ಭಾರಸಾರ ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ: ಕಿಶನರಾವ ರಂಗದಾಳ

0
39

ಶಹಾಬಾದ: ಗ್ರಾಮೀಣ ಭಾಗದಲ್ಲಿ ಭಾರಸಾರ ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸರಕಾರದ ಯೋಜನೆ ಸವಲತ್ತುಗಳನ್ನು ತೆಗೆದುಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ಭಾವಸಾರ ಸಮಾಜದ ಜಿಲ್ಲಾ ಅಧ್ಯಕ್ಷ ಕಿಶನರಾವ ರಂಗದಾಳ ಹೇಳಿದರು.

ಅವರು ನಗರದ ಶ್ರೀಜಗದಂಬಾ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಕಾರ್ಮಿಕ ಇಲಾಖೆಯಿಂದ ವಿವಿಧ ಸವಲತ್ತುಗಳನ್ನು ಅಸಂಘಟಿತ ವಲಯಕ್ಕೆ ನೀಡಲಾಗಿದೆ ಇದರ ಸದಪಯೋಗ ಪಡೆಯಬೇಕು. ಈಗಾಗಲೇ ಜಿಲ್ಲೆಯಲ್ಲಿ ಸುಮಾರು 800 ಜನ ಟೇಲರಿಂಗ್ ಮಾಡುವವರನ್ನು ಗುರುತಿಸಲಾಗಿದೆ. ಕಾರ್ಮಿಕ ಇಲಾಖೆಯಿಂದ ಪ್ರತಿಯೊಬ್ಬ ಅಸಂಘಟಿತ ಕಾರ್ಮಿಕ ವಿಶೇಷವಾಗಿ ಗ್ರಾಮೀಣ ಭಾಗದ ಟೇಲರ ಅವರಿಗೆ 2000 ರೂಪಾಯಿ ಸಹಾಯಧನ ಮಂಜೂರು ಮಾಡಿ ನೇರವಾಗಿ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಜಿಲ್ಲಾ ಸಂಘಟನೆಗೆ ತಮ್ಮ ಸಹಕಾರ ನೀಡಿದರೆ ಮತ್ತಷ್ಟು ಸರಕಾರದ ಯೋಜನೆ ನಿಮ್ಮ ಮನೆ ಬಾಗಿಲಿಗೆ ತರುವುದಾಗಿ ಹೇಳಿದರು.

ಭಾವಸಾರ ಸಮಾಜದ ಮುಖಂಡ ರಮೇಶ ಮಹೇಂದ್ರಕರ, ಭಾವಸಾರ ಜಿಲ್ಲಾ ಮಹಿಳಾ ಅಧ್ಯಕ್ಷೆ ಪ್ರಭಾವತಿ, ಸುನೀಲ ಭಗಾಡೆ, ಜಗದಂಬಾ ದೇವಸ್ಥಾನದ ಉಪಾಧ್ಯಕ್ಷ ದಿಲೀಪ ಯಲಶೆಟ್ಟಿ, ಅಂಬ್ರೇಶ ಫುಲಸೆ, ವೇದಿಕೆಯಲ್ಲಿದರು. ಇದೇ ಸಂದರ್ಭದಲ್ಲಿ ಆಹಾರದ ಕಿಟ್ ವಿತರಣೆ ಮಾಡಿದರು.

ದಿಗಂಬರ ಪಂತಂಗೆ, ಸಂತೋಷ ಪುಲಸೆ, ಸಚಿನ ಹಂಚಾಟಿ, ಭಾವಸಾರ ಸಮಾಜದ ಮುಖಂಡರು ಇತರರು ಪಾಲ್ಗೊಂಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here