ಪಠ್ಯದ ಜತೆಗೆ ಪಠ್ಯೇತರ ಚಟುವಕೆ ಮುಖ್ಯ

0
30

ಕಲಬುರಗಿ : ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯ ಅವಶ್ಯಕವಾಗಿವೆ ಎಂದು ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥೆ ಶ್ರೀಮತಿ ಜಾನಕಿ ಹೊಸುರು ಹೇಳಿದರು.

ಶರಣಬಸವೇಶ್ವರ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ರಾಷ್ಟ್ರೀಯ ಕೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಹೊಸ ಶಿಕ್ಷಣ ನೀತಿಯ ಪ್ರಕಾರ ನಾಲ್ಕು ವರ್ಷದ ಪದವಿ ಕೋರ್ಸಿನಲ್ಲಿ ದೈಹಿಕ ಶಿಕ್ಷಣವನ್ನು ಆಯ್ಕೆಯ ವಿಷಯವನ್ನಾಗಿ ಪರಿಚಯಿಸಿದ್ದಕ್ಕಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳುತ್ತಾ, ವಿದ್ಯಾರ್ಥಿಗಳು ಪ್ರತಿನಿತ್ಯ ಆಟವಾಡುವುದರಿಂದ ದೈಹಿಕವಾಗಿ, ಮಾನಸಿಕವಾಗಿ ಮತ್ತು ಶಾರೀಕವಾಗಿ ಸದಡರಾಗಲು ಸಾಧ್ಯವೆಂದರು. ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡುವದರಿಂದ ಸ್ಪರ್ಧೆಯಲ್ಲಿ ಗೆಲವು ಪಡೆಯಲು ಸಾಧ್ಯವೆಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಕಾಲೇಜಿನ ಪ್ರಾಚಾರ್ಯೆ ಡಾ.ಇಂದಿರಾ ಶೆಟಕಾರ ಅವರು ಮಹಾವಿದ್ಯಾಲಯದಲ್ಲಿ ಮಹಾನಾಯಕರ ದಿನಾಚರಣೆಗಳನ್ನು ಆಚರಿಸುವದರಿಂದ ಸಾಧಕರ ಸಾಧನೆಯ ಬಗ್ಗೆ ಅವರ ಶ್ರೇಷ್ಠ ವ್ಯಕ್ತಿತ್ವದ ಬಗ್ಗೆ ಸ್ಮರಿಸಬಹುದೆಂದು ಹೇಳಿದರು. ಆಟಗಳನ್ನು ಆಡುವದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದಢರಾಗಬಹುದು ಅಲ್ಲದೆ ಆಡುವದರಿಂದ ವಿದ್ಯಾರ್ಥಿಗಳು ಆತ್ಮ ಸ್ಥೈರ್ಯದೊಂದಿಗೆ ಶಾರೀರಿಕವಾಗಿ ವಿಕಾಸಗೊಳ್ಳಬಹುದು ಎಂದರು.

ಸದರಿ ಕಾರ್ಯಕ್ರಮದಲ್ಲಿ ಕಾಲೇಜಿನ ದೈಹಿಕ ನಿರ್ದೇಶಕರಾದ ಮಹೇಶ ನಿಲೇಗಾರ ಉಪಸ್ಥಿತರಿದರು, ಕಾಲೇಜಿನ ಸಕಲ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here