ಬುದ್ಧನ ಮೂರ್ತಿ ಧ್ವಂಸಗೊಳಿಸಿದ ಕಿಡಿಗೇಡಿಗಳ ಬಂಧಿಸಿ: ರಾಜಾ ವೆಂಕಟಪ್ಪ ನಾಯಕ

1
13

ಸುರಪುರ: ಗೋಲ್ಡನ್ ಕೇವ್ ಗವಿ ಬುದ್ಧ ವಿಹಾರದಲ್ಲಿನ ಬುದ್ಧನ ಮೂರ್ತಿ ಧ್ವಂಸಗೊಳಿಸಿದವರನ್ನು ಕೂಡಲೇ ಬಂಧಿಸಬೇಕು,ಇದು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯ ಎನಿಸುತ್ತದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಬೇಸರ ವ್ಯಕ್ತಪಡಿಸಿದರು.

ನಗರದ ಹೊಸಬಾವಿ ಬಳಿಯ ಗೋಲ್ಡನ್ ಕೇವ್ ಗವಿ ಬುದ್ಧ ವಿಹಾರದಲ್ಲಿ ಗೌತಮ್ ಬುದ್ಧನ ಮೂರ್ತಿ ಧ್ವಂಸಗೊಳಿಸಿದ ಸ್ಥಳಕ್ಕೆ ರವಿವಾರ ಬೆಳಿಗ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ,ಜಗತ್ತಿಗೆ ಶಾಂತಿ ಬೋಧಿಸಿದ ಮಹಾತ್ಮನ ಮೂರ್ತಿಯನ್ನು ಧ್ವಂಸಗೊಳಿಸುವ ಕಿಡಿಗೇಡಿಗಳು ಯಾರೇ ಇರಲಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಪೊಲೀಸ್ ಇನ್ಸ್ಪೇಕ್ಟರ್ ಅವರಿಗೆ ತಾಕೀತು ಮಾಡಿದರು.ಅಲ್ಲದೆ ಈ ಸ್ಥಳವನ್ನು ನಗರಸಭೆ ಮತ್ತು ತಾಲೂಕು ಆಡಳಿತ ಗಮನಹರಿಸಿ ಅಭೀವೃಧ್ಧಿ ಪಡಿಸಬೇಕು ಮತ್ತು ಈ ಸ್ಥಳಕ್ಕೆ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಆಗಮಿಸಿದ್ದ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್ ಮಾತನಾಡಿ,ಮಹಾತ್ಮ ಗೌತಮ್ ಬುದ್ಧನನ್ನು ಜಗತ್ತು ಶಾಂತಿಧೂತ ಎಂದು ಸ್ಮರಿಸುತ್ತದೆ ಆದರೆ ಕಿಡಿಗೇಡಿಗಳು ಬುದ್ಧನ ಮೂರ್ತಿಯನ್ನೆ ಧ್ವಂಸಗೊಳಿಸುವ ದುಸ್ಕೃತ್ಯ ಮಾಡಿರುವುದು ಖಂಡನಿಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ರಾಜಾ ವೇಣುಗೋಪಾಲ ನಾಯಕ,ಮಲ್ಲಣ್ಣ ಸಾಹು ಮುಧೋಳ ನರಸಿಂಗಪೇಠ,ವೆಂಕಟೇಶ ಹೊಸ್ಮನಿ,ವೆಂಕಟೇಶ ರಡ್ಡಿ, ಮಾನಪ್ಪ ಕಟ್ಟಿಮನಿ,ಮಾನಪ್ಪ ಬಿಜಾಸಪುರ,ಭೀಮರಾಯ ಸಿಂಧಗೇರಿ,ಮಾಳಪ್ಪ ಕಿರದಹಳ್ಳಿ,ರಾಹುಲ್ ಹುಲಿಮನಿ,ಹಣಮಂತ್ರಾಯ ಮಕಾಶಿ,ವೆಂಕಟೇಶ ದಳವಾಯಿ,ಪ್ರಶಾಂತ ಉಗ್ರಂ, ಸಂಜೀವಪ್ಪ ಆಲ್ದಾಳ,ಚಂದಪ್ಪ ಪಂಚಮ್,ಮಹೇಶ ಯಾದಗಿರಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here