ಕಲಬುರಗಿ: ಬಹುಜನ ಸಮಾಜ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಘಟಕದ ವತಿಯಿಂದ ಸ್ವಾಭಿಮಾನದ ಸಂಕೇತ ತಂದೆ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ರವರ ೧೪೨ನೇ ಜಯಂತೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲೆಯ ಉಸ್ತುವಾರಿ ಮಹಾದೇವ ಧನ್ನಿ ಅವರು ಉದ್ಘಾಟಿಸಿದರು.
ರಾಜ್ಯ ಕಾರ್ಯದರ್ಶಿ ಎಲ್.ಆರ್.ಬೋಸ್ಲೆ, ಕಾರ್ಯಕ್ರಮದ ಸಂಯೋಜಕ ಕೆ.ಪ್ರಕಾಶ, ಜೈಭೀಮ್ ಶಿಂಧೆ, ಮೈಲಾರಿ ಶೆಳ್ಳಗಿ, ಜಿಲ್ಲಾಧ್ಯಕ್ಷ ಶರಣು ಸೂಗೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋರಖನಾಥ ದೊಡ್ಡಮನಿ, ಕಜೆನ್ಸಿ ಯಲ್ಲಪ್ಪ ಚಲವಾದಿ, ಶಿವಶರಣಪ್ಪ ಪೋಲಿಸ್ ಪಾಟೀಲ, ಆನಂದ್ ಸಿನ್ನೂರ ಹಾಗೂ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಇದ್ದರು.