ವಾಗಣಗೇರಾ ಗುಡ್ಡದಲ್ಲಿ ಬಾಟರ ಬಂಧನಕ್ಕೆ ಪೊಲೀಸ್ ಕೂಂಬಿಂಗ್

0
10

ಸುರಪುರ: ತಾಲೂಕಿನ ವಾಗಣಗೇರಾ ಗುಡ್ಡದಲ್ಲಿ ಆದಿವಾಸಿ ಬಾಟರು (ಪಾತ್ರಿ)ಗಳು ಬೀಡುಬಿಟ್ಟಿರುವ ಕುರಿತು ಮಾಹಿತಿಯಿಂದಾಗಿ ಸುರಪುರ ಪೊಲೀಸ್ ಉಪ ವಿಭಾಗದ ಎಲ್ಲಾ ಠಾಣೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಡಿವೈಎಸ್ಪಿ ವೆಂಕಟೇಶ ಉಗಿಬಂಡಿಯವರ ನೇತೃತ್ವದಲ್ಲಿ ಕೂಂಬಿಂಗ್ ಆಪರೇಷನ್ ನಡೆಸಿದರು.

ಶನಿವಾರ ಬೆಳಿಗ್ಗೆ ೪ ಗಂಟೆಯ ಸುಮಾರಿಗೆ ಆರಂಭಗೊಂಡ ಕೂಂಬಿಂಗ್ ಆಪರೇಷನ್ ಮೂಲಕ ವಾಗಣಗೇರಾ ತಳವಾರಗೇರಾ ಬೊಮ್ಮನಹಳ್ಳಿ ಮಲ್ಲಿಬಾವಿ ಜಾಲಿಬೆಂಚಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಹೊಂದಿಕೊಂಡಂತಿರುವ ಗುಡ್ಡದಲ್ಲಿ ಬಾಟರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದರು.ಶಸ್ತ್ರ ಸಜ್ಜಿತರಾಗಿ ಇಡೀ ಗುಡ್ಡವನ್ನು ಜಾಲಾಡಿದ ಪೊಲೀಸರ ಕಾರ್ಯಾಚರಣೆಯನ್ನು ಬೆಳಗಿನ ವೇಳೆಯಲ್ಲಿ ಜನರು ಕಂಡು ಆಶ್ಚರ್ಯ ಚಕಿತರಾಗಿದ್ದರು,ಅಲ್ಲದೆ ಡಿವೈಎಸ್ಪಿ ವೆಂಕಟೇಶ ಉಗಿಬಂಡಿಯವರು ಸೇರಿದಂತೆ ಎಲ್ಲಾ ಠಾಣೆಗಳ ಪೊಲೀಸ್ ಇನ್ಸ್ಪೇಕ್ಟರ್ ಅವರು ಹಾಗು ಪೊಲೀಸ್ ಪೇದೆಗಳು ಬಂದೂಕು ಹಿಡಿದು ಬೆಳ್ಳಂಬೆಳಿಗ್ಗೆ ಗುಡ್ಡದಲ್ಲಿ ಕಾರ್ಯಾಚರಣೆ ನಡೆದಿದ್ದರ ಕುರಿತು ಸಾರ್ವಜನಿಕರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಈ ಹಿಂದೆ ಬಾಟರು ವಾಗಣಗೇರಾ ಬೊಮ್ಮನಹಳ್ಳಿ ಗುಡ್ಡದಲ್ಲಿ ಬೀಡು ಬಿಟ್ಟು ಅನೇಕ ಕಡೆಗಳಲ್ಲಿ ಮನೆಗಳಲ್ಲಿ ಕಳ್ಳತನ,ಕುರಿಗಳ ಕಳ್ಳತನ,ಜಾನುವಾರುಗಳ ಕಳ್ಳತನದಂತಹ ಕೃತ್ಯಗಳನ್ನು ನಡೆಸುವ ಮೂಲಕ ಜನರಲ್ಲಿ ಭಯದ ವಾತಾವರಣ ಮೂಡಿಸಿದ್ದ ಅನೇಕ ಘಟನೆಗಳು ಜರುಗಿದ್ದವು.ಈಗ ಮತ್ತೆ ಅದೇ ಬಾಟರ ತಂಡ ಗುಡ್ಡದಲ್ಲಿ ಬೀಡು ಬಿಟ್ಟಿದೆ ಎಂಬ ಮಾಹಿತಿಯ ಮೇರೆಗೆ ಸುರಪುರ ಪೊಲೀಸ್ ಉಪ ವಿಭಾಗದ ಎಲ್ಲಾ ಠಾಣೆಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ೧೦೦ ಜನ ಪೊಲೀಸರ ತಂಡ ಕೂಂಬಿಂಗ್ ನಡೆಸಿದ್ದಾರೆ.ಆದರೆ ಬಾಟರು ಆಗಲೆ ಗುಡ್ಡದಿಂದ ಕಾಲ್ಕಿತ್ತಿರಬಹುದು ಎಂದು ಹೇಳಲಾಗುತ್ತಿದ್ದು,ಪೊಲೀಸ್ ಕಾರ್ಯಾಚರಣೆ ವೇಳೆ ಯಾವುದೇ ಬಾಟರು ವಾಸವಾಗಿರುವ ಬಗ್ಗೆ ಸುಳಿವು ದೊರೆತಿಲ್ಲ ಎಂದು ಹೇಳಲಾಗುತ್ತಿದೆ.

ಈ ಕಾರ್ಯಾಚರಣೆ ಸಂದರ್ಭದಲ್ಲಿ ಸುರಪುರ ಠಾಣೆಯ ಇನ್ಸ್ಪೇಕ್ಟರ್ ಸುನಿಲಕುಮಾರ ಮೂಲಿಮನಿ,ಶಹಾಪುರ ಠಾಣೆಯ ಚನ್ನಯ್ಯ ಹಿರೇಮಠ,ಹುಣಸಗಿ ಠಾಣೆಯ ಸಿಪಿಐ ದೌಲತ್ ಎನ್.ಕೆ,ಭೀಮರಾಯನಗುಡಿ ಠಾಣೆಯ ಸುನೀಲ್ ಅಲ್ಲಾಪುರ ಸೇರಿದಂತೆ ಉಪ ವಿಭಾಗದ ಠಾಣೆಗಳ ಎಲ್ಲಾ ಪಿಎಸ್‌ಐಗಳು ಹಾಗು ಪೇದೆಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here