ಶರಣ ಚರಿತೆ: ಪಲ್ಕುರಿಕಿ ಸೋಮನಾಥನ ಬಸವ ಪುರಾಣ

0
11

ಬಸವಾದಿ ಶರಣರ ಬದುಕು ಹಾಗೂ ಬೋಧನೆಯನ್ನು, ಅವರು ಉಂಟುಮಾಡಿದ ಚಳವಳಿಯನ್ನು ಕುರಿತು ಲಿಖಿತ ರೂಪದಲ್ಲಿ ಕಟ್ಟಿಕೊಟ್ಟ ಪಾಲ್ಕುರಿಕಿ ಸೋಮನಾಥ ತೆಲುಗು, ಸಂಸ್ಕøತ ಹಾಗೂ ಕನ್ನಡದಲ್ಲಿ ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ. ಇವರ ಹುಟ್ಟು ಹಾಗೂ ಕಾಲ ಕ್ರಿ.ಶ. 1190-1240ರವರೆಗೆ ಹೊಯ್ದಾಡುತ್ತದೆ. ಆದರೆ 1240 ಎಂದು ವಿದ್ವಾಂಸರು ನಿರ್ಧರಿಸಿದ್ದಾರೆ.

ತಾಯಿ ಶ್ರೀಯಾದೇವಿ, ತಂದೆ ವಿಷ್ಣುರಾಮದೇವ. ಇವರು ಆಂಧ್ರದ ಹೊರಂಗಲ್ ಜಿಲ್ಲೆಯ ಪಾಲ್ಕುರಿಕಿಯವರು. ಬೆಂಗಳೂರು ಜಿಲ್ಲೆಯ ಮಾಗಡಿ ತಾಲ್ಲೂಕಿನ ಕಲ್ಲೆ ಎಂಬ ಗ್ರಾಮದಲ್ಲಿ ಇವರ ಸಮಾಧಿ ಇರುವುದನ್ನು ಕಾಣಬಹುದು.

Contact Your\'s Advertisement; 9902492681

ಪಾಲ್ಕುರಿಕಿ ಸೋಮನಾಥ ಬರೀ ಕವಿಯಲ್ಲ. ಆತ ಬಸವಣ್ಣನರ ನಿಷ್ಠಾವಂತ ಭಕ್ತ. ತೆಲುಗು, ಸಂಸ್ಕøತ, ಕನ್ನಡ ಭಾಷೆಲ್ಲಿ ಬಸವಣ್ಣನವರ ಕುರಿತು ಬಹಳಷ್ಟು ಕಾವ್ಯ ಬರೆದಿದ್ದಾರೆ. ಶರಣರಿಗೆ ಸಂಬಂಧಿಸಿದ ಪಾಲ್ಕುರಿಕಿ ಸೋಮನಾಥನ ಹುಟ್ಟು ಕ್ರಿ.ಶ. 1190-1240ರವರೆಗೆ ಹೊಯ್ದಾಡುತ್ತದೆ. ಆದರೆ ವಿದ್ವಾಂಸರು 1240 ಎಂದುನಿರ್ಧರಿಸಿದ್ದಾರೆ. ತಾಯಿ ಶ್ರೀಯಾದೇವಿ, ತಂದೆ ವಿಷ್ಣುರಾಮದೇವ. ಪಾಲ್ಕುರಿಕಿ ಹೊರಂಗಲ್ ಜಿಲ್ಲೆಯಲ್ಲಿ ಬರುತ್ತದೆ. ಇವರ ಸಮಾಧಿ ಬೆಂಗಳೂರು ಜಿಲ್ಲೆಯ ಮಾಗಡಿ ತಾಲ್ಲೂಕಿನ ಕಲ್ಲೆ ಎಂಬ ಗ್ರಾಮದ ಬೆಟ್ಟದಲ್ಲಿ ಇದೆ.

ಸೋಮನಾಥ ಬರೀ ಕವಿಯಲ್ಲ. ಆತ ಬಸವಣ್ಣನರ ನಿಷ್ಠಾವಂತ ಭಕ್ತ. ತೆಲುಗು, ಸಂಸ್ಕøತ, ಕನ್ನಡ ಭಾಷೆಲ್ಲಿ ಬಸವಣ್ಣನವರ ಕುರಿತು ಬಹಳಷ್ಟು ಕಾವ್ಯ ಬರೆಯುತ್ತಾರೆ. ಸುಮಾರು ಶರಣರಿಗೆ ಸಂಬಂಧಿಸಿದ 12 ಕಾವ್ಯ. ಅವರು ತಮ್ಮ ಅನುಭವ ಸಾರದಲ್ಲಿ “ಬೃಂಗಿರಿಟ ಗೋತ್ರದವನು, ಗುರುಲಿಂಗ ಪುತ್ರನು, ಶಿವಕುಲದವನು” ಎಂದು ಬರೆದುಕೊಳ್ಳುತ್ತಾನೆ. ವಚನ ಚಳವಳಿಯ ನಾಯಕತ್ವ ವಹಿಸಿದ್ದ ಬಸವಣ್ಣನವರ ಬಗ್ಗೆ ಸೋಮನಾಥನಿಗೆ ಬಹಳ ಅಭಿಮಾನವಿದ್ದುದರಿಂದ “ಬಸವ ಪುರಾಣ”ವು ಬಸವಣ್ಣ ಹಾಗೂ ಶರಣರ ಚರಿತ್ರೆ ಉಳಿಸಿಕೊಡುವಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ.

ಈ ಕೃತಿಯನ್ನು ಶರಣ ಧರ್ಮ-ಚರಿತ್ರೆ ದೃಷ್ಟಿಯಿಂದ ನೋಡಲಾಗಿ, ಸೋಮನಾಥನಿಗೆ ಗಡಿಗೆ/ಅಗ್ರಹಾರ ಗೊಬ್ಬೂರನ್ನು ಆಳುತ್ತಿದ್ದ ಸಂಗನಮಾತ್ಯ ಎಂಬುವವರು ಸ್ನೇಹಿತರಿದ್ದರು. ಅವರು ಬಸವಣ್ಣನ ಕಟ್ಟಾ ನುಯಾಯಿಗಳಾಗಿದ್ದರು.

ಅವರನ್ನು ಉದ್ದೇಶಿಸಿಯೇ ಬಸವ ಪುರಾಣ ರಚಿಸಿರುವುದಾಗಿ ತಿಳಿಸುತ್ತಾರೆ. ಶರಣರಿಗೂ ಹಾಗೂ ಸೋಮನಾಥ ಕವಿಗೂ ಕಾಲದ ದೃಷ್ಟಿಯಿಂದ ಸುಮಾರು 60-80 ವರ್ಷಗಳ ಅಂತರವಿದ್ದುದರಿಂದ ಕವಿಗೆ ಶರಣರ ಬಗ್ಗೆ ವಿಷಯ ಸಂಗ್ರಹಿಸಲು ತಾಜಾ ಮಾಹಿತಿ ಸಿಕ್ಕಿರಬೇಕು.

ಬಸವ ಪುರಾಣದ ವೈಶಿಷ್ಟ್ಯಗಳು: ಕರಸ್ಥಲಿ ಸೋಮನಾಥ, ಮಲ್ಲಿನಾಥ, ರೆಂಟಾಲ್ ಮಲ್ಲಿನಾಥ, ದೋಚಮಾಂಬೆ, ಮೂಡಿಗಿ ತ್ರಿಪುರಾರಿ, ನೀಲಕಂಠ ಗೋಡಗಿ ಇವರ ಜೊತೆಗೆ ಇನ್ನೂ ಕೆಲ ಭಕ್ತರ ಸಮೂಹವೇ ತನಗೆ ಶರಣರ ಮಾಹಿತಿಗಳನ್ನು ಕೊಟ್ಟರು. ಈ ಭಕ್ತರಿಂದ ಕೇಳಿರುವುದನ್ನು ತಪ್ಪಾಗದಂತೆ ಬರೆದಿದ್ದೇನೆ ಎಂದು ಕವಿ ಹೇಳುತ್ತಾರೆ. ಹೀಗಾಗಿ ಇದು ಶರಣ ಚರಿತ್ರೆಯನ್ನೊಳಗೊಂಡ ಲಿಂಗಾಯತ ಧರ್ಮದ ಮೊದಲ ಕಾವ್ಯ ಎಂದು ಹೇಳಬಹುದು.

ಪಾರಿಭಾಷಿಕ ಪದ ಪ್ರಯೋಗ: ಲಿಂಗಧರ್ಮ, ಲಿಂಗಾಯತ, ಲಿಂಗವಂತ, ಲಿಂಗೈಕ್ಯನಿಷ್ಠ, ಸರ್ವಾಂಗಲಿಂಗಿ, ಲಿಂಗಾರ್ಪಿತ, ಲೀಂಗದೀಕ್ಷೆ, ಇಷ್ಟಪ್ರಾಣಲಿಂಗ ಪೂಜೆ, ಕರೋದ್ಭವ, ನಿಜಲಿಂಗ, ಪರಮಲಿಂಗ, ಪ್ರಾಣಲಿಂಗ, ಲಿಂಗದೇಹಿ, ಲಿಂಗಧಾರಿ, ಪರಂಜ್ಯೋತಿ ಈ ಮುಂತಾದ ಸಾವಿರ ಪದ ಪ್ರಯೋಗ ಮಾಡಿರುವುದನ್ನು ಕಾಣಬಹುದು.

ಹೀಗಾಗಿ ಲಿಂಗಾಯತ ಸ್ವತಂತ್ರ ಧರ್ಮ ಎನ್ನುವುದಕ್ಕೆ ನಾವು ಇದಕ್ಕಿಂತ ಬೇರೆ ಇನ್ನೇನು ಸಾಕ್ಷಿ ಕೊಡಬೇಕು? ಬಸವಣ್ಣನವರ ಮಹಾಮನೆಗೆ ಆಗ ಎಂಥೆಂಥವರು ಬರುತ್ತಿದ್ದರು? ಅಲ್ಲಿ ನಡೆಯುವ ಉದಿತಗೋಷ್ಠಿ, ಸದ್ಗೋಷ್ಠಿಗಳ ವಿಷಯಗಳು ಏನಿದ್ದವು? ಅಲ್ಲಮಪ್ರಭುವಿನ ಪೀಠಾರೋಹಣ ಪ್ರಸಂಗಗಳು, ಅನುಭವ ಮಂಟಪದ ಕಲ್ಪನೆ ಮುಂತಾದವುಗಳು ಬಸವ ಪುರಾಣದಲ್ಲಿ ಬರುತ್ತವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here