ನ್ಯಾ. ಸದಾಶಿವ್ ಆಯೋಗದ ವರದಿ ಜಾರಿಗಾಗಿ ಶಾಸಕ ಪಾಟೀಲ ನಿವಾಸದ ಮುಂದೆ ಧರಣಿ

0
22

ಕಲಬುರಗಿ: ಮೂರು ದಶಕಗಳ ಬೇಡಿಕೆಯಾದ ನ್ಯಾಯಮೂರ್ತಿ ಎ. ಸದಾಶಿವ್ ಆಯೋಗದ ವರದಿ ಜಾರಿಗಾಗಿ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾದಿಗ ಸಮಾಜದ ಕಾರ್ಯಕರ್ತರು ಅಫಜಲಪೂರ ಶಾಸಕ ಎಂ.ವೈ.ಪಾಟೀಲ ಅವರ ನಿವಾಸದ ಮುಂದೆ ಧರಣಿ ಸತ್ಯಾಗ್ರಹ ಮಾಡಿದರು.

ಪ್ರತಿಭಟನೆಕಾರರು ನಂತರ ಮನವಿ ಪತ್ರ ಸಲ್ಲಿಸಿ, ಅಫಜಲಪೂರ ತಾಲೂಕು ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಾದಿಗ ಸಮಾಜ ಬಾಂಧವರು, ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿಯ ವಿವಿಧ ಯೋಜನೆಗಳ ಆಯ್ಕೆ ಸಮಿತಿಯ ಅಧ್ಯಕ್ಷರು ಲೀಡಕರ ಯೋಜನೆ ಆಗಿರಬಹುದು ತಾವು ಆರ್ಥಿಕವಾಗಿ ಹಿಂದುಳಿದ ಸಮಾಜಕ್ಕೆ ಯೋಜನೆಗಳ ಸೌಲತ್ತುಗಳನ್ನು ಆದ್ಯತೆ ಮೇಲೆ ಕೊಡಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ಆಳಂದ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಡಾ. ಬಾಬು ಜಗಜೀವನರಾಮ್ ಅವರ ಸಮುದಾಯ ಭವನವನ್ನು ಎನ್‌ಸಿಸಿ ಯೋಜನೆಯಲ್ಲಿ ಮಾದಿಗರ ಬಡಾವಣೆಗಳಲ್ಲಿ ಸಿಸಿ ರಸ್ತೆ, ಒಳಚರಂಡಿ, ಕುಡಿಯುವ ನೀರಿನ ಬೋರವೆಲ್ಲುಗಳನ್ನು ಹಾಕಿಸುವಂತೆ, ಮಾದಿಗ ಸಮಾಜದ ಬಡಾವಣೆಗಳಲ್ಲಿ ಅಭಿವೃದ್ಧಿಗೆ ಆದ್ಯತೆ ಕೊಡುವಂತೆ ಅವರು ಆಗ್ರಹಿಸಿದರು.

ಮಾದಿಗ ಸಮಾಜಕ್ಕೆ ನಿಗಮ ಮಂಡಳಿಗಳಿಗೆ ಆದ್ಯತೆ ಕೊಡುವಂತೆ ಹಾಗೂ ವಿವಿಧ ಯೋಜನೆಗಳ ಆಯ್ಕೆ ಸಮಿತಿಗಳ ಅಧ್ಯಕ್ಷರು, ಲೀಡಕರ್ ಯೋಜನೆ ಆಗಿರಬಹುದು. ಯಶಸ್ವಿ ಯೋಜನೆಯಲ್ಲಿ ಇನ್ನೂ ಅನೇಕ ಯೋಜನೆಗಳಲ್ಲಿ ಅಫಜಲಪೂರ ಮತಕ್ಷೇತ್ರದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಸಂಘಟನೆಯ ವಿಭಾಗೀಯ ಅಧ್ಯಕ್ಷ ಚಂದ್ರಕಾಂತ ಕೆ. ನಾಟೀಕಾರ್, ರಮೇಶ ಕಟ್ಟಿಮನಿ, ಜೈರಾಜ ಕಿಣ್ಣಗಿಕರ್, ನಾಗರಾಜ ಮುದ್ನಾಳ, ಹೊನ್ನಪ್ಪ ಎಸ್. ಯಡ್ರಾಮಿ, ಬಿ. ಕರ್ಣ ಕಾಳನೂರ್, ಸಿದ್ದಲಿಂಗ್ ಸಿ. ಕಟ್ಟಿಮನಿ, ನಂದಕಿಶೋರ್ ಕಾಂಬಳೆ, ಶಿವಾಜಿ ಪಟ್ಟಣ್ಣ, ಕಲ್ಯಾಣಿ ಬಿ. ಕಡಿಹಳ್ಳಿ, ಸುದರ್ಶನ ಎಸ್ ನಂಬಿ, ಆನಂದ ತೆಗನೂರ, ಅಶೋಕ್ ಜಗದಾಳೆ, ಧರ್ಮಣ್ಣ ಬಿ. ಪೂಜಾರಿ ಇಟಗಾ, ಅಮರೇಶ ಭಂಡಾರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here