ಉಚಿತ ಕೋವಿಡ್ -19 ಲಸಿಕೆ ಸಂಚಾರಿ ವಾಹನಕ್ಕೆ ಡಾ.ರಮೇಶ್ ಪಾಟೀಲ ಚಾಲನೆ 

0
57

ಆಳಂದ: ಅಳಂದ ತಾಲೂಕಿನ ಕಡಗಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎಲೆ ನವದಗಿ ಗ್ರಾಮದ ಬೋಲನಿ ಗ್ರಾಮದಲ್ಲಿ ಕೋವಿಡ್ ಲಸಿಕೆ ವಾಹನ ಗ್ರಾಮದ ಜನರಿಗೆ ಉಚಿತ ಕೋವಿಡ್-೧೯ ಲಸಿಕೆ ಪ್ರತಿ ಒಬ್ಬರು ತಪ್ಪದೆ ಹಾಕಿಸಿಕೊಳ್ಳಲು ಕಡಗಂಚಿ ಆಡಳಿತ ವೈಧ್ಯಾಧಿಕಾರಿ ಡಾ. ರಮೇಶ ಪಾಟೀಲ ಹೇಳಿದರು.

ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ‌ ಆರೋಗ್ಯದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ ಆದ ಕಾರಣ ಹಳ್ಳಿ – ಗ್ರಾಮಗಳಲ್ಲಿ ಸಂಚಾರಿ ವಾಹನ ಸುತ್ತಿದೆ ಸರಕಾರ ಎಷ್ಟು ಕೆಲಸ ಮಾಡುತ್ತಿದೆ ನಿಮ್ಮ ಮನೆಯ ಬಾಗಿಲಿಗೆ ನಿಮ್ಮ ಊರಿನಲ್ಲೆ ಬರುತ್ತಿದೆ ಅದರ ಉಪಯೋಗ ತೆಗೆದುಕೊಂಡು ನಿಮ್ಮ ಆರೋಗ್ಯದ ಕಡೆ ಲಕ್ಷವಹಿಸಬೇಕು. ಹಾಗೆ ಊರಿಂದ ಊರಿಗೆ ಸಿಟಿ / ನಗರಕ್ಕೆ ಹೊಗುವಾಗ ಅಥವಾ ಯಾವುದೇ ಸಮಾರಂಭಕ್ಕೆ  ಹೋಗುವಾಗ ಮಾಸ್ಕ ಸ್ಯಾನಿಟೇಜರ್ ಅಂತರ ಕಾಪಾಡಿಕೊಳ್ಳಲು  ಮಾಹಿತಿ ನೀಡಿದರು.

Contact Your\'s Advertisement; 9902492681

ಇದೆ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಿಣಾಧಿಕಾರಿ ಗುಂಡಪ್ಪ ದೊಡ್ಡಮನಿ ಮಾತನಾಡುತ್ತಾ ಕೋವಿಡ್ ನಿಂದ ಗುಣಮುಖರಾದವರಿಗೆ ಹಾಗೆ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವ ಹಾಗೂ ಶ್ವಾಸ ಕೋಶವು ಹಾನಿಯಾಗಿರುವ ಕಾರಣದಿಂದ ಕ್ಷಯರೋಗ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಎರಡು ವಾರಕಿಂತ ಸತತ ಕೆಮ್ಮು, ರಾತ್ರಿ ವೇಳೆ ಜ್ವರ ಬೇವರು ಬರುವ ಲಕ್ಷಣ, ಹಸಿವಾಗದೆ ಇರುವುದು, ತೂಕದಲ್ಲಿ ಏರುಪೇರು ಅಗುವುದು ಇಂತಹ ಲಕ್ಷಣ ಕಫದ ಮಾದರಿ ಸಂಗ್ರಹ ತೆಗೆದುಕೊಳ್ಳುವುದು ಹಾಗೆ ಎಕ್ಸ್ ರೇ ಮೂಲಕ ಪತ್ತೆ ಹಚ್ಚಬಹುದು.

ಅತ್ಮಸ್ಥೈರ್ಯ ತುಂಬವ ಕೆಲಸದ ಜೊತೆಗೆ ಲಕ್ಷಣ ಇದ್ದವರಿಗೆ ಕಫದ ಮಾದರಿ ಸಂಗ್ರಹ ಮಾಡಬೇಕಾಗಿದೆ. ಅವರ ಆರೋಗ್ಯ ಬಹಳ ಮುಖ್ಯ ಅದರ ಜೊತೆಗೆ ಕ್ಷಯರೋಗ ಮತ್ತು ಮಹಾ ಮಾರಿ ಕೊರೊನಾ ರೋಗದ  ಬಗ್ಗೆ  ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇಂದು ಒಂದೆ ದಿನ 132 ಜನರಿಗೆ ಕೋವಿಶಿಲ್ಡ್  ಲಸಿಕೆ ಹಾಕಲಾಯಿತು. ಇನ್ನೂ ಮೂರು ದಿನ ಗ್ರಾಮಗಳಲ್ಲಿ ಕೋವಿಶೀಲ್ಡ್ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಆಡಳಿತ ವೈದ್ಯಧಾಕಾರಿ ಮಾಹಿತಿ ನಿಡಿದರು.

ಪ್ರಮುಖರಾದ ಜಿಲ್ಲಾ ಡಿ ಅರ್ ಟಿಬಿ ಟಿಸ್ ಸಮಾಲೋಚಕ ಮಂಜುನಾಥ ಕಂಬಳಿಮಠ, ಕಡಗಂಚಿ ಹಿರಿಯ ಆರೋಗ್ಯ ನಿರೀಕ್ಷಿಣಾಧಿಕಾರಿ ನೀಲಕಂಠ ರಾವ್. ಕಿರಿಯ ಪ್ರಾಥಮಿಕ ಆರೋಗ್ಯ  ಸಂರಕ್ಷಣಾಧಿಕಾರಿ ಇಂದುಮತಿ, ಲ್ಯಾಬ್ ಟೆಕ್ನಿಷನ್ ಸಂತೋಷ, . ಆಶಾ ಕಾರ್ಯಕರ್ತೆಯರಾದ ಜ್ಯೋತಿ, ರೇಣುಕಾ, ಲಸಿಕಾ ಸಂಚಾರಿ ಬಸ್ ಚಾಲಕ ಲಕ್ಷ್ಮಿಕಾಂತ, ಬೋಲನಿ ಉಪ ಕೇಂದ್ರದ  ಗ್ರಾಮದ ಜನರು ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here