ಸಾಮರಸ್ಯದ ಸಂಕೇತವೇ ಮೋಹರಂ ಹಬ್ಬ: ಹರ್ಷಾನಂದ ಗುತ್ತೇದಾರ

0
5

ಆಳಂದ: ಹಿಂದೂ ಮತ್ತು ಮುಸ್ಲಿಂರು ಸೇರಿಕೊಂಡು ಆಚರಿಸುವ ಹಬ್ಬವೇ ಮೋಹರಂ ಹಬ್ಬವಾಗಿದೆ ಎಂದು ಜಿ.ಪಂ ಮಾಜಿ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಅಭಿಪ್ರಾಯಪಟ್ಟರು.

ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಜರುಗಿದ ಮೋಹರಂ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋಹರಂ ಹಬ್ಬವು ಸಾಮರಸ್ಯದ ಸಂಕೇತವಾಗಿದೆ. ಹಬ್ಬ ಮುಸ್ಲಿಂರದಾಗಿದ್ದರೂ ಹಿಂದೂಗಳೂ ಕೂಡಾ ಭಕ್ತಿಯಿಂದ ಭಾಗವಹಿಸಿ ಆಚರಿಸುತ್ತಾರೆ ಇದಕ್ಕೆ ಇಲ್ಲಿರುವ ಸಾಮರಸ್ಯದ ಜೀವನವೇ ಕಾರಣ ಎಂದು ಹೇಳಿದರು.

Contact Your\'s Advertisement; 9902492681

ನಿಂಬರ್ಗಾ ಗ್ರಾಮದಲ್ಲಿ ಆಚರಿಸಿದ ಮೋಹರಂ ಹಬ್ಬದಲ್ಲಿ ಮುಸ್ಲಿಂ ಧರ್ಮದವರ ಹಬ್ಬದಲ್ಲಿ ಹಿಂದೂ ಧರ್ಮದ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದು, ಹಿಂದೂಗಳು ಆಚರಣೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ನಿಂಬರ್ಗಾ ಗದಗೇಶ್ವರ ಮಠದ ಶ್ರೀಗಳಾದ ನೀಲಕಂಠ ಶಿವಾಚಾರ್ಯರು, ಬಡದಾಳ ಶ್ರೀಗಳು, ಜೈ ಭವಾನಿ ಪೂಜಾರಿ ಜಗದೇವಪ್ಪಾ ಹಿತ್ತಲ ಶಿರೂರ, ಮುಖಂಡರಾದ ಮೈಹಿಬೂಬ್ ಆಳಂದ ತಾಲೂಕು ಪಂಚಾಯತ್ ಮಾಜಿ ಸದಸ್ಯ ದತ್ತಾ ದುರ್ಗದ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಶಾಂತಣ್ಣಾ ಮಂಟಗಿ, ಮೂಹರಂ ಸಮಿತಿಯ ಸದಸ್ಯರಾದ ಹುಸೇನಿ ಸಾಬ್ ಅಲ್ಲಾ, ರಾಮಚಂದ್ರ ಬುಳ್ಳಾ, ಶಿವಪುತ್ರಪ್ಪ ಮಾಳಿಗೆ, ಶ್ರೀ ಶೈಲ ಪಾಟೀಲ, ರುಕ್ಮೋದ್ದೀನ, ಶ್ರೀಮಂತ ಸವಳೇಶ್ವರ, ಮಹಾದೇವ ಕೊರಭಾ, ಮಲ್ಲಿನಾಥ ಒಡೇಯರ,ನ ಶರಣಪ್ಪಾ ಹೂಗೊಂಡ, ರಾಜು ಸಿಂಗೆ, ಉಪನ್ಯಾಸಕರಾದ ಶ್ರೀ ಧರ್ಮರಾಜ ಜವಳಿ, ಶಿಕ್ಷಕರಾದ ಅನೀಲ ಸೇರಿದಂತೆ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗ್ರಾಮದ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here