ಮುತ್ತಪ್ಪ ರೈ ಸವಿನೆನಪಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಯಕರ್ನಾಟಕ ವಿದ್ಯಾರ್ಥಿ ವೇತನ

0
7

ಸುರಪುರ: ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕರಾದ ಎನ್.ಮುತ್ತಪ್ಪ ರೈ ಅವರ ಸವಿನೆನಪಿನಲ್ಲಿ ಅವರ ಸುಪುತ್ರ ರಿಕ್ಕಿ ರೈ ಅವರು ರಾಜ್ಯದಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವುದು ತುಂಬಾ ಶ್ಲಾಘನಿಯ ಸೇವೆಯಾಗಿದೆ ಎಂದು ಸರಕಾರಿ ಬಾಲಕರ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರ ಮೆಚ್ಚುಗೆ ವ್ಯಕ್ತಪಡಿಸಿದರು.

ಜಯಕರ್ನಾಟಕ ಸಂಘಟನೆಯಿಂದ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗು ಕೊರೊನಾ ವಾರಿಯರ್ಸ್‍ಗಳ ಸನ್ಮಾನ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ,ರಾಜ್ಯದಲ್ಲಿನ ಸಾವಿರಾರು ವಿದ್ಯಾರ್ಥಿಗಳು ಇಂದು ತಂದೆ ತಾಯಿಯನ್ನು ಕಳೆದುಕೊಂಡು ತಬ್ಬಲಿಗಳಾಗಿರುತ್ತಾರೆ,ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿದ್ಯಾರ್ಥಿ ವೇತನ ನೀಡುವ ಸೇವೆ ಅಮೋಘ ಮತ್ತು ಇತರೆ ಸಂಘಟನೆಗಳಿಗೂ ಮಾದರಿಯಾಗಿದೆ ಎಂದರು.ಅಲ್ಲದೆ ಮುತ್ತಪ್ಪ ರೈ ಅವರ ಸುಪುತ್ರ ರಿಕ್ಕಿ ರೈ ಮತ್ತು ಜಯಕರ್ನಾಟಕ ಸಂಘದ ರಾಜ್ಯಾಧ್ಯಕ್ಷ ಬಿ.ಎನ್.ಜಗದೀಶ ಅವರು ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಂಘಟನೆಯ ತಾಲೂಕು ಅಧ್ಯಕ್ಷ ರವಿನಾಯಕ ಬೈರಿಮಡ್ಡಿ ಮಾತನಾಡಿ,ಜಯಕರ್ನಾಟಕ ಸಂಘಟನೆ ಬೇರೆ ಸಂಘಟನೆಗಳಿಗಿಂತಲು ಭಿನ್ನವಾಗಿದೆ,ಇದು ಕೇವಲ ಹೋರಾಟ ಮಾತ್ರವಲ್ಲದೆ ಸಮಾಜದಲ್ಲಿನ ಜನರ ಕಷ್ಟಕ್ಕೆ ನೆರವಾಗುವ ಮೂಲಕ ಜನರ ಮನದಲ್ಲಿ ಉಳಿದುಕೊಂಡಿದೆ.ಅದರಂತೆ ಈಗ ನಮ್ಮ ಸಂಘದ ಸಂಸ್ಥಾಪಕರಾದ ಎನ್.ಮುತ್ತಪ್ಪ ರೈ ಅವರ ಸವಿನೆನಪಿನಲ್ಲಿ ಅವರ ಸುಪುತ್ರ ರಿಕ್ಕಿ ರೈ ಅವರು ನಮ್ಮ ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರಿಗೆ ತಲಾ 10 ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನ ನೀಡುವ ಮೂಲಕ ಅವರ ಓದಿಗೆ ನೆರವಾಗಿದ್ದಾರೆ.ಅದಕ್ಕಾಗಿ ರಿಕ್ಕಿ ರೈ ಅವರಿಗು ಮತ್ತು ರಾಜ್ಯಾಧ್ಯಕ್ಷರಾದ ಬಿ.ಎನ್.ಜಗದೀಶ ಅವರಿಗೆ ತಾಲೂಕು ಘಟಕ ಧನ್ಯವಾದ ಅರ್ಪಿಸುತ್ತದೆ ಎಂದರು.

ನಂತರ 10ನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿದ ಹಾಗು ಕಳೆದ ಕೆಲ ದಿನಗಳ ಹಿಂದೆ ತಂದೆಯ ಸಾವಿನಲ್ಲೂ ಪರೀಕ್ಷೆ ಬರೆದು ವಿದ್ಯೆಯ ಮಹತ್ವ ತಿಳಿಸಿದ ತಾಲೂಕಿನ ನಗನೂರು ಗ್ರಾಮದ ವಿದ್ಯಾರ್ಥಿನಿ ದೀಪಿಕಾ ಎನ್.ದೇಶಪಾಂಡೆ ಹಾಗು ತಂದೆಯ ತಾಯಿಯ ನಿಧನದಿಂದ ತೊಂದರೆಗೊಳಗಾಗಿರುವ ಮತ್ತೋರ್ವ ವಿದ್ಯಾರ್ಥಿನಿ ಭೀಮಬಾಯಿ ಸುರಪುರ ಇಬ್ಬರಿಗೂ ತಲಾ 10 ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಅಲ್ಲದೆ ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಆರೋಗ್ಯ ಸೇವೆ ನೀಡಿದ ವೈದ್ಯರಾದ ಡಾ:ಓಂಪ್ರಕಾಶ ಅಂಬುರೆ, ಡಾ:ಹರ್ಷವರ್ಧನ ರಫಗಾರ,ಡಾ:ರಂಗನಗೌಡ,ಡಾ:ಶೀಮಾ ಬಿರಾದಾರ,ಡಾ:ಸಹನಾ ಸಂಧ್ಯಾ, ಹಾಗು ಆಸ್ಪತ್ರೆಯಲ್ಲಿನ ಇತರೆ ನರ್ಸ್ ಮತ್ತು ತಾಂತ್ರಿಕ ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ನಂತರ ಸಂಘಟನೆಯ ವಿವಿಧ ಪ್ರದಾಧಿಕಾರಿಗಳ ಪದಗ್ರಹಣ ನಡೆಸಲಾಯಿತು.

ಕಾರ್ಯಕ್ರಮದ ವೇದಿಕೆ ಮೇಲೆ ಮುಖಂಡರಾದ ಶರಣು ನಾಯಕ ಬೈರಿಮಡ್ಡಿ,ಭೀಮರಾಯ ಸಿಂಧಗೇರಿ, ನಟ ರಾಘವೇಂದ್ರ ಮಾಚಗುಂಡಾಳ,ಜಾನಕಿದೇವಿ ಪ್ರೌಢ ಶಾಲೆಯ ಮುಖ್ಯಗುರು ಹಣಮಂತ್ರಾಯ ಚಂದಲಾಪುರ,ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಶರಣು ಬೈರಿಮಡ್ಡಿ,ದೇವದುರ್ಗ ತಾಲೂಕು ಪ್ರ.ಕಾರ್ಯದರ್ಶಿ ಯಲಗೌಡ ಇರಟಗೇರಾ,ಶಿಕ್ಷಣ ಪ್ರೇಮಿ ಶಿವರಾಜ ನಾಯಕ ಇದ್ದರು.ಹಣಮಂತ್ರಾಯ ಶಖಾಪುರ ನಿರೂಪಿಸಿದರು,ಮೌನೇಶ ದಳಪತಿ ಸ್ವಾಗತಿಸಿದರು,ಯಲ್ಲಪ್ಪ ಕಲ್ಲೋಡಿ ವಂದಿಸಿದರು.ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಜಯಕರ್ನಾಟಕ ಸಂಘಟನೆಯ ಮುಖಂಡರು ಹಾಗು ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here