ಚಿಂಚೋಳಿ: ಕೋವಿಡ್-19 ಅಲೆಗೆ ಜನರು ತತ್ತರಿಸಿ ಹೋಗಿದ್ದು, ಸುಲೇಪೇಟ ಗ್ರಾಮದಲ್ಲಿ ಅಸ್ವಚ್ಚತೆಯಿಂದ ಸಾಂಕ್ರಮೀಕ ರೋಗದ ಭಿತಿಯಲ್ಲಿ ಜನ ವಾಸಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಪಟ್ಟಣದ ಬಸವೇಶ್ವರ ವೃತದಿಂದ ಸರ್ಕಾರಿ ಕನ್ಯಾ ಪ್ರೌಢ ಶಾಲೆಗೆ ಮತ್ತು ನಾಡ ಕಛೇರಿಗೆ ತೇರಳುವ ಮುಖ್ಯ ರಸ್ತೆಯ ಮೇಲೆ ಚರಂಡಿ ನೀರು ತುಂಬಿ ಹರಿಯುತ್ತಿದ್ದು, ಕೆರೆ ರೀತಿಯಲ್ಲಿ ನಿರ್ಮಾಣವಾಗಿದೆ. ಇದರಿಂದ ಗಬ್ಬು ವಾಸನೆಯಿಂದಾಗಿ ವಿದ್ಯಾರ್ಥಿಗಳು ಸಾರ್ವಜನಿಕರು ಮೂಗ್ಗು ಮುಚ್ಚಿಕೊಂಡು ಓಡಾಡುವ ಸನ್ನಿವೇಶ ನಿರ್ಮಾಣವಾಗಿದೆ.
ನಾಡ ಕಚೇರಿಯು ಕನ್ಯಾ ಪ್ರೌಢ ಶಾಲೆಯ ಹಿಂದುಗಡೆ ಸ್ಥಳಾಂತರಿಸಲಾಗಿದರಿಂದ ಕಚೇರಿ ಕೇಲಸಕ್ಕಾಗಿ ಬರುವ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಸಾಕಷ್ಟು ತೂಂದರೆಗಳು ಅನುಭವಿಸುತ್ತಿದ್ದು, ವಾಹನ ಸವಾರರು ಸಂಚಾರಿಸಲು ಪರದಾಡುತ್ತಿದ್ದಾರೆ.
ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಚರಂಡಿ ನೀರು ರಸ್ತೆ ತುಂಬಾ ಹರಿಯುತ್ತದೆ. ಸಾಂಕ್ರಮೀಕ ರೋಗದ ಭೀತಿ ಎದುರಾಗಿದ್ದೆ ಅಲ್ಲದೆ ಹಾವು ಛೇಳುಗಳು ಭೀತಿ ಇದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ವಿದ್ಯಾರ್ಥಿಗಳು ಜೀವ ಭಯದಿಂದ ಸಂಚರಿಸುತ್ತೀದ್ಧಾರೆ. ಅಲ್ಲದೆ ವಾಹನ ಸವಾರರು ಆಯಾ ತಪ್ಪಿ ಬೀಳುತ್ತೀದ್ದಾರೆ ಸಣ್ಣ ಪುಟ್ಟ ಗಾಯವಾಗಿರುವ ಘಟನೆಗಳು ಸಹ ನಡೆಯುತ್ತಿದೆ ಎಂದು
ಈ ಪ್ರದೇಶದಲ್ಲಿ 1000ಕ್ಕೂ ಹೆಚ್ಚು ಜನ ವಾಸವಾಗಿದ್ದು, ಸಂಜೆಯಾಗುತ್ತಲೇ ಸೊಳ್ಳೆಗಳ ಕಾಟ, ದುರ್ವಾಸನೆ ಸೇರಿ ಹಗಲು ರಾತ್ರಿ ಮನೆಯ ಬಾಗಿಲು ಮುಚ್ಚಿಕೊಂಡು ಇರುವ ಸನ್ನಿವೇಶ ಇದೆ. ಈ ಕುರಿತು ಹಲವಾರು ಬಾರಿ ಸಂಭಂದಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯೀಸುತ್ತೀದ್ದಾರೆ ಇದರಿಂದ ಯಾವುದೇ ಸಮಸ್ಯೆ ಬಗ್ಗೆ ನಿವಾರಿಸುತ್ತಿಲ್ಲೆ ಎಂದ ಇಲ್ಲಿನ ನಿವಾಸಿಗಳು ಕಿಡಿಕಾರಿದ್ದಾರೆ.
ಇನ್ನಾದರೂ ಕ್ಷೇತ್ರದ ಶಾಸಕರು ಸಂಭಂದಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಇಲ್ಲಿನ ಸಮಸ್ಯೆಗಳ ದುರಸ್ತಿಗೆ ಮುಂದಾಗಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಸಂತೋಷ ಜಾಬೀನ್ ಆಗ್ರಹಿಸಿದ್ದಾರೆ.