ಕಲಬುರಗಿ ರಂಗಾಯಣದಲ್ಲಿ ನಾಟ್ಯಶಾಸ್ತ್ರ ಅಧ್ಯಯನ ಶಿಬಿರಕ್ಕೆ ಚಾಲನೆ 

0
17
ಕಲಬುರಗಿ ರಂಗಾಯಣದಲ್ಲಿ ನಾಟ್ಯಶಾಸ್ತ್ರ ಅಧ್ಯಯನ ಶಿಬಿರಕ್ಕೆ ಹುಲುಗಪ್ಪ ಕಟ್ಟೀಮನಿ ಚಾಲನೆ ನೀಡಿದರು. ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಆಡಳಿತಾಧಿಕಾರಿ ದತ್ತಪ್ಪ ಸಾಗನೂರ,  ಉಮೇಶ್ ಸಾಲಿಯಾನ ಹಾಗೂ ಕಲಾವಿದರು ಇದ್ದರು. 

ಕಲಬುರಗಿ: ಇಲ್ಲಿನ ರಂಗಾಯಣದಲ್ಲಿ ನಾಟ್ಯಶಾಸ್ತ್ರ ಅಧ್ಯಯನ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಹೆಸರಾಂತ ರಂಗನಟ ನಿರ್ದೇಶಕರಾದ ಹುಲುಗಪ್ಪ ಕಟ್ಟೀಮನಿ ಅವರು ನಿರ್ದೇಶಿಸುತ್ತಿರುವ ಶಿಬಿರದಲ್ಲಿ ನಾಟ್ಯಶಾಸ್ತ್ರದ ವಿವಿಧ ಆಯಾಮಗಳ ಹಿನ್ನೆಲೆಯಲ್ಲಿ ನವರಸಗಳ ನಟನೆಯ ಪಾಠಗಳನ್ನು ರಂಗಾಯಣದ ಕಲಾವಿದರಿಗೆ ಮತ್ತು ಆಸಕ್ತ ಹವ್ಯಾಸಿ ನಟರಿಗೆ ಹೇಳಿ ಕೊಡಲಾಗುವುದು. ಎರಡು ವಾರಗಳ ಕಾಲ ಅಧ್ಯಯನ ಶಿಬಿರ ನಡೆಯಲಿದೆ ಎಂದು ರಂಗಾಯಣ ನಿರ್ದೇಶಕರಾದ ಪ್ರಭಾಕರ ಪ್ರಭಾಕರ ಜೋಶಿ ತಿಳಿಸಿದ್ದಾರೆ.

Contact Your\'s Advertisement; 9902492681

ರಂಗಭೂಮಿಯಲ್ಲಿ ಕೃಷಿ ಮಾಡುವವರಿಗೆ ನಾಟ್ಯಶಾಸ್ತ್ರದ ಪರಿಚಯ ಇರಬೇಕು ಎಂಬ ನಿಟ್ಟಿನಲ್ಲಿ ಕಲಬುರಗಿ ರಂಗಾಯಣ ಮೊದಲ ಬಾರಿಗೆ ಆಯೋಜಿಸಿರುವ ಶಿಬಿರದ ಸಹಾಯಕ ನಿರ್ದೇಶಕರಾಗಿ ರಂಗಕರ್ಮಿಗಳಾದ ಉಮೇಶ್ ಸಾಲಿಯಾನ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here