ಕಲಬುರಗಿ ದೂರದರ್ಶನ ಬಂದಗೆ ಸಂಸದರ ವೈಫಲ್ಯವೇ ಕಾರಣ ಕನ್ನಡ ಭೂಮಿ ಆರೋಪ

0
20

ಕಲಬುರಗಿ: ರಾಜ್ಯದ ಪ್ರಥಮ ಕಲಬುರಗಿ ದೂರದರ್ಶನ ಕೇಂದ್ರ ಮುಚ್ಚಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ.ದೂರದರ್ಶನ ಬಂದ ಆಗಲು ಸಂಸದರ ವೈಫಲ್ಯವೇ ಕಾರಣ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಆರೋಪಿಸಿದ್ದಾರೆ.

ದೇಶದ ಹಳೆಯದೊಲ್ಲೋಂದಾದ ಕಲಬುರಗಿ ದೂರದರ್ಶನ ಕೇಂದ್ರ ಪ್ರಾರಂಭಿಸಿ ದಶಕಗಳೇ ಕಳೆದಿವೆ.1977ರಲ್ಲಿ ಸ್ಥಾಪನೆಯಾದ ಕಲಬುರಗಿ ದೂರದರ್ಶನ ರಾಜ್ಯದ ಮೊದಲ ದೂರದರ್ಶನ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಅನೇಕ ಕನ್ನಡದ ಕಾರ್ಯಕ್ರಮಗಳನ್ನು ಬಿತ್ತರಿಸಿ ಅನೇಕ ಕಲಾವಿದರನ್ನು ಪರಿಚಯಿಸಿದೆ.ಸಾಹಿತ್ಯ, ಸಂಸ್ಕೃತಿ, ಪ್ರವಾಸಿ ತಾಣಗಳ ವರದಿ ಅಷ್ಟೇ ಅಲ್ಲದೆ ರೈತರಿಗೆ ನೆರವಾಗುವ ಕೃಷಿ ಕಾರ್ಯಕ್ರಮಗಳನ್ನು ಕೊಟ್ಟಿದೆ.ಸುಸಜ್ಜಿತ ಸ್ಟೂಡಿಯೋ ಹೊಂದಿದೆ.ನೆರೆಯ ಬೀದರನಲ್ಲಿದ್ದ ದೂರದರ್ಶನ ಈಗಾಗಲೇ ಬಂದ್ ಮಾಡಲಾಗಿದೆ.ಈಗ ಕಲಬುರಗಿ ದೂರದರ್ಶನ ಮುಚ್ಚಲು ಎಲ್ಲಾ ತಯ್ಯಾರಿ ನಡೆದಿದೆ.ಈ ವಿಷಯ ಬೀದರ್ ಹಾಗೂ ಕಲಬುರಗಿ ಸಂಸದರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

Contact Your\'s Advertisement; 9902492681

ನೂರಾರು ಜನರಿಗೆ ಉದ್ಯೋಗ ನೀಡಿದ್ದ ದೂರದರ್ಶನ ಬಂದ್ ಆದರೆ ನೌಕರರಿಗೂ ಹಾಗೂ ಸ್ಥಳೀಯ ಕಲಾವಿದರಿಗೆ ಸಂಕಷ್ಟ ಎದುರಾಗುತ್ತದೆ.ಈಗಲಾದರೂ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು.ಯಾವುದೇ ಕಾರಣಕ್ಕೂ ಮುಚ್ಚಲು ಬಿಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here