ಮಲ್ಲಿಕಾರ್ಜುನ ಪಂಡಿತಾರಾಧ್ಯರು: ಶರಣ ಚರಿತೆ

0
11

ತೆಲುಗು ಕವಿ ಪಾಲ್ಕುರಿಕೆ ಸೋಮನಾಥ ಬರೆದ “ಮಲ್ಲಿಕಾರ್ಜುನ ಪಂಡಿತಾರಾಧ್ಯ ಚರಿತೆ” ಪಂಡಿತಾರಾಧ್ಯರ ಚರಿತೆಯ ಜೊತೆಗೆ 12ನೇ ಶತಮನದ ಶರಣರ ಚರಿತೆ ಕೂಡ ಹೇಳುತ್ತದೆ. ವೈದಿಕ ಕುಟುಂಬದಲ್ಲಿ ಜನಿಸಿದ ಪಂಡಿತಾಧ್ಯರಿಗೆ ಶೈವ ಧರ್ಮದ ವೀರಶೈವ ಶಾಖೆ ಬಹಳ ಪ್ರಬಲವಾಗಿ ಸೆಳೆಯಿತು.

ಹೀಗಾಗಿ ತಮ್ಮ ಶಿಷ್ಯರೊಂದಿಗೆ ವ್ಯಾಪಕ ಪ್ರಚಾರ ಕೂಡ ಮಾಡಿದರು. ಇವರು ರಚಿಸಿದ 16 ವಚನಗಳು ಲಭ್ಯವಾಗಿವೆ. “ಸೀಮೆ ಸಾಯುಜ್ಯವ ಮೀರಿದಾತ ಗುರುವಯ್ಯ, ನಾಮ ನಿರ್ನಾಮವಾದಾತ ಗುರುವಯ್ಯ….ಅಬೇಧ್ಯ ಗುರು ಶ್ರೀ ಬಸವಣ್ಣ” ಎಂಬ ಅವರ ಈ ವಚನವು ಬಸವತತ್ವ ಪ್ರಭಾವ ಅವರ ಮೇಲಾಗಿತ್ತು ಎಂಬುದನ್ನು ತಿಳಿಸಿಕೊಡುತ್ತದೆ.

Contact Your\'s Advertisement; 9902492681

ತೆಲಂಗಾಣ ಪ್ರದೇಶದ ಮಲ್ಲಿಕಾರ್ಜುನ ಪಂಡಿತಾರಾಧ್ಯರ ಹುಟ್ಟೂರು ಗೋದಾವರಿ ಜಿಲ್ಲೆಯ ದ್ರಾಕ್ಷಾರಾಮ. (ಕ್ರಿ.ಶ.1120-1180) ತಾಯಿ ಗೌರಾಂಬೆ, ತಂದೆ ಭೀಮನ ಪಂಡಿತ. ಕೋಟಿಪಲ್ಲಿ ಇವರ ಆರಾಧ್ಯದೇವ, ದೀಕ್ಷಾಗುರು. ದೋನಮಾರ್ಯ/ದೋನಮಯ್ಯ ಇವರ ಪರಮ ಶಿಷ್ಯ. ಅಮಗುಂಡದಲ್ಲೂ ಅವರು ಇರುತ್ತಿದ್ದರು.

ಹೀಗಾಗಿ ಎರಡೂ ಕಡೆ ಅವರ ಶಿಷ್ಯ ಬಳಗ ಬೆಳೆಯಿತು ಎಂಬ ಮಾಹಿತಿಗಳು ದೊರೆಯುತ್ತವೆ. ಇವರ ತಂದೆ ದ್ರಾಕ್ಷಾರಾಮ ಭೀಮೇಶ್ವರ ಲಿಂಗ ದೇವಾಲಯದ ಪೂಜೆ ಮಾಡುತ್ತಿದ್ದರು. ಇವರಿಗೆ ಮಕ್ಕಳಾಗದ್ದರಿಂದ ಶ್ರೀಶೈಲ ಮಲ್ಲಿಕಾರ್ಜುನನಿಗೆ ಹರಕೆ ಹೊತ್ತರು. ಮಗ ಹುಟ್ಟಿದಾಗ ಮಲ್ಲಿಕಾರ್ಜುನ ಎಂದು ಹೆಸರಿಟ್ಟರು ಎಂದು ಹೇಳಾಗುತ್ತದೆ.

ಮಲ್ಲಿಕಾರ್ಜುನ ಪಂಡಿರಾಧ್ಯರ ಪ್ರಮುಖ ಶಿಷ್ಯರಲ್ಲಿ ದೋನಮಯ್ಯ, ಗುರುಭಕ್ತ, ದೇವಯ್ಯ, ರೇಚಯ್ಯ, ಮಹಾದೇವಯ್ಯ ಮುಂತಾದವರು. ಇವರೆಲ್ಲರೂ ನಮ್ಮ ಶಿವಶರಣರು ಎಂಬುದನ್ನು ಗಮನಿಸಬೇಕು.

ಅಮರಗೊಂಡದಲ್ಲಿ ಇವರ ಶಿಷ್ಯರು ಬಸವಣ್ಣವರ ವಚನಗಳನ್ನು ಹಾಡುವುದು, ಪಠಿಸುವುದು ಮಾಡುತ್ತಿದ್ದರು. ಶಿಷ್ಯರಿಂದ ಬಸವಣ್ಣನವರ ವಿಚಾರಧಾರೆ ಅರಿತುಕೊಂಡ ಮಲ್ಲಿಕಾರ್ಜುನ ಪಂಡಿತಾರಾಧ್ಯರು, ತಾವೂ ಸಹ ವಚನಗಳನ್ನು ಓದಲು ಆರಂಭಿಸಿದರು ಮಾತ್ರವಲ್ಲ ಕನ್ನಡದಲ್ಲಿ ಕೆಲವು ಕೃತಿಗಳನ್ನು ರಚಿಸಿದರು.

ತಾವು ರಚಿಸಿದ “ಶಿವಾಧಿಕ್ಯ” ಹಾಗೂ “ಬಸವ ಸ್ತೋತ್ರ” ಕೃತಿಗಳನ್ನು ತಮ್ಮ ಶಿಷ್ಯರ ಮೂಲಕ ಬಸವಣ್ಣನವರಿಗೆ ತಲುಪಿಸುತ್ತಿದ್ದರು. ಬಸವಣ್ಣನವರು ಇವುಗಳನ್ನು ಓದಿ ತಮ್ಮ ಅಭಿಪ್ರಾಯ, ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದರು. ಹೀಗೆ ಇವರಿಬ್ಬರ ಮಧ್ಯೆ ವೈಚಾರಿಕ ಸಂಬಂಧ, ಗೌರವ ಬೆಳೆದಿತ್ತು ಎಂಬುದು “ಬಸವ ಪುರಾಣ”ದಿಂದ ತಿಳಿದುಬರುತ್ತದೆ.

ಪಂಡಿತಾರಾಧ್ಯರು ತೆಲುಗು, ಕನ್ನಡ, ಸಂಸ್ಕøತ (ತ್ರಿಭಾಷಾ ಪಂಡಿತ) ಭಾಷೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದರು. ಹಿಂದೆ ಆಗಿ ಹೋದ ಶಿವಭಕ್ತರ ಜೊತೆ ಶರಣರು ಜೀವಂತ ಇದ್ದಾಗಲೇ ಅವರ ಹೆಸರುಗಳನ್ನು ಪಟ್ಟಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. 239 ಶಿವಶರಣರ, 35 ಶಿವಶರಣೆಯರ ಹೆಸರುಗಳನ್ನು “ಗಣಸಹಸ್ರ ನಾಮಾವಳಿ”ಯಲ್ಲಿ ಸೇರಿಸಿದ್ದಾರೆ.

ಬಸವಣ್ಣನವರ ಕೀರ್ತಿವಾರ್ತೆ ಕೇಳಿ ತಿಳಿದಿದ್ದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ತಮ್ಮ ಶಿಷ್ಯರೊಂದಿಗೆ ಬಸವಣ್ಣನವರನ್ನು ಕಾಣಲು ಕಲ್ಯಾಣದೆಡೆಗೆ ಹೊರಟಿದ್ದರು. ಪಾನಗಲ್‍ವರೆಗೆ ಬಂದು ವೆಲ್ಲಟೂರುನಲ್ಲಿ ಲಿಂಗೈಕ್ಯರಾಗುತ್ತಾರೆ. ಒಂದು ವೇಳೆ ಇವರಿಬ್ಬರ ಭೇಟಿಯಾಗಿದ್ದರೆ ಮಹಾರಾಷ್ಟ್ರದಲ್ಲಿ ಇಂದು ಕಾಣುವ ಶರಣ ಸಂಸ್ಕøತಿಯ ವಾತಾವರಣ, ತೆಲಂಗಾಣ-ಆಂಧ್ರಪ್ರದೇಶದಲ್ಲೂ ಕಾಣಬಹುದಿತ್ತು.

ಬಸವಾದಿ ಶರಣರ ವಚನ ರಚನೆಯನ್ನು ಸಂಗ್ರಹಿಸುವ ಮೂಲಕ ಶರಣರ ಚರಿತ್ರೆ ಕಟ್ಟಿಕೊಟ್ಟ ಡಾ. ಫ.ಗು. ಹಳಕಟ್ಟಿಯವರು ತಮ್ಮ “ಅಮರಗಣಾಧೀಶ್ವರರ ಚರಿತ್ರೆಗಳು” (1954) ಕೃತಿಗೆ ಮಲ್ಲಿಕಾರ್ಜುನ ಪಂಡಿತಾರಾಧ್ಯರ ಗಣಸಹಸ್ರ ನಾಮಾವಳಿಯನ್ನೇ ಆಧಾರವಾಗಿಟ್ಟುಕೊಂಡಿರುವುದನ್ನು ನಾವು ಕಾಣಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here