ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ

0
34

ಶಹಾಬಾದ: ನಗರದ ಬಿಜೆಪಿ ಕಚೇರಿಯಲ್ಲಿ ಹಿಂದುಳಿದ ವರ್ಗದ ಮೋರ್ಚಾದ ವತಿಯಿಂದ ಸೋಮವಾರ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಕೋವಿಡ್-೧೯ರ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಯಿತು.ರೀಡಿಗ ಸಮಾಜದ ಅಧ್ಯಕ್ಷ ಭೀಮಯ್ಯ ಗುತ್ತೆದಾರ ನಾರಾಯಣ ಗುರು ಅವರ ಭಾವಚಿತ್ರಕ್ಕೆ ಪು?ನಮನ ಸಲ್ಲಿಸಿ ಗೌರವ ಸಮರ್ಪಿಸಿದರು.

ವಾಡಿ-ಶಹಾಬಾದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಮಾತನಾಡಿ, ಮಹನೀಯರ ಆದರ್ಶಗಳು ಒಂದು ಜಾತಿಗೆ ಸೀಮಿತವಲ್ಲ. ನಾರಾಯಣ ಗುರು ಅವರ ಆದರ್ಶ, ಮೌಲ್ಯಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ನಗರಸಭೆಯ ಸದಸ್ಯ ಶರಣು ವಸ್ತ್ರದ್ ಹಾಗೂ ಭೀಮಯ್ಯ ಗುತ್ತೆದಾರ ಮಾತನಾಡಿ, ಕೇರಳದಲ್ಲಿ ಜನಿಸಿದಂತಹ ನಾರಾಯಣ ಗುರು ಅವರು ಆಗಿನ ಸಂದರ್ಭದಲ್ಲಿ ಸಮಾಜದಲ್ಲಿನ ಅಸಮಾನತೆ, ಜಾತಿ ಜಾತಿಗಳ ಮಧ್ಯ ಇದ್ದ ವೈ?ಮ್ಯ ಮತ್ತು ಅಸ್ಪೃಶ್ಯತೆ, ಧರ್ಮಗಳ ಬಗ್ಗೆ ಭಿನ್ನಬೇಧ, ತಾರತಮ್ಯ ನಡೆಯುತ್ತಿತ್ತು. ಅಂತಹ ಸಂದರ್ಭದಲ್ಲಿ ಅವರು ಸಮಾಜಕ್ಕೆ ತಮ್ಮದೇ ಆದ ತತ್ವ ಸಿದ್ಧಾಂತಗಳ ಮೂಲಕ ಅಸಮಾನತೆ ಹೋಗಲಾಡಿಸಲು ಸಾಕ? ಪ್ರಭಾವ ಬೀರಿದ್ದಾರೆ ಎಂದು ತಿಳಿಸಿದರು. ಅಸ್ಪಶ್ಯತೆ, ಅಜ್ಞಾನ, ಅಂಧಶ್ರದ್ಧೆ ವಿರುದ್ಧ ಹೋರಾಟ ನಡೆಸಿ, ಸಮ ಸಮಾಜ ನಿರ್ಮಾಣಕ್ಕಾಗಿ ದಿಟ್ಟ ಹೆಜ್ಜೆ ಇಟ್ಟ ನಾರಾಯಣ ಗುರು ಅವರ ಚಿಂತನೆಗಳು, ತತ್ವಾದರ್ಶಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ. ಅವರ ತತ್ವಾದರ್ಶ, ಚಿಂತನೆ, ಸಿದ್ದಾಂತಗಳ ಮೂಲಕ ಸಮಾಜದ  ಸುಧಾರಣೆ ಮಾಡಲು ನಾವೆಲ್ಲರೂ ಹೆಚ್ಚಿನ ಪ್ರಯತ್ನ ಮಾಡೋಣ ಎಂದರು.

ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾದ ಅಧ್ಯಕ್ಷ ರಾಜು ಕುಂಬಾರ, ಸಮಾಜದ ಉಪಾಧ್ಯಕ್ಷ ಅಶೋಕ ಗುತ್ತೆದಾರ, ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ ಗುತ್ತೆದಾರ, ಅಣ್ಣಪ್ಪ ದಸ್ತಾಪೂರ, ವಿಶ್ವ ಗುತ್ತೆದಾರ, ಅನಿಕೇತ ಗುತ್ತೆದಾರ, ಸುನೀಲಕುಮಾರ ಗುಡೂರ್, ವಿಶ್ವನಾಥ ಕಟ್ಟಿಮನಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here