ಸುರಪುರ: ಸರಳವಾಗಿ ನಡೆದ ಶ್ರೀ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವ

0
7

ಸುರಪುರ: ರಾಜ್ಯದಲ್ಲಿ ಕೋವಿಡ್ ಇರುವ ಕಾರಣದಿಂದ ಸರಕಾರ ಜಾರಿಗೊಳಿಸಲಾದ ನಿಯಮಗಳಿಂದಾಗಿ ಈಬಾರಿಯ ಶ್ರೀ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವಾಗಿ ಆಚರಿಸಲಾಯಿತು.

ಮಂಗಳವಾರ ಬೆಳಿಗ್ಗೆ ಶ್ರೀ ವೇಣುಗೋಪಾಲಸ್ವಾಮಿಯ ಮೂರ್ತಿಗೆ ಪೂಜೆ ಕೈಂಕರ್ಯ ನಡೆದವು,ಆದರೆ ಯಾವುದೇ ಅದ್ಧೂರಿ ಆಚರಣೆಗಳು ಇಲ್ಲದಿದ್ದರು,ಸಂಪ್ರದಾಯದಂತೆ ಆಚರಿಸಿಕೊಂಡು ಬರುತ್ತಿರುವ ದೇವರ ಕಂಬೋತ್ಸವವನ್ನು ನಡೆಸಲಾಯಿತು.ಪ್ರತಿವರ್ಷದ ಜಾತ್ರೆಯ ಸಂದರ್ಭದಲ್ಲಿ ಹಾಕಲಾಗುತ್ತಿದ್ದ ಅನೇಕ ಕಂಬಗಳ ಬದಲಾಗಿ,ದೇವಸ್ಥಾನದ ಆವರಣದಲ್ಲಿ ಕೇವಲ ಒಂದು ಕಂಬವನ್ನು ಹಾಕಿ ಸಂಜೆಯ ವೇಳೆಗೆ ನಡೆದ ಕಂಬೋತ್ಸವಕ್ಕೆ ಸಂಸ್ಥಾನದ ವತನದಾರರು ಚಾಲನೆ ನೀಡುವ ಮೂಲಕ ಕಂಬೋತ್ಸವ ನಡೆಸಲಾಯಿತು.

Contact Your\'s Advertisement; 9902492681

ಕಂಬೋತ್ಸವ ಆರಂಭಕ್ಕೂ ಮುನ್ನ ಕಂಬಕ್ಕೆ ಪೂಜೆ ಸಲ್ಲಿಸಿ ನಂತರ ನಗರದ ವಿವಿಧ ಕೇರಿಗಳ ಜನರು ಸೇರಿ ಕಂಬೋತ್ಸವ ಆಚರಿಸಿದರು.ನಂತರ ದೇವರ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ಜರುಗಿತು.ಕೋವಿಡ್ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರದಂತೆ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕರು ತಿಳಿಸಿದ್ದರಾದರು,ಶ್ರೀ ವೇಣುಗೋಪಾಲಸ್ವಾಮಿಯ ಭಕ್ತರು ಅನೇಕ ಜನರು ಆಗಮಿಸಿದ್ದು ಕಂಡುಬಂತು.

ತಿವರ್ಷದಂತೆ ಅನೇಕ ಅಂಗಡಿ ಮುಂಗಟ್ಟುಗಳು ಇಲ್ಲದಿದ್ದರು ಅಲ್ಲೊಂದು ಇಲ್ಲೊಂದು ಅಂಗಡಿ ಹಾಕಲಾಗಿತ್ತು,ಭಕ್ತರು ಕೂಡ ಅನೇಕರು ಆಗಮಿಸಿ ಕಂಬೋತ್ಸವದಲ್ಲಿ ಭಾಗವಹಿಸಿ ನಂತರ ಸಂಜೆ ಮನೆಗೆ ಮರಳುವಾಗ ಬಜ್ಜಿ ಜಿಲೇಬಿ ಸೇರಿದಂತೆ ವಿವಿಧ ತಿನಿಸುಗಳನ್ನು ಖರಿದಿ ಮಾಡಿಕೊಂಡು ಮರಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here