ಕಲಬುರಗಿಯಲ್ಲಿ ಕಾಂಗ್ರೇಸ್ ಸರ್ಕಾರದಲ್ಲಿ ಸ್ಥಾನ ನೀಡಿರುತ್ತಾರೆ ಈಗ ಬಿಜೆಪಿ ಸರಕಾರ ಸಚಿವರ ಸ್ಥಾನ ಸ್ವಂನ್ಯೆ : ಮಲ್ಲಿಕಾರ್ಜುನ ನಿಲೂರ

0
8

ಕಲಬುರಗಿ:  ಕರ್ನಾಟಕ ರಾಜ್ಯದ ಬಹುದೊಡ್ಡ ಜಿಲ್ಲೆಯಾಗಿರುವ ಕಲಬುರಗಿ ಜಿಲ್ಲೆ ಪದೇ, ಪದೇ ಸಚಿವ ಸ್ಥಾನ ನೀಡದೇ ಅಭೀವೃದ್ಧಿಗೆ ಹಿನ್ನಡೆಯಾಗುತ್ತಿದೆ. ಕಾಂಗ್ರೇಸ್ ಸರ್ಕಾರದಲ್ಲಿ ಜಿಲ್ಲೆಗೆ ಸಿಕ್ಕಿದ ಸಚಿವ ಸ್ಥಾನ ನಾಲ್ಕುನೆ ಸ್ಥಾನ ಇದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಠ ಜಾತಿ ವಿಭಾಗದ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ನಿಲೂರ ಅವರು ಪ್ರಕಟಣೆಯಲ್ಲಿ ಹೇಳಿದರು.

ಈ ಹಿದ್ದಂಥ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎರಡೇರಡು ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿಯನ್ನಾಗಿ ಸ್ವ ಜಿಲ್ಲೆಯವರಿಗೆ ನೇಮಿಸಿ ಹಲವಾರು ಅಭಿವೃದ್ಧಿಯಾಗಲು ಸಹಕರಿಯಾಯಿತು.

Contact Your\'s Advertisement; 9902492681

ಮಾಜಿ ಲೋಕಸಭಾ ಕೇಂದ್ರ ಸಚಿವರು ಹಾಗೂ ರಾಜ್ಯಸಭಾ ವಿಪಕ್ಷ ನಾಯಕರಾದ ಸನ್ಮಾನ್ಯ ಶ್ರೀ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಕೃಪಾಶಿರ್ವಾದಿಂದ ಕೇಂದ್ರಿಯ ವಿಶ್ವವಿದ್ಯಾಲಯ, ಇಎಸ್‌ಐ ಆಸ್ಪತ್ರೆ. ಜಯದೇವ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ, ಅಫಜಲಪೂರ ಹಾಗೂ ನ್ಯೂ ಜೇವರ್ಗಿ ರಸ್ತೆಯ ಮೇಲಸೇತುವೆ, ಕಲಬುರಗಿಯಿಂದ ಬೀದರ ರೈಲು ಸಂಚಾರ  ಹಾಗೂ ಬುದ್ಧ ವಿಹಾರ ಸೇರಿದಂತೆ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಅವರ ಶ್ರದ್ಧೆ ಹಾಗೂ ಕಲಬುರಗಿ ಜಲ್ಲೆಯ ಮೇಲಿನ ಕಾಳಜಿಯಿಂದ ಇಡೀ ದೇಶದಲ್ಲಿ ಕಲಬುರಗಿಯನ್ನು ಗುರತಿಸಿದ ಕೀರ್ತಿ ಖರ್ಗೆ ಸಾಹೇಬರಿಗೆ ಸಲ್ಲುತ್ತದೆ ಅನ್ನೋ ಮಾತು ಯಾರು ತಳ್ಳಿ ಹಾಕುವಂತಿಲ್ಲ.

ಆದರೆ, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದರು ಸಹ ನಮ್ಮ ಕಲಬುರಗಿ ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡದೇ ಸ್ಥಳೀಯ ಬಿಜೆಪಿ ನಾಯಕರ ವ್ಯಕ್ತಿತ್ವ ಎಷ್ಟಿದೇ ಅನ್ನೋದು ಮೇಲ್ನೋಟಕ್ಕೆ ಗೋಚರಿಸುತ್ತದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವುದೇ ನಮ್ಮ ಮುಖ್ಯ ಗುರಿಯೆಂದು ಜಿಲ್ಲೆಯ ಕೆಲ ಮಾಜಿ ಶಾಸಕರುಗಳು ಹಾಗೂ ಪ್ರಸ್ತುತ ಶಾಸಕರು ಸೇರಿದಂತೆ ಅನೇಕ ಮುಖಂಡರು ಖರ್ಗೆ ಅವರನ್ನು ಸೋಲಿಸಿ ಜೈಕಾರ ಹಾಕಿದವರು ಕಲಬುರಗಿಗೆ ಒಂದು ಮಂತ್ರಿ ಸ್ಥಾನವನ್ನು ಪಡೆದುಕೊಳ್ಳುವ ಯೋಗ್ಯತೆಯಿಲ್ಲ ಎಂದು ಬಿಜೆಪಿ ಹೈಕಮಾಂಡ್ ನಡೆಯಿಂದ ಗೊತ್ತಾಗುತ್ತದೆ. ಕಲಬುರಗಿ ಮತದಾರರು ಮಲ್ಲಿಕಾರ್ಜುನ ಖರ್ಗೆ ಅಂಥಾ ಧೀಮಂತ ನಾಯಕರನ್ನು ಸೋಲಿಸಿ ತಮ್ಮ ಕಾಲಮೇಲೆ ತಾವೇ ಕಲ್ಲು ಹಾಕಿಕೊಂಡಂತಾಗಿದೆ. ಅವರ ಅಧಿಕಾರದ ಅವಧಿಯಲ್ಲಿ ಅನುಷ್ಠಾನಗೊಂಡ ಹಲವಾರು ಯೋಜನೆಗಳು ಹಾಗೂ ಅಭಿವೃದ್ಧಿ ಕೆಲಸಗಳನ್ನು ಪ್ರಸ್ತುತ ಸಂಸದರಿಗೆ ಹಾಗೂ ಶಾಸಕರಿಗೆ ಉಳಿಸಿಕೊಳ್ಳಕ್ಕೆ ಆಗದೆ ಬೇರೆಡೆಗೆ ವರ್ಗಾಯಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಹೈಕಮಾಂಡ್ ಅವರಿಗೆ ಪ್ರಶ್ನೆ ಮಾಡಿ ಉಳಿಸಿಕೊಳ್ಳದೇ ಮೌನಕ್ಕೆ ಶರಣಾಗಿದ್ದಾರೆ.

ಮುಂಬರುವ ದಿನಗಳಲ್ಲಿ ಕಲಬುರಗಿ ಜನತೆ ಎಚ್ಚೆತುಕೊಂಡು ಕಳೆದುಕೊಂಡ ಮುತ್ತನ್ನು ಮರಳಿ ಪಡೆಬೇಕಾದರೆ ಮತ್ತೆ ಖರ್ಗೆ ಸಾಹೇಬರನ್ನು ಜಿಲ್ಲೆಯ ಸಂಸದರಾಗಿ ಚುನಾಣೆಯಲ್ಲಿ ಗೆಲ್ಲಿಸುವ ಮೂಲಕ ಇನ್ನಷ್ಟು ಕಲಬುರಗಿ ಜಿಲ್ಲೆಯ ಅಭಿವೃದ್ಧಿ ಹೊಂದಲು ಮುಂದಾಗಬೇಕು. ಕಲಬುರಗಿ ಜಿಲ್ಲೆಯ ಕೆಲ ಬಿಜೆಪಿ ನಾಯಕರುಗಳು ಮಲ್ಲಿಕಾರ್ಜುನ ಖರ್ಗೆ ಅವರ ಟೀಕೆ ಮಾಡುವುದೇ ಒಂದು ಕೆಲಸ ಮಾಡಿಕೊಂಡಿದ್ದಾರೆ. ಅವರ ಟೀಕೆ ಮಾಡಿದರೆ ಹೈಕಮಾಂಡ್ ಶೆಬ್ಬಾಶಗಿರಿ ನೀಡಿ ದೊಡ್ಡ ಮಟ್ಟದ ಸ್ಥಾನ ನೀಡುತ್ತಾರೆಂದು ಹಗಲು ಕನಸಿನಲ್ಲಿ ಕಾಲ ಕಳೆಯುತ್ತಿದ್ದಾರೆ.

ದೇಶ ಕಂಡಂಥ ಧೀಮಂತ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ವ್ಯಕ್ತಿತ್ವವನ್ನು ಟೀಕೆಯಿಂದ ಕುಗ್ಗುವುದಿಲ್ಲ ಅವರ ಮೇಲೆ ಲಕ್ಷಾಂತರ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಆಶಿರ್ವಾದ ಇರುವವರೆಗೂ ಅವರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಾಜಕೀಯವಾಗಿ ಬೆಳಯುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಠ ಜಾತಿ ವಿಭಾಗದ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ನಿಲೂರ ಅವರು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here