ಮನೆ ಬಾಗಿಲಿಗೆ ವಿನೂತನ ತಾಂತ್ರಿಕ ಸೌಲಭ್ಯ ಹಾಗೂ ಆರೋಗ್ಯ ಸೇವೆ:ಮುಖ್ಯಮಂತ್ರಿ

0
23

ಬೆಂಗಳೂರು: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರz ಅಗ್ರಹಾರ ದಾಸರಹಳ್ಳಿಯ ಹಳೆ ಸರ್ಕಾರಿ ಶಾಲಾ ಕಟ್ಟಡವನ್ನು ಉನ್ನತೀಕರಿಸಿ, ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಬೆಂಗಳೂರು ನಗರದಲ್ಲಿ ಒಂದು ಸರ್ಕಾರಿ ಶಾಲೆ ಈ ರೀತಿ ಅಭಿವೃದ್ದಿ ಹೊಂದಿ ತಲೆ ಎತ್ತಿ ನಿಂತಿರುವುದು ಹೆಮ್ಮೆಯ ಸಂಗತಿ. ಖಾಸಗಿ ವಲಯದ ಶಾಲೆಗಳಿಗೆ ಪೈಪೋಟಿ ನೀಡಿ ಅಷ್ಟೇ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಈ ಶಾಲೆಯು ಯಶ್ವಸಿಯಾಗಿದೆ. ಸಾರ್ವಜನಿಕರ ಒಳಿತಿಗೆ ಈ ಜಾಗ ಉಪಯೋಗವಾಗಿ ಇದೊಂದು ಮಾದರಿ ಶಾಲೆ ಎನಿಸಿದೆ, ನಾಗರೀಕರ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಯತ್ನಶೀಲವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಂಗೋಳ್ಳಿ ರಾಯಣ್ಣ ಕ್ರೀಡಾ ಸಂಕೀರ್ಣದ ಆವರಣದಲ್ಲಿ ಹೊಸ ಕೋವಿಡ್ ತಪಾಸಣಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಿಲಾಯಿತು. ವಸತಿ ಹಾಗೂ ಮೂಲಭೂತ ಸೌಕರ್ಯ ಸಚಿವರಾದ ವಿ. ಸೋಮಣ್ಣ ಗಣ್ಯರನ್ನು ಸ್ವಾಗತಿಸಿದರು.
ಸಚಿವರಾದ ಆರ್.ಅಶೋಕ್, ಗೋಪಾಲಯ್ಯ, ಸುಧಾಕರ್, ಭೈರತಿ ಬಸವರಾಜ್, ಮುನಿರತ್ನ, ಹಾಗೂ ಸಂಸದ ತೇಜಸ್ವಿ ಸೂರ‍್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here