ಗರ್ಭಿಣಿ ಮಹಿಳೆಯರ ತುರ್ತು ವೈದ್ಯಕೀಯ ಸಹಾಯಕ್ಕಾಗಿ ವಾಟ್ಸ್‍ಆಪ್ ಹೆಲ್ಪ್‍ಲೈನ್

0
20

ಕಲಬುರಗಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶಿಶು ಅಭಿವೃದ್ದಿ ಯೋಜನೆಯ ಸೇಡಂ ತಾಲೂಕಿಗೆ ಒಳಪಡುವ ಗರ್ಭಿಣಿ ಮಹಿಳೆಯರ ವೈದ್ಯಕೀಯ ಸಹಾಯಕ್ಕಾಗಿ ವಾಟ್ಸ್‍ಆಪ್ ಹೆಲ್ಪ್‍ಲೈನ್‍ನ್ನು ಪ್ರಾರಂಭಿಸಲಾಗಿದ್ದು, ವಾಟ್ಸ್‍ಆಪ್ ಹೆಲ್ಪ್‍ಲೈನ್ ನಂಬರ್ 9354954224 ಇರುತ್ತದೆ ಎಂದು ಸೇಡಂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹೆಲ್ಪ್‍ಲೈನ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಗರ್ಭಿಣಿ ಮಹಿಳೆಯರ ತುರ್ತು ವೈದ್ಯಕೀಯ ನೆರವು ಹಾಗೂ ಸಹಕಾರ ನೀಡುವ ದೃಷ್ಟಿಯಿಂದ ರಾಷ್ಟ್ರೀಯ ಮಹಿಳಾ ಆಯೋಗವು ಈ ಹೆಲ್ಪ್‍ಲೈನ್ ಪ್ರಾರಂಭಿಸಿದೆ. ಹೆಚ್ಚಿನ ಮಾಹಿತಿಗಾಗಿ ಸೇಡಂ ನ್ಯೂ ಗಂಜ್ ಏರಿಯಾದಲ್ಲಿರುವ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here