ಕಲಬುರಗಿ ಜನ ಸೋಂಬೆರಿ ಎಂಬ ಹೇಳಿಕೆಗೆ ನಿರಾಣಿ ಪ್ರತಿಕ್ರಿಯೆ

0
20

ಕಲಬುರಗಿ: ಜನರ ಸೋಂಬೆರಿಗಳು ಎಂದು ಹೇಳಿಕೆ ನೀಡಿರುವ ಜಿಲ್ಲಾ ಉಸ್ತುವಾರಿ ಮುರಗೇಶ್ ನಿರಾಣಿ ಇಂದು ನಗರ ಖಾಸಗಿ ಹೋಟಲ್ ನಲ್ಲಿ ಮಾತನಾಡಿ ನಾನು ಯಾರ ಮನಸ್ಸಿಗೂ ನೋವು ಉಂಟು ಮಾಡಲು ಈ ರೀತಿ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯಿಂದ ಮನಸ್ಸಿಗೆ ನೋವು ಆಗಿದ್ದರೆ ಕ್ಷಮಿಸಿ ಎಂದಿದ್ದಾರೆ.

ಅವರು ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಕಲಬುರಗಿ ಜನರ ಬಗ್ಗೆ ಹಗುರವಾಗಿ ಮತಾನಡಿ ಈಗ ನೋಡಿದರೆ ಮತದಾನ ಕೇಳುತ್ತಿದ್ದೀರಿ ಎನಾದರು ಕೋಪ ಇದ್ದರೆ ಇಲ್ಲೆ ಬೈದು ಬೀಡಿ, ಎಲ್ಲೋ ಕಂತು ಕಲಬುರಗಿ ಜನರಿಗೆ ಬಯೋದು ಎಷ್ಟು ಸರಿ ಎಂದು ಪತ್ರಕರ್ತರು ಅಸಮಧಾನ ವ್ಯಕ್ತಪಡಿಸಿದರು.

Contact Your\'s Advertisement; 9902492681

ಪಾಲಿಕೆ ಚುನಾವಣೆಯ ಪ್ರಣಾಳಿಕೆ ಬಿಡುಗಡೆ ಮಾಡಿ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ನಮ್ದೆ ಸರಕಾರವಿದೆ ಪಾಲಿಕೆಯಲ್ಲಿಯೂ ನಮ್ದೆ ಸರಕಾರ ಬಂದರೆ ಕಟ್ಟಕಡೆಯ ಜನರಿಗೆ ನಮ್ಮ ಸೌಲಭ್ಯ ಒದಗಿಸುತ್ತೇವೆ ಎಂದು ಸಚಿವ ನಿರಾಣಿ ಭರವಸೆ ನೀಡಿದರು.

ಸಚಿವರ ಭರವಸೆಗೆ ಪ್ರಶ್ನಿಸಿದ ಪತ್ರಕರ್ತರು ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜೀನ ಸರಕಾರ ಐದು ವರ್ಷ ಪೂರೈಸಿದೆ. ಈ ಐದು ವರ್ಷಗಳಲ್ಲಿ ಬಿಜೆಪಿ ಸರಕಾರದಿಂದ ಕಲಬುರಗಿಗೆ ನೀಡಿರುವ ಒಂದು ಕುಡುಗೆ ಹೇಳಿ ಎಂದು ಪ್ರಶ್ನಿಸಿದರು.

ಸಚಿವರು ಕೆಲ ಹೊತ್ತು ಕಕಾಬಿಕಿಯಾಗಿ ನಂತರ ನೀತಿಸಂಹಿತೆ ಜಾರಿ ಇದೆ ಚುನಾವಣೆಯ ನಂತರ ಮತ್ತೊಮ್ಮೆ ಮಾತನಾಡಿ ತಿಳಿಸುತ್ತೇವೆ ಎಂದು ಪ್ರಶ್ನೆಗಳನ್ನು ತಳ್ಳಿಹಾಕಿದರು.

ಕಲಬುರಗಿಗೆ ಸಿಗಬೇಕಾದ 7 ಬೃಹತ್ ಯೋಜನೆಗಳು ಕಸಿದುಕೊಂಡ ಬಿಜೆಪಿ ಸರಕಾರ, ಸಚಿವ ಸಂಪುಟದಲ್ಲಿ ಈ ಭಾಗಕ್ಕೆ ಅನ್ಯಾಯ, ಈಗ ದೂರದರ್ಶನ ಸಹ ರದ್ದು ಮಾಡುವ ಯೋಚನೆ ಇದೆ. ಮುಂದೆ ಕಲಬುರಗಿಗೆ ಯಾವ ಅವಮಾನ ಮಾಡಬೇಕೆಂದು ಅಂದುಕೊಂಡಿರಿ ಎಂದು ಸಚಿವರಿಗೆ ಪತ್ರಕರ್ತರು ಪ್ರಶ್ನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here