ಎಳ್ಳು ಬೆಳೆ ಬೂದಿ ರೋಗ ನಿರ್ವಹಣೆ

0
19

ಕಲಬುರಗಿ: ಜಿಲ್ಲೆಯ ವಿವಿಧಕಡೆ ಎಳ್ಳು ಬೆಳೆಯು ಹೂ ಹಂತತಲಪಿದ್ದು, ಈ ಸಮಯದಲ್ಲಿ ಎಲೆಗಳಿಗೆ ಮತ್ತು ಕಾಯಿಗಳಿಗೆ ಬರುವ ಬೂದಿ ರೋಗ, ಎಲೆಚುಕ್ಕಿ ರೋಗ ಹಾಗೂ ಗೊಂಡಾಳು ನಂಜುರೋಗ ನಿರ್ವಹಣೆಅತ್ಯಗತ್ಯವಾಗಿದೆ.

ಈಗಾಗಲೇ ಜಿಲ್ಲೆಯಲ್ಲಿ ಬೆಳೆಯ ಬೆಳವಣಿಗೆ ಹಂತದಲ್ಲಿ ೧೬೨ ಮೀ.ಮೀಟರ್ ಮಳೆಯಾಗಿದು ೧೮ ದಿನಗಳ ಒಣ ಸನ್ನಿವೇಶದಲ್ಲಿ ಬೂದಿ ರೋಗ ಹಾಗೂ ಎಲೆ ಮುಟುರುರೋಗಅಲ್ಲಲ್ಲಿ ಕಾಣಿಸಿಕೊಂಡಿದೆ.ವಾತಾವರಣದಆರ್ದ್ರತೆ ಶೇ.೮೦ ರಷ್ಟು ಹಚ್ಚಾದ ಸನ್ನಿವೇಶದಲ್ಲಿ ಹಾಗೂ ಯೋಗ್ಯ ಬೆಳೆ ನಿರ್ವಹಣೆ ಮಾಡಿದಲ್ಲಿಉತ್ತಮ ಕಾಯಿಗಳ ರಚನೆಕಾಣಬಹುದು.

Contact Your\'s Advertisement; 9902492681

ಎಲೆಚುಕ್ಕಿ ರೋಗ ಮತ್ತು ಬೂದಿ ರೋಗಕಂಡು ಬಂದಲ್ಲಿಕಾರ್ಬನ್‌ಡೈಜಿಂ ೧ ಗ್ರಾಮಅಥವಾ ಹೆಕ್ಸ್‌ಕೋನಜಾಲ್ ೧ ಮಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.ಎಲೆಮುದುಡಿ ನಂಜಾಣುರೋಗಕಂಡು ಬಂದಲ್ಲಿಆರಂಭದಲ್ಲಿ ಗಿಡಗಳನ್ನು ತೆಗೆದು ನಾಶ ಪಡೆಸಿದ್ದಲ್ಲಿ ರೋಗ ಹರಡುವುದನ್ನತಡೆಗಟ್ಟಬಹುದು.

ರೋಗ ಹರಡುವ ಕೀಟಗಳ ನಿರ್ವಹಣೆಗೆಥಯೋಮಿಥಾಕ್ಸಂ೮ ಗ್ರಾಂ. ೧೫ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.ಐಷಿಎಆರ್-ಕೃಷಿ ವಿಜ್ಞಾನಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದಡಾ. ರಾಜು ಜಿ. ತೆಗ್ಗಳ್ಳಿ, ವಿಜ್ಞಾನಿಗಳಾದ ಡಾ. ಜಹೀರ್‌ಅಹೆಮದ್, ಕ್ಷೇತ್ರ ಸಹಾಯಕರಾದ ಶ್ರೀ ನಿರಂಜನ್‌ಧನ್ನಿ ಮತ್ತು ಸೈದಪ್ಪಾ ನಾಟಿಕಾರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here