ಕಲಬುರಗಿ: ನಗರದ ಸೂಪರ ಮಾರ್ಕೆಟನಲ್ಲಿರುವ ಅನುರುಪ ಶಾ ಮಕ್ಕಳ ಆಸ್ಪತ್ರೆಯಲ್ಲಿ ಇನ್ನರ್‌ವೀಲ್ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿ, ಜೈನ್ ಸೋಸಿಯಲ್ ಗ್ರುಪ್ ಸಂಗಿನಿ ಹಾಗೂ ಭಾರತೀಯ ಅಕಾಡೆಮಿ ಆಫ್ ಶಿಶುವೈದ್ಯ ಸಂಯುಕ್ತಾಶ್ರಯದಲ್ಲಿ ಸ್ಥನ್ಯ ಪಾನ ಪ್ರಾಮುಖ್ಯತೆಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಖ್ಯಾತ ವೈದ್ಯರಾದ ಡಾ.ಹೇಮಾ ಸಿಂಹಾಸನೆ ಅವರು ಉದ್ಘಾಟಿಸಿ ಮಾತನಾಡುತ್ತಾ ತಾಯಿ ಎದೆ ಹಾಲು ತುಂಬಾ ಪ್ರಮುಖ್ಯ ಇದೆ ಎಂದು ಮಕ್ಕಳ ತಾಯಿಯಂದಿರಿಗೆ ವಿವರಿಸಿ ಹೇಳಿದರು.
ಈ ಸಂದರ್ಭದಲ್ಲಿ ಡಾ. ಅನುರುಪ ಶಾ, ಭಾರತೀಯ ಅಕಾಡೆಮಿ ಆಫ್ ಶಿಶುವೈದ್ಯ ಅಧ್ಯಕ್ಷೆ ಡಾ.ವಾಣಿ ಪಾಟೀಲ, ಇನ್ನರ್‌ವೀಲ್ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿ ಅಧ್ಯಕ್ಷೆ ರಜನಿ ಗುಪ್ತಾ, ಕಾರ್ಯದರ್ಶಿ ಪಲ್ಲವಿ ಮುಕ್ಕಾ, ಜೈನ್ ಸೋಸಿಯಲ್ ಗ್ರುಪ್ ಸಂಗಿನಿ ಕಾರ್ಯದರ್ಶಿ ಪಾರುಲ ಕೋಠಾರಿ, ಸೋನಾಲಿ ಪುನಜಗಿ, ಸಂಧ್ಯಾ ಅನುರುಪ ಶಾ, ರೋಟರಿ ಸಹಾಯಕ ಮಲ್ಲಿಕಾರ್ಜುನ ಬಿರಾದಾರ ಹಾಗೂ ಸದಸ್ಯರು, ಮಗುವಿನ ತಾಯಿಯಂದಿಯರು ಇದ್ದರು.