ಯುವಜನರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ವಿರೋಧಿಸಿ ಎಐಡಿವಾಯ್‍ಓ ಪ್ರತಿಭಟನೆ

0
37

ಶಹಾಬಾದ: ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಉದ್ಯೋಗಕ್ಕಾಗಿ ಪ್ರತಿಭಟನೆ ನಡೆಸಿದ ಯುವಜನರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ವಿರೋಧಿಸಿ ಮತ್ತು ಬಂಧಿತ ಪ್ರತಿಭಟನಾ ನಿರತರನ್ನು ಬಿಡುಗಡೆಗೆ ಒತ್ತಾಯಿಸಿ ನಗರದ ಎಐಡಿವಾಯ್‍ಓ ಸಂಘಟನೆ ಗುರುವಾರ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ ಮಲ್ಲಿಕಾರ್ಜುನ ರೆಡ್ಡಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನಾಕಾರರು ಮಾತನಾಡಿ, ಮಧ್ಯಪ್ರದೇಶದಲ್ಲಿ, ನಿರುದ್ಯೋಗ ವಿರೋಧಿ ಹೋರಾಟ ಸಮಿತಿ ಮತ್ತು ಎಐಡಿವೈಒ ಸಂಘಟನೆಗಳು ಕಳೆದ ಹಲವು ವರ್ಷಗಳಿಂದ ಉದ್ಯೋಗಕ್ಕಾಗಿ ಚಳುವಳಿಯನ್ನು ಬೆಳೆಸುತ್ತಿವೆ. ಅದರ ಒಂದು ಭಾಗವಾಗಿ, ಭೋಪಾಲ್‍ನ ರೋಷನ್‍ಪುರ ಜಂಕ್ಷನ್‍ನಲ್ಲಿ ನಿನ್ನೆದಿನ ರಾಜ್ಯ ಮಟ್ಟದ ಪ್ರತಿಭಟನಾ ಪ್ರದರ್ಶನವನ್ನು ಸಂಘಟಿಸಲಾಗಿತ್ತು. ಪ್ರತಿಭಟನಾನಿರತರ ಮೇಲೆ ಅಲ್ಲಿನ ಪೊಲೀಸರು ಅನಾಗರಿಕವಾಗಿ ಕ್ರೂರ ಲಾಠಿ ಚಾರ್ಜ್ ಮಾಡಿದ್ದಾರೆ.

Contact Your\'s Advertisement; 9902492681

ಎಐಡಿವೈಒನ ರಾಜ್ಯಾಧ್ಯಕ್ಷರಾದ ಲೋಕೇಶ್ ಶರ್ಮಾ ಮತ್ತು ಉಪಾಧ್ಯಕ್ಷರಾದ ವಿಜಯ್ ಶರ್ಮಾ ಮತ್ತು ನಿರುದ್ಯೋಗ ವಿರೋಧಿ ಹೋರಾಟ ಸಮಿತಿಯ ಕಾರ್ಯದರ್ಶಿ ಶ್ರೀ ಪ್ರಮೋದ್ ನಾಮದೇವ್ ಅವರನ್ನು ಥಳಿಸಿ ಬಂಧಿಸಲಾಗಿದೆ. ಗೋಪಾಲ್ ಪ್ರಜಾಪತಿ, ದಿನೇಶ್ ಠಾಕೂರ್, ಪಾರುಲ್ ಶರ್ಮಾ, ಮನೋಜ್ ರಜಕ್, ಆರತಿ ಶರ್ಮಾ ಮತ್ತಿತರರನ್ನು ಬಂಧಿಸಿದ್ದಾರೆ.

ಸಲೀಂ ಖಾನ್ ಸೇರಿದಂತೆ ನೂರಾರು ಯುವಕರು ಲಾಠಿಚಾರ್ಜ್‍ನಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಸಾವಿರಾರು ಯುವಕರು ಗಾಯಗೊಂಡಿದ್ದಾರೆ. ಬಂಧಿತರನ್ನು ದಿನವಿಡೀ ಅಲೆದಾಡಿಸಿ ನಗರದಿಂದ 30-40 ಕಿಲೋಮೀಟರ್ ದೂರಕ್ಕೆ ಕರೆದೊಯ್ಯಲಾಗಿದೆ. ಅನೇಕ ಬಂಧಿತ ಯುವಕರನ್ನು ಇಡೀ ದಿನ ಭೋಪಾಲ್‍ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೂರಿಸಲಾಗಿದೆ. ಅವರಲ್ಲಿ ಕೆಲವರ ಮೇಲೆ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಲಾಗಿದೆ. ಪೊಲೀಸರ ಈ ದೌರ್ಜನ್ಯವು ರಾಜ್ಯ ಮತ್ತು ದೇಶದ ಎಲ್ಲ ಯುವಕರಲ್ಲಿ ಸಾಕಷ್ಟು ಆಕ್ರೋಶವನ್ನುಂಟುಮಾಡಿದೆ.

ಮಧ್ಯಪ್ರದೇಶದಲ್ಲಿ ಕಳೆದ 4 ವರ್ಷಗಳಿಂದ ಯಾವುದೇ ನೇಮಕಾತಿ ನಡೆದಿಲ್ಲ. ಕೆಲವು ನೇಮಕಾತಿ ಪರೀಕ್ಷೆಗಳ ಫಲಿತಾಂಶಗಳನ್ನು ಘೋಷಿಸಿದ ನಂತರವೂ ಅವರಿಗೆ ನೇಮಕಾತಿ ಆದೇಶವನ್ನು ನೀಡಿಲ್ಲ. ಅವರಲ್ಲಿ ಹಲವರು ಇನ್ನು ಕೆಲವೇ ದಿನಗಳಲ್ಲಿ ತಮ್ಮ ವಯೋಮಿತಿ ಮೀರುವ ಆತಂಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ, ನಿರುದ್ಯೋಗ ವಿರೋಧಿ ಹೋರಾಟ ಸಮಿತಿ ಮತ್ತು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೇಸೇಷನ್ ನೇತೃತ್ವದಲ್ಲಿ, ಇಡೀ ರಾಜ್ಯದ ಯುವಜನರು ನಿನ್ನೆ ಭೋಪಾಲ್‍ನಲ್ಲಿ ರಾಜ್ಯ ಮಟ್ಟದ ಪ್ರತಿಭಟನಾ ಪ್ರದರ್ಶನವನ್ನು ಸಂಘಟಿಸಿದ್ದರು.

ಮೆರವಣಿಗೆ ಸಾಗುತ್ತಿರುವಾಗ, ಪೊಲೀಸರು ಅವರ ಮೇಲೆ ಅನಾಗರಿಕವಾಗಿ ಲಾಠಿ ಪ್ರಹಾರ ನಡೆಸಿದರು. ಆದ್ದರಿಂದ ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿ ಮತ್ತು ಂIಆಙಔ ಸಂಘಟನೆಯ ವತಿಯಿಂದ ಪೊಲೀಸರ ಈ ಹೇಯ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತಾ, ಇಂದು ಆಗಸ್ಟ್ 19, 2021ರಂದು ದೇಶದಾದ್ಯಂತ ಅನೇಕ ಜಿಲ್ಲೆಗಳಲ್ಲಿ ಈ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ.

ಈ ಲಾಠಿ ಚಾರ್ಜ್‍ನಲ್ಲಿ ಗಾಯಗೊಂಡ, ನಿರುದ್ಯೋಗ ವಿರೋಧಿ ಹೋರಾಟ ಸಮಿತಿ ಮತ್ತು ಎಐಡಿವೈಒನ ಎಲ್ಲ ಯುವಕರಿಗೆ ವೈದ್ಯಕೀಯ ಚಿಕಿತ್ಸೆ ನೀಡಬೇಕು ಮತ್ತು ಬಂಧಿತ ಯುವಕರನ್ನು ಬೇಷರತ್ತಾಗಿ ಬಿಡುಗಡೆ ಮಾಡಲು ತಾವು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಮ್ಮಲ್ಲಿ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಐಡಿವಾಯ್‍ಓ ಅಧ್ಯಕ್ಷ ಸಿದ್ದು ಚೌಧರಿ,ಕಾರ್ಯದರ್ಶಿ ಪ್ರವೀಣ ಬಣವೀಕರ್, ತಿಮ್ಮಯ್ಯ ಮಾನೆ ,ನೀಲಕಂಠ ಎಮ್ ಹುಲಿ , ಹಣಮಂತ ಟೈಗರ, ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here