ಅಣ್ಣಾ ತಮ್ಮದೇರಾ ಪ್ರತಿರೂಪ ರಕ್ಷಾ ಬಂಧನ

0
16

ರಕ್ಷಾ ಬಂಧನ ಇದರ ಅರ್ಥವೆಂದರೆ

ರ -ರಕ್ಷಣೆ
ಕ್ಷ – ಕ್ಷಮೆ
ಬ – ಭದ್ರತೆ
ದ – ದಯೆ
ನ – ನಗು
ಸಹೋದರಿಯರಿಗೆ ಸುರಕ್ಷತೆ ಸಮಾಜವನ್ನು ಸೃಷ್ಟಿಸಲು ಮತ್ತು ಇತರರಿಗೂ ಅರಿವು ಮೂಡಿಸಲೂ ಈ ರಕ್ಷಾ ಬಂದನವೇ ಪ್ರತಿರೂಪವಾಗಿದೆ.

Contact Your\'s Advertisement; 9902492681

ಶ್ರಾವಣ ಮಾಸ ಬಂತೆಂದರೆ ಸಾಕು, ಹಬ್ಬಗಳ ಸುಗ್ಗಿ ಅಂತನೇ ಹೇಳಬಹುದು, ಇಲ್ಲಿ ಒಂದಾದ ಮೇಲೊಂದರಂತೆ ಸಾಲುಸಾಲಾಗಿ ಬರುವ ಹಬ್ಬಗಳಂತೂ ಸಂತೋಷವನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತಾ ಹೋಗುತ್ತವೆ, ಅದರಲ್ಲೂ ಅತ್ಯಂತ ಸಂತೋಷ ತರುವ ಹಬ್ಬವೆಂದರೆ ತಂಗಿಯು ಅಣ್ಣನಿಗೆ ರಾಖಿ ಕಟ್ಟುವ ರಕ್ಷಾಬಂಧನ ಹಬ್ಬ.

ಅಣ್ಣ ತಂಗಿಯ ಜೀವನದ ಒಂದು ಉತ್ತಮ ಪ್ರೀತಿಯ ಸಂಕೇತ ಒಬ್ಬರನ್ನು ಪರಸ್ಪರ ರಕ್ಷಣೆ ಮಾಡುವ ಮನಸ್ತಾಪವನ್ನು ಹೊಂದಿರುತ್ತಾರೆ. ರಕ್ಷಾ ಬಂಧನ ಪ್ರಾಚೀನ ಕಾಲದಿಂದ ಬಹಳ ಪ್ರಾಮುಖ್ಯತೆ ಹೊಂದಿದೆ ಆಚರಿಸುವ ಒಂದು ಹಬ್ಬ.

ಆ ದಿನ ಅಕ್ಕಾ ತಂಗಿಯರು ಸಹೋದರರ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ಅಕ್ಕಾ ತಂಗಿಯರಿಗೆ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ.

ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ ‘ರಕ್ಷಾಬಂಧನ’ ಅಥವಾ ‘ರಾಖಿ’ ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ.

ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತೇವೆ.

ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ.

ಸಹೋದರ ಮತ್ತು ಸಹೋದರಿಯರ ಸಂಬಂಧ, ಪ್ರೀತಿ ಮತ್ತು ಪವಿತ್ರದ ಸಂಕೇತವಾಗಿರುವ ದಿನವೇ ರಕ್ಷಾ ಬಂಧನ.ರಕ್ಷಾ ಬಂಧನ ದಿನದಂದು ಸಹೋದರಿಯರು ತಮ್ಮ ಅಣ್ಣ ಮತ್ತು ತಮ್ಮಂದಿರಿಗೆ ರಾಖಿಯನ್ನು ಕಟ್ಟಿ, ಅವರ ಜೀವನ ಸುಗಮವಾಗಿರಲಿ ಎಂದು ಹಾರೈಸುತ್ತಾರೆ.

ಅಣ್ಣ ತಂಗಿಯ ಜೀವನದ ಒಂದು ಉತ್ತಮ ಪ್ರೀತಿಯ ಸಂಕೇತ ಒಬ್ಬರನ್ನು ಪರಸ್ಪರ ರಕ್ಷಣೆ ಮಾಡುವ ಮನಸ್ತಾಪವನ್ನು ಹೊಂದಿರುತ್ತಾರೆ. ರಕ್ಷಾ ಬಂಧನ ಪ್ರಾಚೀನ ಕಾಲದಿಂದ ಬಹಳ ಪ್ರಾಮುಖ್ಯತೆ ಹೊಂದಿದೆ.

ಹೌದು, ಸಹೋದರ-ಸಹೋದರಿಯರಿಯರ ಸಂಬಂಧವನ್ನು ಕೊಂಡಾಡುವ ಮತ್ತು ಅದರ ಸ್ವಾದವನ್ನು ಸವಿಯುವ ಹಬ್ಬವೇ ರಕ್ಷಾ-ಬಂಧನ. ಇದನ್ನು ಭಾರತದಲ್ಲಿ ಅಂತೂ ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಅಷ್ಟೇ ಅಲ್ಲದೆ, ಇದು ಅಣ್ಣ-ತಂಗಿಯರ ಮತ್ತು ಅಕ್ಕ-ತಮ್ಮನ ನಡುವಿನ ಬಾಂಧವ್ಯವನ್ನು ಸಾರುವ ಹಬ್ಬವಾಗಿರುವುದರಿಂದ, ಈ ಹಬ್ಬದಂದು ಸಹೋದರ-ಸಹೋದರಿಯರು ಪರಸ್ಪರರ ಏಳಿಗೆಯನ್ನು, ಸಂತೋಷವನ್ನು ಮತ್ತು ಒಳ್ಳೆಯದಾಗಲಿ ಎಂಬ ಆಸೆಯನ್ನು ವ್ಯಕ್ತಪಡಿಸುತ್ತ ಹಬ್ಬವನ್ನು ಆಚರಿಸುತ್ತಾರೆ.

ರಕ್ಷಾ ಬಂಧನ್” ಎನ್ನುವ ಹೆಸರೇ ಸೂಚಿಸುವಂತೆ ಇದು “ರಕ್ಷಣೆಯನ್ನು ನೀಡುವ ಬಂಧನ”.ಈ ಹಬ್ಬದಂದು ಸಹೋದರರು ಅವರ ಸಹೋದರಿಯರಿಗೆ ಎಂತಹ ಕಷ್ಟದಲ್ಲಾದರು ಸರಿ ಬಂದು ಕಾಪಾಡುತ್ತೇವೆ ಎಂಬ ಪ್ರಮಾಣವನ್ನು ಮಾಡುತ್ತಾರೆ.

ಅದೇ ರೀತಿ ಸಹೋದರಿಯರು ದೇವರು ತಮ್ಮ ಸಹೋದರನನ್ನು ದುಷ್ಟಶಕ್ತಿಗಳಿಂದ ಕಾಪಾಡಲಿ ಎಂದು ಅರಸಿಕೊಳ್ಳುತ್ತ ರಕ್ಷಾ ಬಂಧನವನ್ನು ಕಟ್ಟುತ್ತೇವೆ.ಈ ಹಬ್ಬವು ಶ್ರಾವಣ ಪೂರ್ಣಿಮೆಯ ದಿನದಂದು ಬರುತ್ತದೆ. ಅಂದರೆ ಆಗಸ್ಟ್ ತಿಂಗಳಿನಲ್ಲಿ ಇದನ್ನು ಆಚರಿಸಲಾಗುತ್ತದೆ.

ಶಾಂತಿ ಮತ್ತು ಸಹಬಾಳ್ವೆಯ ಮೌಲ್ಯವು ಮನುಷ್ಯನಿಗೆ ತೀರಾ ಅಗತ್ಯ. ರಕ್ಷಾ ಬಂಧನವು ಅದನ್ನು ಸಾರಿ ಸಾರಿ ಹೇಳುತ್ತದೆ. ಇದು ಪಾಪಗಳನ್ನು ತೊಡೆದು ಹಾಕುವುದರ ಮೂಲಕ ರಕ್ಷಣೆಯ ಭರವಸೆಯನ್ನು ನೀಡುತ್ತದೆ. ರಕ್ಷಾ ಬಂಧನದ ನೆಪದಲ್ಲಾದರು ದೂರ ಇರುವ ಸಹೋದರ-ಸಹೋದರಿಯರು ಪರಸ್ಪರ ಒಟ್ಟಿಗೆ ಒಂದು ಆಚರಣೆಗಾಗಿ ಸೇರುವ ನೆಪ ದೊರೆಯುತ್ತದೆ.

ಇದರಿಂದ ಪರಸ್ಪರರ ಕಷ್ಟಸುಖಗಳನ್ನು ಇತ್ಯಾರ್ಥ ಮಾಡಿಕೊಳ್ಳಬಹುದು. ಅಣ್ಣಾ ತಂಗಿಯರು ಒಂದಾಗಿ ಇರುವುದರಿಂದ ಇಡೀ ಕುಟುಂಬವು ಸಂತೋಷವಾಗಿ ಒಂದು ಆಚರಣೆಯನ್ನು ಮಾಡಿ, ಎಲ್ಲರೂ ಸಂತಸವನ್ನು ಹಂಚಿಕೊಳ್ಳಬಹುದು. ಹೀಗೆ ಸಂಬಂಧವು ಶಾಶ್ವತವಾಗುತ್ತದೆ ಮತ್ತು ಪ್ರೀತಿ ಹೆಚ್ಚಾಗುತ್ತದೆ.

ಕಷ್ಟ ಸುಖ ಹಂಚಿಕೊಳ್ಳಲು, ಅಕ್ಕ-ತಂಗಿಯರ ಬೇಕು
ಏನೇ ಬರಲಿ ನಾನಿದ್ದೇನೆ ಎಂದು ಧೈರ್ಯ ತುಂಬುವುದಕ್ಕೆ ಅಣ್ಣ-ತಮ್ಮ ಇರಬೇಕು ಎಂಬ ಮಾತನ್ನು ಹೇಳುತ್ತಾ ನನ್ನ ಎಲ್ಲ ಸಹೋದರರಿಗೆ ರಕ್ಷಾ ಬಂಧನ ಹಬ್ಬದ ಶುಭಾಶಯಗಳು.

ಕಾಶಿಬಾಯಿ. ಸಿ. ಗುತ್ತೇದಾರ
ಪತ್ರಿಕೋದ್ಯಮ ವಿದ್ಯಾರ್ಥಿ, ಶರಣಬಸವ ಮಹಾವಿದ್ಯಾಲಯ ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here