ಬಹುಮುಖಿ ವಿಕಾಸಕ್ಕಾಗಿ ಪ್ರಶಿಕ್ಷಣ: ತರಬೇತಿಗಾಗಿ ಅರ್ಜಿ ಆಹ್ವಾನ

0
11

ಕಲಬುರಗಿ: ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ವಿಕಾಸ ಅಕಾಡೆಮಿ ಆಶ್ರಯದಲ್ಲಿ ಸಮಗ್ರ ಕಲ್ಯಾಣ ಕರ್ನಾಟಕದ ಬಹುಮುಖಿ ವಿಕಾಸಕ್ಕಾಗಿ ಸಂಪನ್ಮೂಲ ವ್ಯಕ್ತಿಯಾಗಿ ರೂಪಗೊಂಡು ಸಾಧಿಸಲು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಯುವಕ ಯುವತಿಯರಿಗೆ ಪ್ರಶಿಕ್ಷಣ ತರಬೇತಿ ನೀಡಲಾಗುವುದು ಎಂದು ವಿಕಾಸ ಅಕಾಡೆಮಿಯ ವ್ಹಿ. ಶಾಂತರೆಡ್ಡಿ ತಿಳಿಸಿದ್ದಾರೆ.

ಪ್ರಶಿಕ್ಷಣ ಪಡೆದವರು ನಾಯಕತ್ವ, ವ್ಯಕ್ತಿತ್ವ ವಿಕಸನ, ಪ್ರೇರಣಾಶೀಲತೆ, ಸಂವಹನ ಕೌಶಲ್ಯ ಮತ್ತಿತರರ ಕಲೆಗಳನ್ನು ಕರಗತ ಮಾಡಿಕೊಳ್ಳಲು ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಕ್ಷಮತೆ ಹೆಚ್ಚಿಸಿಕೊಂಡು ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಅವಕಾಶ ಇರುತ್ತದೆ.

Contact Your\'s Advertisement; 9902492681

ಆಯ್ಕೆ ಬಯಸುವವರು ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್ ಪದವಿಧರರಾಗಿರಬೇಕು. ೩೦ ವರ್ಷ ಮೇಲ್ಪಟ್ಟವರಾಗಿರಬಾರದು. ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನವನ್ನಾಧರಿಸಿ ಆಯ್ಕೆಯಾದವರಿಗೆ ಐದು ದಿನಗಳ ವಿಶೇಷ ತರಬೇತಿ ಕೊಡಲಾಗುವುದು. ತರಬೇತಿಗೆ ಯಾವುದೇ ಶುಲ್ಕ ಇರುವುದಿಲ್ಲ. ಅಭ್ಯರ್ಥಿಯು ೨ ಸಾವಿರ ರೂ. ಠೇವಣಿ ಇಡಬೇಕು. ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಹಣ ಹಿಂತಿರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಆಸಕ್ತರು ಅರ್ಜಿ ಕಳುಹಿಸುವ ವಿಳಾಸ ಹೀಗಿದ್ದು, ವಿಕಾಸ ಅಕಾಡೆಮಿ, ಕಂಪು ಕಾರ್ಯಾಲಯ, ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಹಿಂದೆ ಬ್ಯಾಂಕ್ ಕಾಲೋನಿ, ಕಲಬುರಗಿ 585102 ದೂ. 08472 273810, ಆಗಸ್ಟ್ ೩೧ ರೊಳಗೆ ಅರ್ಜಿ ಸಲ್ಲಿಸಬೇಕು. ಸೆಪ್ಟೆಂಬರ್ ೫ ರಂದು ಸಂದರ್ಶನ ನಿಗದಿಪಡಿಸಲಾಗಿದ್ದು, ಜೇವರ್ಗಿ ರಸ್ತೆಯ ಸಿರನೂರ ಬಳಿ ಇರುವ ಭಾರತೀಯ ವಿದ್ಯಾಕೇಂದ್ರದಲ್ಲಿ ಸಂದರ್ಶನ ನಡೆಯಲಿದೆ. ಸಂದರ್ಶನಕ್ಕೆ ಹಾಜರಾಗುವಾಗ ತಮ್ಮ ಪ್ರಮಾಣ ಪತ್ರಗಳನ್ನು ನಕಲು ಪ್ರತಿಗಳನ್ನು ತೆಗೆದುಕೊಂಡು ಬರಬೇಕು ಎಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here