ಶಹಾಬಾದ: ೨೩೦ಕ್ಕೂ ಹೆಚ್ಚು ಜನರು ಲಸಿಕೆ

0
44

ಶಹಾಬಾದ: ನಗರಸಭೆ ವ್ಯಾಪ್ತಿಯ ರಾಮಘಡ ಆಶ್ರಯ ಕಾಲೋನಿಯ ಜನರಿಗೆ ಪ್ರತ್ಯೇಕ ಕೋವಿಡ್ ಲಸಿಕಾ ಲಸಿಕಾ ಕೇಂದ್ರ ನಡೆಸುವುದರ ಮೂಲಕ ತಹಸೀಲ್ದಾರ ಸುರೇಶ ವರ್ಮಾ ಹಾಗೂ ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಅವರ  ಕೈಗೊಂಡ ಯೋಜನೆ ಬಹುತೇಖ ಫಲ ನೀಡಿದೆ.ಎರಡು ದಿನದಲ್ಲಿ ಸುಮಾರು ೨೩೦ಕ್ಕೂ ಹೆಚ್ಚು ಜನರು ಲಸಿಕೆ ಪಡೆದುಕೊಂಡಿದ್ದಾರೆ.

ನಗರದ ಹೊರವಲಯದಲ್ಲಿರುವ ರಾಮಘಡ ಆಶ್ರಯ ಕಾಲೋನಿಯಲ್ಲಿ ಬಹಳ ಜನರು ಕೋವಿಡ್ ಲಸಿಕೆ ಪಡೆದುಕೊಂಡಿಲ್ಲ ಎಂದು ವಿಚಾರ ತಿಳಿದ ತಕ್ಷಣವೇ ಸ್ಥಳೀಯ ಜನರಿಗೆ ಲಸಿಕೆ ತೆಗೆದುಕೊಳ್ಳದಿರುವುದಕ್ಕೆ ಕಾರಣ ಕೇಳಿದರು. ನಗರದಿಂದ ಬಹಳ ದೂರದಲ್ಲಿದ್ದೆವೆ. ಹೋಗಲು ಬರಲು ತೊಂದರೆಯಾಗುತ್ತಿದೆ.ಆದ್ದರಿಂದ ತೆಗೆದುಕೊಂಡಿಲ್ಲ ಎಂದು ಜನರು ಹೇಳಿದರು. ಆಗ ತಹಸೀಲ್ದಾರ ಸುರೇಶ ವರ್ಮಾ ಹಾಗೂ ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಅವರು ನಗರಸಭೆಯ ಸದಸ್ಯ ಸೂರ್ಯಕಾಂತ ಕೋಬಾಳ ಅವರ ನೇತೃತ್ವದಲ್ಲಿ ರಾಮಘಡ ಕಾಲೋನಿಯಲ್ಲಿಯೇ ಲಸಿಕಾ ಕೇಂದ್ರವನ್ನು ತೆಗೆಯಲು ಕ್ರಮಕೈಗೊಂಡರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ ಸುರೇಶ ವರ್ಮಾ, ಪ್ರತಿಯೊಬ್ಬ ಕುಟುಂಬದ ಸದಸ್ಯರು ಯಾವುದೇ ಭಯ ಆತಂಕವಿಲ್ಲದೆ ಕೋವಿಡ್ ಉಚಿತ ಲಸಿಕೆಯನ್ನು ತಾವು ಮತ್ತು ತಮ್ಮ ಕುಟುಂಬಸ್ಥರು ಕಡ್ಡಾಯವಾಗಿ ಪಡೆಯಲು ಮುಂದಾಗಬೇಕು.ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಕೋವಿಡ್ ಬಾರದಂತೆ ತಡೆಗಟ್ಟು ಸಾಮರ್ಥ್ಯ ನಮ್ಮ ದೇಹದಲ್ಲಿ ಉಂಟಾಗುತ್ತದೆ.ಈಗಾಗಲೇ ಲಸಿಕಾ ಅಭಿಯಾನ ಸಾಕಷ್ಟು ಪ್ರಮಾಣದಲ್ಲಿ ಮಾಡಿದರೂ ಜನರು ಲಸಿಕೆ ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ.ಅಲ್ಲದೇ ನಿಮಗೆ ಲಸಿಕೆ ತೆಗೆದುಕೊಳ್ಳು ದೂರವಾಗುತ್ತದೆ ಎಂದು ತಿಳಿದಿ ನಿಮ್ಮ ಕಾಲೋನಿಯಲ್ಲಿಯೇ ಲಸಿಕಾ ಕೇಂದ್ರ ತೆಗೆಯಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಲಸಿಕೆ ಬಗ್ಗೆ ತಪ್ಪುಗ್ರಹಿಕೆಗೆ ವ್ಯಾಪಕಪಡಿಸಲಾಗಿದೆ. ಅದರೊಂದಿಗೆ ಬೇಜವಾಬ್ದಾರಿತನವು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕರೋನಾವನ್ನು ದೂರವಿರಿಸಲು ಪ್ರತಿಯೊಬ್ಬರ ಲಸಿಕೆ ಹಾಕಿಸಿಕೊಳ್ಳಬೇಕು. ಹೊರಗಡೆ ಬರುವಾಗ ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಾಗಿದೆ.ಅಲ್ಲದೇ ಸ್ವಯಂ ಪ್ರೇರಣೆಯಿಂದ ಬಂದು ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯ ಸೂರ್ಯಕಾಂತ ಕೋಬಾಳ, ಸಿಡಿಪಿಓ ಡಿ.ಎಸ್.ಹೊಸಮನಿ, ನಗರಸಭೆಯ ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಅಂಗನವಾಡಿ ಮೇಲ್ವಿಚಾರಕಿ ಮೀನಾಕ್ಷಿ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಯುಸೂಫ್ ನಾಕೇದಾರ, ಗ್ರಾಮ ಲೆಕ್ಕಿಗ ಶ್ರೀಮಂತ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here