ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಸಲು ತಹಸೀಲ್ ಮುಂದೆ ಪ್ರತಿಭಟನೆ

0
17

ಸುರಪುರ: ರಾಜ್ಯದಲ್ಲಿನ ಅಂಗನವಾಡಿ ನೌಕರರ ಮತ್ತು ಬಿಸಿಯೂಟ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅಂಗನವಾಡಿ ನೌಕರರ ಸಂಘ ಮತ್ತು ಅಕ್ಷರದಾಸೋಹ ನೌಕರರ ಸಂಘದಿಂದ ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ, ಇಂಡಿಯನ್ ಲೇಬರ್ ಕಾನ್ಫರೆನ್ಸ್‌ನ ೪೫ನೇ ಮತ್ತು ೪೬ನೇ ಅಧಿವೇಶನದ ಶೀಫಾರಸ್ಸಿನಂತೆ ಸ್ಕೀಮು ಯೋಜನೆಯ ಕೆಲಸಗಾರರಿಗೆ ಕನಿಷ್ಠ ೨೧ ಸಾವಿರ ರೂಪಾಯಿಗಳ ಮಾಸಿಕ ವೇತನ ಹಾಗು ೧೦ ಸಾವಿರ ರೂಪಾಯಿಗಳ ಪಿಂಚಣಿ ನೀಡಬೇಕೆಂದರು.ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ,ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ,ಅಂಗನವಾಡಿ ವರ್ಕ್‌ರ‍್ಸ್ ಜನಶ್ರೀ ಭೀಮಾ ಯೋಜನೆಗಳನ್ನು ಸರಿಯಾಗಿ ಜಾರಿ ಮಾಡಬೇಕು ಎನ್ನುವುದು ಸೇರಿದಂತೆ ಇನ್ನೂ ಅನೇಕ ಬೇಡಿಕೆಗಳ ಈಡೇರಿಸಲು ಆಗ್ರಹಿಸಿದರು.

Contact Your\'s Advertisement; 9902492681

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಕಚೇರಿ ಸಿರಸ್ಥೆದಾರರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷೆ ನಸೀಮಾ ಮುದನೂರು,ಅಕ್ಷರದಾಸೋಹ ನೌಕರರ ಸಂಘದ ಅಧ್ಯಕ್ಷೆ ಜಹಿರಾಬೇಗಂ,ರಾಧಾಬಾಯಿ ಲಕ್ಷ್ಮೀಪುರ,ಬಸ್ಸಮ್ಮ ಆಲ್ಹಾಳ,ಮಂಜುಳಾ ಸಂತ್ರಸವಾಡಿ,ಪರ್ವಿನ್ ಶರ್ಕಿಮೊಲ್ಲಾ,ಪ್ರಕಾಶ ಆಲ್ಹಾಳ,ಲಕ್ಷ್ಮೀ ವಡ್ಡರಕಾಲೋನಿ,ಸೌಭಾಗ್ಯ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here