ಗೌತಮ ಬುದ್ಧ ವಿಶ್ವದ ಜ್ಞಾನದ ಬೆಳಕು: ಸುಂದರ ಸಮಾಜ ಕಟ್ಟುವ ಸಂಕಲ್ಪ ಮಾಡೋಣ

0
11

ಕಲಬುರಗಿ: ಗೌತಮ ಬುದ್ಧ ವಿಶ್ವದ ಜ್ಞಾನದ ಬೆಳಕು.ಆ ಜ್ಞಾನದ ಬೆಳಕಿನಲ್ಲಿ ರಾಜಕೀಯ ರಹಿತ,ಸ್ವಾರ್ಥ ರಹಿತ,ಜಾತಿ ರಹಿತವಾದ ಸಮಾಜ ಕಟ್ಟುವ ಸಂಕಲ್ಪ ಮಾಡುವುದರ ಮೂಲಕ ಬುದ್ಧನನ್ನು ಸ್ಮರಿಸುವ ಕೆಲಸ ಮಾಡೋಣ ಎಂದು ಬಿಜೆಪಿ ರಾಜ್ಯ ಯುವ ಮುಖಂಡ ಭೀಮಾಶಂಕರ ಪಾಟೀಲ್ ಹೇಳಿದರು.

ತಾಲೂಕಿನ ನಿಂಬರ್ಗಾ ಗ್ರಾಮದ ಬುದ್ಧ ನಗರದಲ್ಲಿ ಗೌತಮ ಬುದ್ಧರ ಪ್ರತಿಮೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಭೀಮಾಶಂಕರ ಪಾಟೀಲ್ ಅವರು ಬುದ್ಧ,ಬಸವ,ಅಂಬೇಡ್ಕರ್ ಈ ಜಗದ ಹೆಮ್ಮೆ.ಅವರ ಆದರ್ಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಪ್ರತಿಮೆಗಳನ್ನು ಸ್ಥಾಪಿಸಿದಕ್ಕೆ ಸಾರ್ಥಕವಾಗುತ್ತದೆ.ಆಳಂದ ತಾಲೂಕಿನ ದಲಿತ ಸಮಾಜವನ್ನು ಕೆಲವರು ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತಿದ್ದು ಅಂಥವರಿಂದ ಸಮುದಾಯದ ಜನ ಜಾಗೃತವಾಗಿರಬೇಕು ಎಂದರು.

Contact Your\'s Advertisement; 9902492681

ಮತಗಳಿಗಾಗಿ ದಲಿತ ಸಮುದಾಯವನ್ನು ಬಳಸಿಕೊಂಡು ಅವರನ್ನು ನಿರ್ಲಕ್ಷ್ಯ ಮಾಡುತ್ತಿರುವ ಕೆಲಸ ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿದೆ.ಇಂಥಹ ಅನ್ಯಾಯದ ಪರಮಾವಧಿ ನಿಲ್ಲಬೇಕು ಎನ್ನುವುದಾದರೆ ಸಮುದಾಯದ ಜನ ಜಾಗೃತರಾಗಬೇಕು.ಬುದ್ಧನ ಜ್ಞಾನದ ಬೆಳಕು ಜಗವ ಬೆಳಗಿದಂತೆ ಆಳಂದ ತಾಲೂಕಿನಾದ್ಯಂತ ಬೆಳಗಲಿ ಎಂದು ಭಗವಾನ ಬುದ್ಧನಲ್ಲಿ ಪ್ರಾರ್ಥಿಸುವೆ ಎಂದರು.

ಪ್ರತಿಮೆಗಳನ್ನು ಸ್ಥಾಪಿಸಿ ಅವುಗಳಿಗೆ ರಾಜಕೀಯ ಬಣ್ಣ ಬಳಿದು ಅವಮಾನಿಸುವ ಕೆಲಸ ಯಾರೂ ಕೂಡಾ ಮಾಡಬಾರದು. ತಾಲೂಕಿನ ದಲಿತ ಸಮುದಾಯದ ಅಭಿವೃದ್ಧಿಗೆ ರಾಜಕೀಯ ರಹಿತನಾಗಿ,ಜಾತಿ ರಹಿತವಾಗಿ ನಾನು ಸದಾ ಸಿದ್ಧ ಎಂದು ಭೀಮಾಶಂಕರ ಪಾಟೀಲ್ ಹೇಳಿದರು.ನಿಂಬರ್ಗಾ ಗ್ರಾಮದ ಭೀಮನಗರ,ಬುದ್ಧನಗರದ ವಿದ್ಯಾರ್ಥಿಗಳಿಗೆ ಓದಲು ಸಹಾಯ ಧನ ನೀಡುವುದಾಗಿ ಘೋಷಿಸಿದರು.

ಬೌದ್ಧ ಧರ್ಮಗುರು ಅಮರ ಜ್ಯೋತಿ ಭಂತೇಜಿ, ತಾಲೂಕಿನ ಹಿರಿಯ ದಲಿತ ಹೋರಾಟಗಾರ ದಯಾನಂದ ಶೇರಿಕಾರ್,ನಿಂಬರ್ಗಾ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮೆಹಬೂಬ್ ಆಳಂದ,ಯುವ ಬಿಜೆಪಿ ಮುಖಂಡ ಮಲ್ಲಿನಾಥ ಒಡೆಯರ್,ದಲಿತ ಸಂಘರ್ಷ ಸಮಿತಿಯ ವಿಠಲ್ ಕೋನೆಕರ್ ,ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ರಮೇಶ ಜಗತಿ,ತಾಲೂಕಾಧ್ಯಕ್ಷ ಮಹೇಶ ಹಿರೋಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here