ಕಲಬುರಗಿ: ಇಲ್ಲಿನ ರಾಮ ಮಂದಿರ ವೃತ್ತದ ಬಳಿ ಇರುವ ವಿಶ್ವ ಚೇತನ ಆಯುರ್ವೇದ ಚಿಕಿತ್ಸಾಲಯದಲ್ಲಿ ಎರಡು ದಿನಗಳ ಉಚಿತ ಆಯುರ್ವೇದಿಕ್ ಚಿಕಿತ್ಸಾ ಶಿಬಿರಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಚಾಲನೆ ನೀಡಿದ ಜಿಲ್ಲಾ ಆರ್.ಸಿ.ಜಿ. ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್ ಮಾತನಾಡಿ, ಆಯುರ್ವೇದ ಶಾಸ್ತ್ರದಲ್ಲಿ ಹೇಳಲ್ಪಡುವ ಪಂಚಕರ್ಮ, ಕ್ರಿಯಾಕಲ್ಪ, ರಸಾಯನ, ವಾಜೀಕರಣ, ಕ್ಷಾರಸೂತ್ರ ಮುಂತಾದ ಚಿಕಿತ್ಸಾ ಪದ್ಧತಿಯನ್ನು ಸೂಸರ್ಜಿತವಾಗಿ ಪೂರ್ಣರೂಪದದಿಂದ ಕಲಬುರಗಿಯ ವಿಶ್ವ ಚೇತನ ಆಯುರ್ವೇದ ಚಿಕಿತ್ಸಾಲಯ ಪ್ರಾರಂಭಗೊಂಡಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸೊರಿಯಾಸಿಸ್, ಕ್ಯಾನ್ಸರ್, ಮೂಲವ್ಯಾದಿ, ಫಿಸ್ಟೂಲ್, ಬಂಜೆತನ, ಸಂಧಿವಾತ, ಆಮವಾತ, ಹಿಮೋಫಿಲಿಯಾ, ಕಿಡ್ನಿ ಸ್ಟೋನ್ ಮುಂತಾದವುಗಳಿಗೆ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿ ಸಹ ನಿರ್ದೇಶಕ (ಆಡಳಿತ) ಜಿ.ಎಂ. ವಿಜಯಕುಮಾರ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಡಾ. ಸತೀಶ ಎಂ. ಪಾಟೀಲ ಅವರು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದರು. ಪ್ರಥಮ ದರ್ಜೆ ಗುತ್ತಿಗೆದಾರ ಎಂ.ಕೆ. ಪಾಟೀಲ, ಶಿಕ್ಷಣ ಇಲಾಖೆಯ ಸಕ್ರೆಪ್ಪಗೌಡ ಬಿರಾದಾರ, ವಿಕಾಸ ಅಣಕಲ್, ಗುರು ಆಂದೋಲಾ, ಬಸವರಾಜ ಬಂಗಾರಶೆಟ್ಟಿ, ನಿಂಬೆಣ್ಣಪ್ಪ ನಂದಿಕೂರ ಇತರರು ಇದ್ದರು.
ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿಶ್ವ ಚೇತನ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಹೆಚ್ಚಿನ ಮಾಹಿತಿಗೆ 08472-233234ಗೆ ಸಂಪರ್ಕಿಸಬಹುದು.