ನೌಕರರ ಬೇಡಿಕೆಗೆ ವಾಟ್ಸ್ ಸಂದೇಶ-ಪತ್ರ ಚಳವಳಿ ಹೋರಾಟ

0
105

ಆಳಂದ: ಬರುವ ದಿನಗಳಲ್ಲಿ ಕೇಂದ್ರ ಸಮ್ಮಾನ ವೇತನ ಜಾರಿ, ಎನ್‌ಪಿಎಸ್ ರದ್ದತಿ ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ವಾಟ್ಸ್ ಸಂದೇಶ ರವಾನೆ ಚಳವಳಿ ಬಳಿಕ ಇದಕ್ಕೂ ಮಣಿಯದೆ ಹೋದಲ್ಲಿ ಪತ್ರ ಚಳವಳಿಯ ಮೂಲಕ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಮ ವಿ. ಪಾಟೀಲ ಅವರು ಇಂದಲ್ಲಿ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಸಂಘದ ತಿದ್ದುಪಡಿಯ ಹೊಸ ಬೈಲಾದಂತೆ ತಾಲೂಕಿನ ಸಂಘಕ್ಕೆ ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಪಟ್ಟಣದ ಸಂಘದ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ಪ್ರಮಾಣಪತ್ರ ನೀಡಿ ಗೌರವಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಈಗಾಗಲೇ ಸಂಘದ ರಾಜ್ಯಾಧ್ಯಕ್ಷರು ರಾಜ್ಯ ಸರ್ಕಾರಕ್ಕೆ ಬೇಡಿಕೆಯ ಮನವಿ ಸಲ್ಲಿಸಿದ್ದಾರೆ. ಈ ಬೇಡಿಕೆ ಈಡೇರದೆ ಹೋದಲ್ಲಿ ನೌಕರರು ಹೋರಾಟಕ್ಕೆ ಸಜ್ಜಾಗಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಕರ್ನಾಟಕ ಕಾರ‍್ಯನಿರತ ಪತ್ರಕರ್ತರ ಸಂಘದ ತಾಲೂಕಿನ ನೂತನ ಅಧ್ಯಕ್ಷ ಮಹಾದೇವ ವಡಗಾಂವ ಅವರಿಗೆ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇರಿ ಹಿರಿಯ ಪದಾಧಿಕಾರಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರು ತಮ್ಮ ಇಲಾಖೆಯ ಆಂತರಿಕ ಮತ್ತು ಸಾರ್ವಜನಿಕವಾಗಿ ಎದುರಿಸುವ ಸಮಸ್ಯೆಗೆ ಸಂಘಟಿತರಾಗಿ ಕರ್ತವ್ಯ ನಿಷ್ಠೆಯೊಂದಿಗೆ ನಡೆದರೆ ಎಲ್ಲವೂ ಪರಿಹಾರವಾಗಲು ಸಾಧ್ಯವಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ನರಸಪ್ಪ ಬಿರಾದಾರ, ಬಿಸಿಎಂ ಅಧಿಕಾರಿ ಬಸವರಾಜ ಕಾಳೆ, ಕೈಗಾರಿಕೆ ಅಧಿಕಾರಿ ಜಾಫರ್ ಅನ್ಸಾರಿ, ಮಂಜುನಾಥ ದೇವಂತಗಿ ಮತ್ತಿತರು ಸಂಘದ ದೇಯೋದ್ದೇಶ ಹಾಗೂ ನೌಕರರ ಸಮಸ್ಯೆಗಳ ನಿವಾರಣೆ ಕುರಿತು ಮಾತನಾಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುನಾಥ ಭಾವಿ, ಪಶು ಇಲಾಖೆಯ ಜಗನಾಥ ಕುಂಬಾರ, ಶಿಕ್ಷಣ ಇಲಾಖೆ ಪಂಚಪ್ಪ ಪಾಟೀಲ, ಅಣ್ಣಪ್ಪ ಹಾದಿಮನಿ, ಕಂದಾಯ ನಿರೀಕ್ಷಕ ಅಲ್ಲಾವೋದ್ದಿ ಸೇರಿದಂತೆ ವಿವಿಧ ಇಲಾಖೆಯ ನೌಕರರ ಪ್ರಮುಖರು ಉಪಸ್ಥಿತರಿದ್ದರು.
ಹಿರಿಯ ಉಪಾಧ್ಯಕ್ಷ ಜಾಫರ್ ಅನ್ಸಾರಿ, ಉಪಾಧ್ಯಕ್ಷ ಶ್ರೀನಿವಾಸ್ ಕುಲಕರ್ಣಿ, ಬಸವರಾಜ ಬಳೋಡಗಿ, ಗೌರವ ಅಧ್ಯಕ್ಷ ಸಿದ್ರಾಮಪ್ಪ ನಿಲೂರೆ, ಕಾರ್ಯದರ್ಶಿ ಲೋಕೇಶ ಜಾಧವ್, ಜಿಲ್ಲಾ ಪ್ರತಿನಿಧಿ ಸಂತೋಷ ಹತ್ತರಕಿ, ಸಂಘಟನಾ ಕಾರ್ಯದರ್ಶಿ ವಿಶ್ವನಾಥ ಘೋಡಕೆ, ರಾಜಕುಮಾರ ಮೇತ್ರೆ, ಅಂಕುಶ ಚಳಕಾಪೂರೆ, ರಾಜ್ಯಪರಿಷತ್ ಸದಸ್ಯ ಉಮೇಶ ಮಡಿವಾಳ, ಮಹಾದೇವಿ ಅಷ್ಟಗಿ, ವಸಂತ ಫುಲಾರ, ಆರ್‌ಎಫ್‌ಒ ರಘವೇಂದ್ರ ಸೇರಿ ಇನ್ನೂಳಿದ ಸದಸ್ಯರಿಗೆ ಸಂಘದ ಅಧ್ಯಕ್ಷ ಸಿದ್ಧರಾಮ ಪಾಟೀಲ ಅವರು ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು. ಕಲ್ಯಾಣಪ್ಪ ಬಿಜ್ಜರಗಿ ನಿರೂಪಿಸಿದರು. ಮಹಾದೇವ ಗುಣಕಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here