ಸಮಾಜದ ಅಭಿವೃದ್ಧಿಗೆ ಸಂಘಟಿತರಾಗಲು ರಾಜ್ಯಾಧ್ಯಕ್ಷ ಶ್ರೀನಿವಾಸ ಕರೆ

0
10

ಸುರಪುರ: ಅಲೆಮಾರಿ ಹಾಗೂ ಅರೆ ಅಲೆಮಾರಿ ಸ್ತರದಲ್ಲಿದ್ದ ಗೊಲ್ಲ(ಯಾದವ್) ಸಮುದಾಯವನ್ನು ಮುಂದವರಿದ ಜಾತಿಗಳ ಲೆಕ್ಕಕ್ಕೆ ಸೇರಿಸಿ ಪ್ರವರ್ಗ ೧ ರಲ್ಲಿದ್ದ ಸೌಲಭ್ಯಗಳನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದ್ದು ಗೊಲ್ಲ ಅಭಿವೃದ್ದಿ ನಿಗಮವನ್ನು ಅಸ್ತಿತ್ವಕ್ಕೆ ತರುವಲ್ಲಿ ಗೊಂದಲ ಮೂಡಿಸಿ ಇಲ್ಲಿಯವರೆಗೂ ನಿಗಮವನ್ನು ಘೋಷಿಸದೇ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಕೂಡಲೇ ಸರಕಾರ ಪ್ರವರ್ಗ೧ರಲ್ಲಿ ಪಡೆಯುತ್ತಿದ್ದ ಸೌಲಭ್ಯವನ್ನು ಈ ಮೊದಲಿನಂತೆ ಮುಂದವರೆಸಬೇಕು ಹಾಗೂ ತ್ವರಿತವಾಗಿ ಗೊಲ್ಲ ಅಭಿವೃದ್ಧಿ ನಿಗಮವನ್ನು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ಗೊಲ್ಲ(ಯಾದವ್) ಸಂಘದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ ಒತ್ತಾಯಿಸಿದರು.

ನಗರದ ಕಡೇಚೂರು ಕಲ್ಯಾಣ ಮಂಟಪದಲ್ಲಿ ರವಿವಾರದಂದು ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಗೊಲ್ಲ(ಯಾದವ್) ಸಂಘದ ಸದಸ್ಯತ್ವದ ನೊಂದಣಿ ಅಭಿಯಾನ ಹಾಗೂ ಯಾದಗಿರಿ ಜಿಲ್ಲೆಯ ತಾಲೂಕು ಸಂಘಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿ,ಸಮುದಾಯ ಅಭೀವೃಧ್ಧಿ ಹೊಂದಬೇಕಾದರೆ ಮೊದಲು ಎಲ್ಲರು ಶಿಕ್ಷಣ ಹೊಂದುವುದು ಮುಖ್ಯವಾಗಿದೆ.ನಂತರ ರಾಜಕೀಯ ಎಳಿಗೆ ಜೊತೆಗೆ ಸಂಘಟನೆಯಾಗಿ ಹೋರಾಟ ಮಾಡಲು ಸಾಧ್ಯವಾಗಲಿದೆ ಎಂದರು.ಅಲ್ಲದೆ ಕುಲಶಾಸ್ತ್ರ ಅಧ್ಯಯನಕ್ಕಾಗಿ ಸರಕಾರ ನಮ್ಮ ಸಮುದಾಯದ ಮುಖಂಡರ ಅಭಿಪ್ರಾಯವನ್ನು ಪಡೆದುಕೊಂಡು ಸಮಿತಿಯನ್ನು ರಚನೆ ಮಾಡಿ ರಾಜ್ಯಾದ್ಯಂತ ಇರುವ ನಮ್ಮ ಸಮುದಾಯದ ಎಲ್ಲಾ ಉಪ ಜಾತಿಗಳ ಅಧ್ಯಯನ ಮಾಡಿಸಿ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಬೇಕು ಎಂದರು.

Contact Your\'s Advertisement; 9902492681

ಸಂಘದ ಉಪಾಧ್ಯಕ್ಷ ವಿಠಲ್ ಯಾದವ್ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಎ.ಕೃಷ್ಣಪ್ಪ ಅವರು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದು ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಈಗಲೂ ಕೂಡಾ ಸಂಘ ಸಾಕಷ್ಟು ಶ್ರಮಿಸುತ್ತಿದ್ದು ಸಮುದಾಯದ ಬಾಂಧವರು ಸಂಘದ ಸದಸ್ಯತ್ವ ಪಡೆಯುವ ಮೂಲಕ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಂಘವನ್ನು ಬಲಪಡಿಸಬೇಕು ಅಲ್ಲದೆ ಗೊಲ್ಲ ಸಮಾಜದ ಏಕೈಕ ಮಠವಾಗಿರುವ ಚಿತ್ರದುರ್ಗದ ಯಾದವ್ ಮಹಾಸಂಸ್ಥಾನದ ಮಠದ ಅಭಿವೃದ್ಧಿಗೂ ಕೂಡಾ ಸಹಾಯ ಸಹಕಾರ ನೀಡುವಂತೆ ಅವರು ಹೇಳಿದರು.

ಸಮಾಜ ಮುಖಂಡರಾದ ತಿಮ್ಮಯ್ಯ ಪುರ್ಲೆ ಮಾತನಾಡಿ ಬೇರೆ ಸಮಾಜದವರಂತೆ ಗೊಲ್ಲ ಸಮಾಜದ ಬಾಂಧವರು ಸಂಘಟಿತರಾಗಬೇಕು ಹಾಗೂ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವ ಮೂಲಕ ನಾಯಕರಾಗಿ ಹೊರ ಹೊಮ್ಮಬೇಕು ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಚಿತ್ರದುರ್ಗ ಯಾದವ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಯಾದವಾನಂದ ಮಹಾಸ್ವಾಮಿಗಳು ಹಾಗೂ ಶಿಕ್ಷಕ ಬಸವರಾಜ ಗುರುಮಿಠಕಲ್ ಮಾತನಾಡಿದರು,ಸಂಘದ ಹಿರಿಯ ಉಪಾಧ್ಯಕ್ಷ ಸಿದ್ದಪ್ಪ,ಪ್ರ ಕಾರ್ಯದರ್ಶಿ ಉಮಾಶಂಕರ,ಪ್ರಮುಖರಾದ ವೆಂಕೋಬ ಯಾದವ್,ಕೆ.ಸಿ.ರಮೇಶ,ಚಂದಪ್ಪ ಸಾಹುಕಾರ,ಚಂದಪ್ಪ ಯಾದವ್,ಸಾಯಬಣ್ಣ ಪುರ್ಲೆ,ಬಸವರಾಜ ಚಿತ್ರದುರ್ಗ,ಹಣಮಂತ,ಯಮನೂರಪ್ಪ,ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ತಾಯಪ್ಪ ಯಾದವ್ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಳಪ್ಪ ನಿರೂಪಿಸಿದರು ರಾಜೇಂದ್ರ ಡೊಳ್ಳೆ ಸ್ವಾಗತಿಸಿ ವಂದಿಸಿದರು. ಸಮಾವೇಶದಲ್ಲಿ ಯಾದಗಿರಿ ಜಿಲ್ಲೆಯ ವಿವಿಧ ತಾಲೂಕುಗಳ ಗೊಲ್ಲ(ಯಾದವ್) ಸಂಘದ ಪದಾಧಿಕಾರಿಗಳು ಹಾಗೂ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here