ನರೇಗಾ ಅನುಷಾ ನದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಲಹೆಯನ್ನು ವಿರೋಧಿಸಿ ಪ್ರತಿಭಟನೆ

0
91

ಶಹಾಬಾದ: ನರೇಗಾ ಅನುಷಾ ನದ ಪ್ರತಿಯೊಂದು ವಿಷಯದಲ್ಲಿಯೂ ಸಾಮಾಜಿಕ ವಿಭಾಗೀಕರಣದ ಗುರಿ ಹೊಂದಿರುವ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಲಹೆಯನ್ನು ವಿರೋಧಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ದಲಿತ ಹಕ್ಕುಗಳ ಸಮಿತಿ, ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ತಹಸೀಲ್ದಾರ ಮುಖಾಂತರ ರಾಷ್ಟ್ರಪತಿಗಳಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಆರ್‌ಎಸ್ ಚಿತ್ತಾಪೂರ ಅಧ್ಯಕ್ಷ ಸಾಯಬಣ್ಣ ಗುಡುಬಾ, ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯುವ ಹಕ್ಕನ್ನು ಹೊಂದಿರುವ ಕೆಲಸಗಾರರನ್ನು ಜಾತಿ ಆಧಾರದಲ್ಲಿ ವಿಭಜಿಸುವುದು ತಾರ್ಕಿಕವಾಗಿ ಸರಿಯಲ . ಬೇಡಿಕೆ ಆಧಾರದಲ್ಲಿ ಕೆಲಸವನ್ನು ಒದಗಿಸುವ ಕಾರ್ಯಕ್ರಮವಾದ ನರೇಗಾದಲ್ಲಿ ಜಾತಿ ಆಧಾರದಲ್ಲಿ ವಿಭಜಿಸಿ ಕೆಲಸ ನೀಡುವುದು ಕಾಯ್ದೆಯ ಮೂಲವನ್ನೇ ಕಡೆಗಣಿಸಿದಂತಾಗುತ್ತದೆ.ಕಾಯ್ದೆಯ ಸಮರ್ಪಕ ಹಾಗೂ ನ್ಯಾಯಸಮ್ಮತ ಅನುಷ್ಠಾನಕ್ಕೆ ವಿರುದ್ಧವಾಗಿದೆ.

Contact Your\'s Advertisement; 9902492681

ಈಗಾಗಲೇ ಸಮಾಜದಲ್ಲಿನ ಬಲಾಢ್ಯ ಶಕ್ತಿಗಳು ಫಲಾನುಭವಿಗಳ ಜಾತಿ ಮತ್ತು ಲಿಂಗ ಬೇಧ ,ಮಾಡದೇ ಸಮಾನ ಅವಕಾಶ ಹಾಗೂ ಸಮಾನ ಕೆಲಸ ನೀಡುವುದರ ವಿರುದ್ಧ ತಮ್ಮ ಪ್ರಭಾವ ಬೀರುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ಸಲಹೆ ರೂಪದ ಈ ಆದೇಶವನ್ನು ಹಿಂತೆಗೆದುಕೊಳ್ಳುವಂತೆಯೂ ನರೇಗಾ ಅಡಿಯಲ್ಲಿ ಕೆಲಸ ದಿನಗಳನ್ನು ವರ್ಷದಲ್ಲಿ ೨೦೦ ದಿನಗಳಿಗೆ ಹಾಗೂ ದಿನದ ವೇತನವನ್ನು ೬೦೦ ರೂ.ಗೆ ಹೆಚ್ಚಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ನಡೆಯುವಂತೆ ನಗರ ಪ್ರದೇಶಗಳಿಗೂ ಉದ್ಯೋಗ ಖಾತ್ರಿಯನ್ನು ವಿಸ್ತರಿಸಬೇಕು.

ಗ್ರಾಮೀಣ ಹಾಗೂ ನಗರದ ಬಡವರನ್ನು ಸಂರಕ್ಷಿಸಬೇಕು.ನರೇಗಾ ಸಮರ್ಪಕ ಅನುಷ್ಠಾನ ಮಾಡಲು ಕೇಂದ್ರ ಸರ್ಕಾರ ಮಧ್ಯಪ್ರದೇಶ ಮಾಡಿ ಸಲಹೆ ರೂಪದ ಆದೇಶವನ್ನು ಕೈಬಿಡುವಂತೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕೆಪಿಆರ್‌ಎಸ್ ಶಹಾಬಾದ ತಾಲೂಕಾ ಸಂಚಾಲಕ ರಾಯಪ್ಪ ಹುರಮುಂಜಿ, ಕಾರ್ಯದರ್ಶಿ ಶಕುಂತಲಾ, ಸದಸ್ಯರಾದ ವಿಜಯಕುಮಾರ ಕಂಠಿಕರ್,ನಿಂಗಣ್ಣ ಪೂಜಾರಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here