“ವಚನ ದರ್ಶನ” ಪ್ರವಚನ ಭಾಗ-3

0
14

ಕಲ್ಲ ನಾಗರ ಕಂಡಡೆ ಹಾಲನೆರೆ0iÉುಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ
ಉಂಬ ಜಂಗಮ ಬಂದಡೆ ನಡೆ0iÉುಂಬರು
ಉಣ್ಣದ ಲಿಂಗಕ್ಕೆ ಬೋನವ ಹಿಡಿ0iÉುಂಬರಯ್ಯಾ
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದಡೆ ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ

ವಚನಗಳು ನಮ್ಮ ಅಂತರಂಗದ ದರ್ಶನ ಮಾಡಿಸುತ್ತವೆ. ಇತ್ತೀಚಿನ ದಿನಮಾನಗಳಲ್ಲಿ ಹೊರಗಿನ ಸಂಶೋಧನೆ ವೇಗವಾಗಿ ಬೆಳೆಯುತ್ತಿದೆ. ಆದರೆ ನಾವೆಲ್ಲರೂ ಒಳಗಿನ ಸಂಶೋಧನೆಯ ಕಡೆ ಗಮನ ಹರಿಸುತ್ತಿಲ್ಲ. ಹಾಗಾಗಿಯೇ ನಮ್ಮ ಮಾನಸಿಕ ನೆಮ್ಮದಿ, ಶಾಂತಿ, ಸಮಾಧಾನ, ಪ್ರೀತಿ, ವಿಶ್ವಾಸ ಮಾಯವಾಗುತ್ತಿದೆ. ಶರಣರು ಬಹಿರಂಗ ಶುದ್ಧಿಯ ಜೊತೆಗೆ ಅಂತರಂಗ ಶುದ್ಧಿಯು ಹೇಳಿದರು.

Contact Your\'s Advertisement; 9902492681

ಕಾಶ್ಮೀರದ ಅರಸನಾಗಿರುವ ಮಹಾದೇವ ಭೂಪಾಲ ಕಲ್ಯಾಣಕ್ಕೆ ಬಂದಿದ್ದು ಅಂತರಂಗದ ಶೋಧನೆಗಾಗಿ. ಸಿದ್ಧಾರ್ಥ ರಾಜಪುತ್ರನಾಗಿದ್ದ. ಸುಖ, ಸಂಪತ್ತು, ಐಶ್ವರ್ಯ ಎಲ್ಲವೂ ಅವನಿಲ್ಲಿತ್ತು. ಆದರೂ ಅವನು ಹೆಂಡತಿ, ಮಕ್ಕಳು ಬಿಟ್ಟು ಮನೆ ತೊರೆದ. ಕಾರಣ ಅವನಿಗೆ ಅಂತರಂಗದ ಶೋಧನೆ ಮುಖ್ಯವೆನಿಸಿತು. ಅಂತರಂಗ ಶೋಧನೆಯಿಂದ ಸಿದ್ಧಾರ್ಥ ಬುದ್ಧನಾದ. ನಾವು ನರಸ್ವರೂಪ ಹೋಗಿ ಹರಸ್ವರೂಪ ಆಗಬೇಕಾದರೆ, ಜೀವಭಾವವನ್ನು ಕಳೆದು ಶಿವಭಾವವನ್ನು ಪಡೆಯಬೇಕಾದರೆ ಅಂತರಂಗದ ಶೋಧನೆಯಲ್ಲಿ, ಸಾಧನೆಯಲ್ಲಿ ತೊಡಬೇಕು. ಆವಾಗ ನಾವು ಎಲ್ಲರನ್ನು ಪ್ರೀತಿಸಲು ಸಾಧ್ಯವಾಗುತ್ತದೆ.

ಶರಣರ ವಚನಗಳು ಬರೀ ಹೇಳಲಿಕ್ಕೆ, ಹಾಡಲಿಕ್ಕೆ, ನಮ್ಮ ಪಾಂಡಿತ್ಯ ಪ್ರದರ್ಶನಕ್ಕೆ ಸೀಮಿತವಲ್ಲ. ನಿಜಾರ್ಥದಲ್ಲಿ ನಮ್ಮ ಬದುಕು ವಚನದ ಬದುಕು ಆಗಬೇಕು. ಶರಣರು ವಚನಗಳಲ್ಲಿ ಹೇಳಿರುವ ತತ್ವಾದರ್ಶನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಶರಣರ ಲಕ್ಷಣ.

ಮೇಲೆ ಹೇಳಿರುವ ಬಸವಣ್ಣನವರ ವಚನವನ್ನು ನಮ್ಮೆಲ್ಲರಿಗೆ ಪರಿಚಯವಿದೆ. ನಾವೆಲ್ಲರೂ ಅನೇಕ ಸಲ ಈ ವಚನ ಹೇಳುತ್ತೇವೆ, ಹಾಡುತ್ತೇವೆ. ಅಕ್ಕನಬಳಗದವರು ಅದನ್ನು ಭಜನೆಯಲ್ಲಿ ದಿನಾಲು ಸೊಗಸಾಗಿ ಗಾಯನ ಮಾಡುತ್ತಾರೆ. ಆದರೆ ನಾಗರಪಂಚಮಿ ಹಬ್ಬಕ್ಕೆ ಮತ್ತೆ ಕಲ್ಲನಾಗರಕ್ಕೆ ಹಾಲೇರುದು ಬರುತ್ತಾರೆ. ಅದೇ ಸಂದರ್ಭದಲ್ಲಿ ಜೀವಂತ ಹಾವು ಎದುರಿಗೆ ಬಂದಾಗ ಅದನ್ನು ಕೊಲ್ಲುತ್ತಾರೆ.

ನಮ್ಮ ಮನೆ ಮುಂದೆ ಒಬ್ಬ ಬಡವ ಹಸಿದು ಬಂದರೆ ಅವನಿಗೆ ತುತ್ತ ಅನ್ನವನ್ನು ನೀಡುವುದಿಲ್ಲ. ಮುಂದೆ ಹೋಗೆಂದು ಅವನಿಗೆ ತಿರಸ್ಕರಿಸಿ. ಉಣ್ಣದ ಲಿಂಗಕ್ಕೆ ನೈವೇದ್ಯವನ್ನು ಮಾಡಿಕೊಂಡು ಗುಡಿ-ಗುಂಡಾರಕ್ಕೆ ಹೋಗಿ ನೈವೇದ್ಯ ಇಟ್ಟು ಬರುತ್ತಾರೆ. ಇದು ವಿಪಾರ್ಯಸವಲ್ಲವೆ. ಶರಣರು ಇಂತಹ ವ್ಯರ್ಥ ಆಚರಣೆಗಳನ್ನು ಖಂಡಿಸುತ್ತಾರೆ. ಕಲ್ಲನಾಗರಕ್ಕೆ ಹಾಲು ಎರೆಯುವುದಕ್ಕಿಂತಲೂ ರೋಗಿಗಳಿಗೆ ಅನಾಥ ಮಕ್ಕಳಿಗೆ ಹಾಲನ್ನು ಕುಡಿಸುವ ಮೂಲಕ ನಾಗರಪಂಚಮಿ ಹಬ್ಬವನ್ನು ನಾವು ಹಾಲು ಕುಡಿಯುವ ಹಬ್ಬವನ್ನಾಗಿ ಆಚರಿಸಬೇಕಾಗಿದೆ.

ನಮ್ಮ ಮನೆಗೆ ಜಂಗಮರು ಶರಣರು ಬರುತ್ತಾರೆ. ಅವರಿಗೆ ಉದಾಸೀನ ಮಾಡಿ ನಾವು ಸ್ಥಾವರಕ್ಕೆ ಮಹತ್ವ ನೀಡುತ್ತೇವೆ. ಶರಣರು ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ಹೇಳುತ್ತಾರೆ. ನಾವು ಚೈತನ್ಯನಾತ್ಮವಾಗಿರುವ ದೀನ-ದಲಿತ ಅಸಹಾಯಕರ, ಅನಾಥರ ಕಣ್ಣೀರು ಒರೆಸುವ ಮೂಲಕ ಜಂಗಮ ತತ್ವಕ್ಕೆ ಮಹತ್ವ ನೀಡಬೇಕು. ಇದುವೇ ಶರಣರಿಗೆ ತೋರುವ ಗೌರವ ಆಗುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here