಿಕೊಡುತ್ತಿರುವುದು ಸ್ಮರಣೀಯ ಕಾರ್ಯವಾಗಿದ್ದು, ಶೀಘ್ರವೇ ಕಚೇರಿ ಲೋಕಾರ್ಪಣೆ ಮಾಡಲಾಗುವುದು ಎಂದರು.

ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ, ದೈಹಿಕ ಶಿಕ್ಷಣಾಧಿಕಾರಿ ನಿಲಕಂಠಪ್ಪ ಸುಂದರಕರ್, ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಕಾಟಕರ್ ಮತ್ತಿತರು ನೂತನ ಅಧ್ಯಕ್ಷರಿಗೆ ಸನ್ಮಾನಿಸಿದರು.

ಈ ಸಂದರ್ಭಧಲ್ಲಿ ವಸಂತ ಫುಲಾರ್, ವಿಶ್ವನಾಥ ಘೊಡಕೆ, ಉಮೇಶ ಮಡಿವಾಳ, ಬಸವರಾಜ ಕಾಳೆ, ಕಲ್ಯಾಣಪ್ಪ ಬಿಜ್ಜರಗಿ, ಜಗನಾಥ ಕುಂಬಾರ, ಅಣ್ಣಪ್ಪ ಹಾದಿಮನಿ, ಜಾಫರ್ ಅನ್ಸಾರಿ ಮತ್ತಿತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here