ಕಲಬುರಗಿ: ದೆಹಲಿ ರೈತರು ಇದೆ 27 ಕ್ಕೆ ಭಾರತ್ ಬಂದ್ ಗೆ ಬೆಂಬಲವಾಗಿ ಕರ್ನಾಟಕದಲ್ಲೂ ಸಂಪೂರ್ಣ ಬಂದ್ ಗೆ ಬೆಂಬಲಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಯ ಮೂಲಕ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವುದನ್ನು ಖಂಡಿಸಿದರು.
ದೇಶದಲ್ಲಿ ವಿಮಾನಯಾನ, ರೈಲ್ವೆ ಇಲಾಖೆ, ಬಂದರುಗಳು, ವಿದ್ಯುತ್ ಸರಬರಾಜು ಸೇರಿದಂತೆ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಸಂಪೂರ್ಣವಾಗಿ ಖಾಸಗಿ ಒಡೆತನಕ್ಕೆ ವಹಿಸಲು ಹುನ್ನಾರ ಮಾಡುತ್ತಿರುವ ಕೇಂದ್ರ ಸರ್ಕಾರ ಸೇರಿ ಬಿಜೆಪಿ ಆಡಳಿತ ಹೊಂದಿರುವ ರಾಜ್ಯಗಳು ದೇಶವನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುತ್ತಿವೆ ಇದು ಖಂಡನೀಯ ಎಂದು ತಿಳಿಸಿದರು.
ದೆಹಲಿಯಲ್ಲಿ ಕಳೆದ ಹತ್ತು ತಿಂಗಳಿನಿಂದ ರೈತರು ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ, ಅದನ್ನು ಹಿಮ್ಮೆಟ್ಟಿಸಲು ಕೇಂದ್ರ ಸರ್ಕಾರ ರೈತರ ಮೇಲೆ ಲಾಠಿ, ಅಶ್ರುವಾಯು ಸೇರಿದಂತೆ ಫಿರಂಗಿಗಳು ಸಹ ಪ್ರದರ್ಶಿಸಿ ಅಟ್ಟಹಾಸ ಮೆರೆಯುತ್ತಿದೆ. ರೈತರಿಗೆ ಕರೆದು ಮಾತನಾಡುವ ತಾಕತ್ತಿಲ್ಲದ ಸರ್ಕಾರ ವಾಮ ಮಾರ್ಗಗಳು ಹಿಡಿದು ರೈತರ ನ್ನು ಹತ್ತಿಕ್ಕುತ್ತಿದೆ ಎಂದು ಚಂದ್ರಶೇಖರ್ ಕೋಡಿಹಳ್ಳಿ ಅವರು ಆರೋಪಿಸಿದರು.
ಕೇಂದ್ರದ ಬಿಜೆಪಿ ಸರ್ಕಾರ ನೋಟು ಅಮಾನೀಕರಣ , ಜಿಎಸ್ಟಿ ಸೇರಿದಂತೆ ಇನ್ನಿತರ ಯೋಜನೆಗಳನ್ನು ಜಾರಿಗೊಳಿಸಿ ಖಾಸಗಿ ಕಂಪನಿಗಳಿಗೆ ಸಹಕಾರ ನೀಡುವ ಪ್ರಯತ್ನ ಮಾಡಿ, ಇದೀಗ ಕೃಷಿ ಕ್ಷೇತ್ರಕ್ಕೂ ಕಾಲಿಟ್ಟು ನಾಶ ಮಾಡುವ ಉದ್ದೇಶ ಹೊಂದಿದ್ದಾರೆಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭೂಸ್ವಾಧೀನ ಕಾಯ್ದೆ ಜಾರಿಗೊಳಿಸಿ ರೈತರ ಭೂಮಿ ಗಳನ್ನು ಎಜೆ0ಟರಿಗೆ ಖರೀದಿಸಲು ಅನುಕೂಲ ಮಾಡಿ ಕೊಟ್ಟಿದೆ, ಇದರಿಂದ ಕೃಷಿ ವಲಯಕ್ಕೆ ಭಾರಿ ಪೆಟ್ಟು ಬಿದ್ದಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ ಅವರು , ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಯಾವ ಲೆಕ್ಕ ಅಂದವನ ವಿರುದ್ಧ ಕ್ರಮ ತೆಗೆದುಕೊಳ್ಳಿಲ್ಲ ಮಹಾತ್ಮಾ ಗಾಂಧೀಜಿ ಅವರನ್ನೇ ಬಿಡಲಿಲ್ಲ, ಇನ್ನೂ ಮುಖ್ಯಮಂತ್ರಿ ಯಾವ ಲೆಕ್ಕ ಎಂದು ಹೇಳಿದ ಮಂಗಳೂರಿನ ಸಂಘಟಕನ ವಿರುದ್ಧ ಇನ್ನೂ ಕ್ರಮ ಕೈಗೊಳ್ಳದಿರುವುದು ದುರಂತ, ಇದಕ್ಕೆ ಬಿಜೆಪಿ ಸರ್ಕಾರ ಬಾಯಿ ಮುಚ್ಚಿ ಕುಳಿತಿರುವುದು ಖನದನೀಯ, ಮೊದಲು ಅವರ ಬಗ್ಗೆ ಕ್ರಮ ಕೈಗೊಳ್ಳೋದು ಬಿಟ್ಟು, ರೈತರನ್ನು ವಿರೋಧಿಸಿ ಕಾಮೆಂಟ್ ಮಾಡುತ್ತಿದ್ದೀರಲ್ಲ ಎಂದು ಸಿಎಂ ಅವರಿಗೆ ಕೋಡಿಹಳ್ಳಿ ಚಂದ್ರಶೇಖರ ಅವರು ಆಕ್ರೋಶ ವ್ಯಕ್ತಪಡಿಸಿದರು.