ಜ್ಜಲಗಟ್ಟಾ ಗ್ರಾಪಂಗೆ ಲೈನ್ ಮನ್ ನಿಯೋಜನೆ: KPRS ಹೋರಾಟಕ್ಕೆ ಜಯ

0
11

ರಾಯಚೂರು: ಇಂದು ರೈತ ಮತ್ತು ಸಾರ್ವಜನಿಕರಿಂದ ಲೂಟಿಯನ್ನು ವಿರೋಧಿಸಿ, ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘಟನೆ(ಕೆಪಿಆರ್‌ಎಸ್)ಯಿಂದ ಕೆಇಬಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಲಿಂಗಸ್ಗೂರಿನ ಲಕ್ಷ್ಮೀ ಗುಡಿಯಿಂದ ಜೆಸ್ಕಾಂ ಕಛೇರಿವರೆಗೂ ಪ್ರತಿಭಟನಾ ರ್ಯಾಲಿ ಮಾಡಿ ಕಛೇರಿ ಮುಂದೆ ಧರಣಿ ನಡೆಸಲಾಯಿತು. ಈ ವೇಳೆ ಧರಣಿ ಸ್ಥಳಕ್ಕೆ ಆಗಮಿಸಿದ ಎಇಇ ಅವರು ಆಗಮಿಸಿ ಮನವಿ ಸ್ವೀಕರಿಸಿದರು. ಬೇಡಿಕೆಗಳ ಬಗ್ಗೆ ಚರ್ಚಿಸಿ ಗೆಜ್ಜಲಗಟ್ಟಾ ಗ್ರಾಪಂಗೆ ಲೈನ್ ಮನ್ ನಿಯೋಜನೆಗೊಳಿಸಿದರು. ಇನ್ನೂ ಅನೇಕ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಭರವಸೆ ನೀಡಿದ ಬಳಿಕ ಧರಣಿ ಕೈಬಿಡಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಹಾಗೂ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಕೆಪಿಆರ್ ಎಸ್ ತಾಲೂಕಾಧ್ಯಕ್ಷ ಮಾನಪ್ಪ ಲೆಕ್ಕಿಹಾಳ, ಸದ್ದಾಂ ಹುಸೇನ್, ಲಿಂಗಪ್ಪ ಎಂ, ಬಾಬಾಜಾನಿ, ಸಿದ್ಧಪ್ಪ ಪೂಜಾರಿ, ಸಂಗನಗೌಡ, ಆದಪ್ಪ, ಗದ್ದೆಪ್ಪ, ಶರಣಪ್ಪ, ನೀಲಕಂಠಪ್ಪ, ಶಿವಕುಮಾರ್, ಬೀರಪ್ಪ, ಎಸ್ಎಫ್ಐನ ವಿಶ್ವ, ಡಿವೈಎಫ್ಐ ನ ಶಿವಪ್ಪ ಬ್ಯಾಗವಾಟ್, ಶಿವರಾಜ್ ಕಪಗಲ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here