ಸರ್ಕಾರಿ ಸೌಲಭ್ಯಗಳ ಸದುಪಯೋಗಕ್ಕೆ ಇಒ ನಾಗಮೂರ್ತಿ ಶೀಲವಂತ ಕರೆ

0
11

ಆಳಂದ: ಸಾರ್ವಜನಿಕರು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಜಾಗೃತರಾಗಬೇಕು ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ನಾಗಮೂರ್ತಿ ಕೆ. ಶೀಲವಂತ ಅಭಿಪ್ರಾಯಪಟ್ಟರು.

ತಾಲೂಕಿನ ಖಜೂರಿ ಗ್ರಾಮದ ಅಂಬಾ ಭವಾನಿ ದೇವಸ್ಥಾನದಲ್ಲಿ ಸೋಮವಾರ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ತಾಲೂಕಾ ಆಡಳಿತದ ಜಂಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಯೋಜನೆಗಳ ಮಾಹಿತಿ ಕಾರ್ಯಾಗಾರ, ಕೊರೋನಾ ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಸರ್ಕಾರಗಳು ಜನರ ಕಲ್ಯಾಣಕ್ಕಾಗಿ ಅನೇಕ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತವೆ ಅವುಗಳ ಸಂಪೂರ್ಣ ಮಾಹಿತಿ ಪಡೆದು ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಲಾಭ ಪಡೆಯಬೇಕು ಎಂದು ಕರೆ ನೀಡಿದರು.

ಒಂದು ಯಶಸ್ವಿ ಯೋಜನೆಯ ಫಲಿತಾಂಶ ಅಂತಿಮವಾಗಿ ಅದರ ಫಲಾನುಭವಿಗಳ ಮೇಲೆ ನಿಂತಿರುತ್ತದೆ ಈ ನಿಟ್ಟಿನಲ್ಲಿ ಜನತೆ ಮಧ್ಯವರ್ತಿಗಳ ಸಂಪರ್ಕ ಸಾಧಿಸದೇ ನೇರವಾಗಿ ಕಚೇರಿಗಳಿಗೆ ಭೇಟಿ ಕೊಟ್ಟು ಯೋಜನೆಯ ಹಕ್ಕುದಾರರಾಗಬೇಕು ಆಗ ಮಾತ್ರ ಯೋಜನೆ ಫಲಪ್ರದವಾಗುತ್ತದೆ ಎಂದು ಹೇಳಿದರು.

ಕಾರ್ಮಿಕ ಇಲಾಖೆಯ ಜಿಲ್ಲಾ ಅಧಿಕಾರಿ ರಮೇಶ ಸಂಬುಡ್ ಅವರು ಮಾತನಾಡಿ, ಕಟ್ಟಡ ಮತ್ತು ಇತರೆ ಕಾರ್ಮಿಕರು ಗುರುತಿನ ಪತ್ರವನ್ನು ಪಡೆದು ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳ ಪಡೆಯಬೇಕು ಎಂದು ಅದರ ಸಂಪೂರ್ಣ ವಿವರಣೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾದೇವ ವಡಗಾಂವ, ಸಾಮಾಜಿಕ ಕಳಕಳಿ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ ತಾಲೂಕಿನ ಹೊಬಳಿ ಮಟ್ಟದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇದರಿಂದ ಜನಗಳಿಗೆ ಮಾಹಿತಿಯ ಮಹಾಪೂರವೇ ಹರಿದು ಬರಲಿದೆ ಆದರಿಂದ ಜನತೆ ಈ ಕಾರ್ಯಕ್ರಮದ ನೇರ ಫಲಾನುಭವಿಗಳಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಸೌಲಭ್ಯ ಕುರಿತು ನಾಡ ತಹಸೀಲ್ದಾರ ಬಸವರಾಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶಿವಮೂರ್ತಿ ಕುಂಬಾರ. ಪುಶು ಇಲಾಖೆಯ ಡಾ. ಮಂಜುನಾಥ ಬಿರಾದಾರ, ಜೆಸ್ಕಾಂ ಎಇಇ ಮಾಣಿಕರಾವ್ ಕುಲಕರ್ಣಿ, ಪಿಡಿಒ ನಾಗೇಶಮೂರ್ತಿ, ಆರೋಗ್ಯ ಶಿಕ್ಷಣಾಧಿಕಾರಿ ವಿಜಯಲಕ್ಷ್ಮೀ ನಂದಿಕೊಲಮಠ, ಅಂಚೆ ಕಚೇರಿ ಶಿವಶಂಕರ ಪಾಟೀಲ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಮಾಹಿತಿ ಒದಗಿಸಿದರು.

ಅಧಿಕಾರಿ ಶಿವಶಂಕರ ಪಾಟೀಲ, ಬಸವರಾಜ ಸಿಂಪಿ, ಕಂದಾಯ ನಿರೀಕ್ಷಕ ಅಲ್ಲಾವುದ್ದೀನ್, ಅಂಗನವಾಡಿ ಮೇಲ್ವಿಚಾರಕಿ ಕಸ್ತುರಬಾಯಿ ಮುನೊಳ್ಳಿ, ವಿ.ಎ. ದತ್ತಾ ರಾಠೋಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಜೆಸ್ಕಾಂ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ಸಮಗ್ರ ಮಾಹಿತಿಯನ್ನು ಜನತೆಗೆ ನೀಡಿದರು. ವೇದಿಕೆಯಲ್ಲಿ ಖಜೂರಿ ಗ್ರಾಮದ ಅರ್ಹ ಐದು ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ರೇಣುಕಾ ದೇವಿ ವಿವಿದೋದ್ದೇಶ ಸಂಘದ ಕಾರ್ಯಕರ್ತರು ಕೋರೊನಾ ಕುರಿತು ಜಾಗೃತಿ ಕಿರು ನಾಟಕ ಜನಮನ ಸೆಳೆಯಿತು.

ಪತ್ರಕರ್ತ ಶರಣಬಸಪ್ಪ ವಡಗಾಂವ, ಯುವ ಪತ್ರಕರ್ತ ಜಗದೀಶ ಕೋರೆ ನಿರೂಪಿಸಿದರೆ, ಪತ್ರಿಕೋದ್ಯಮ ಸ್ನಾತಕೋತರ ಪದವಿಧರ ಹಣಮಂತ ಶೇರಿ ಸ್ವಾಗತಿಸಿದರು. ಯುವ ಮುಖಂಡ ಶ್ರೀಶೈಲ ಭೀಂಪೂರೆ ವಂದಿಸಿದರು. ಪಾಲ್ಗೊಂಡ ಸಾರ್ವಜನಿಕರಿಗೆ ಸಾಹಿತ್ಯ ಕೃಷಿ ಸೇರಿ ಉಪಯುಕ್ತ ಪುಸ್ತಕಗಳನ್ನು ಪತ್ರಕರ್ತರ ಸಂಘದ ಅಧ್ಯಕ್ಷರಿಂದ ವಿತರಿಸಲಾಯಿತು.

ಬಾಕ್ಸ್: ಗಡಿಭಾಗದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಏಕಕಾಲಕ್ಕೆ ಬಂದು ಸಾರ್ವಜನಿಕರಿಗೆ ಎಲ್ಲಾ ಇಲಾಖೆ ಮಾಹಿತಿ ಒದಗಿಸುತ್ತಿರುವುದು ಇದೇ ಮೊದಲಾಗಿದ್ದು, ಇದಕ್ಕೆ ವೇದಿಕೆ ಕಲ್ಪಿಸಿದ ಕಾರ್ಯನಿರತ ಪತ್ರಕರ್ತರ ಸಂಘ, ಆಡಳಿತದ ಕಾರ್ಯ ನಿಜಕ್ಕೂ ಶ್ಲಾಘನೀವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here