ಕಲಬುರಗಿ: ಈ ಭಾಗದದಲ್ಲಿರುವ ದೂರದರ್ಶನ ಕೇಂದ್ರವು ಯಾವುದೇ ಕಾರಣಕ್ಕೂ ಮುಚ್ಚಬಾರದೆಂದು ಅಖಿಲ ಭಾರತ ಯುವಜನ ಒಕ್ಕೂಟ (ಎಐವೈಎಫ್) ಜಿಲ್ಲಾ ಸಮಿತಿ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ನೇತೃತ್ವದಲ್ಲಿ ಸಚಿವ ರಾಮುಲು ಅವರಿಗೆ ಭೇಟಿಯಾಗಿ ಮನವಿ ಮಾಡಿದ್ದಾರು.
ಈ ಭಾಗದ ರೈತರಿಗೆ,ವಿದ್ಯಾರ್ಥಿಗಳಿಗೆ, ಯುವಕರಿಗೆ ಹೆಚ್ಚಿನ ಮಾಹಿತಿ ನೀಡಿ ಹಿ೦ದುಳಿದ ಭಾಗ ಅಭಿವೃದ್ಧಿ ಮಾಡಲೆ೦ದು ಐತಿಹಾಸಿಕ ದೂರದರ್ಶನ ಸ್ಥಾಪಿಸಲಾಗಿದೆ. ಸ್ಥಳೀಯ ಕಲಾವಿದರಿಗೆ ವೇದಿಕೆ ಕೊಡುವುದರೊಂದಿಗೆ ಪ್ರತಿಭೆಗಳನ್ನು ಗುರ್ತಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಕಳುಹಿಸುವ ಪ್ರಾಮಾಣಿಕ ಪ್ರಯತ್ನ ದೂರದರ್ಶನ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ದೂರದರ್ಶನ ಮುಚ್ಚುತ್ತಿರುವುದು ಖಂಡನೀಯವಾಗಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿ ಹಲವಾರೂ ಯೋಜನೆಗಳನ್ನು ಕಿತ್ತುಕೊ೦ಡು ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಭಾಗದ ಜನರ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ, ಏಕೆಂದರೆ ಕಲ್ಯಾಣ ಕರ್ನಾಟಕ ಕೇವಲ ಹೆಸರಿಗೆ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಕೊಡುವುದರೊಂದಿಗೆ ಈ ಭಾಗಕ್ಕೆ ಹೊಸ ಹೊಸ ಯೋಜನೆಗಳು ತ೦ದು ಹೆಚ್ಚಿನ ಹಣ ಬಿಡುಗಡೆಗೊಳಿಸಿ ಅಭಿವೃದ್ಧಿ ಮಾಡಬೇಕೆಂದು ಮನವಿ ಪತ್ರ ನೀಡಿ ಅಟ್ಟೂರ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿರಪಾಕ್ಷಪ್ಪ ಚೆಟ್ಟಿ, ಶರಣಬಸಪ್ಪ ಬಿರಾದಾರ, ನಂದಕುಮಾರ ಮಾಲಿಪಾಟೀಲ ಇತರರು ಉಪಸ್ಥಿತರಿದ್ದರು.