ಕಲಬುರಗಿ: ಮುಸ್ಲಿಂ, ಸಿಖ್, ಜೈನ್, ಕ್ರಿಶ್ಚಿಯನ್,ಬುದ್ಧಿಸ್ಟ್ ಹಾಗೂ ಪಾರ್ಸಿ ಈ ಐರು ಸಮುದಾಯದ ಮತ್ತು ಸಂಸ್ಥೆಗಳ ರಕ್ಷಣೆ ಅಲ್ಪಸಂಖ್ಯಾತರ ಆಯೋಗದ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಮ್ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪ್ರಧಾನಮಂತ್ರಿ 15 ಅಂಶಗಳು ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಲಬುರಗಿಯಲ್ಲಿ ಶರಣಬಸವೇಶ್ವರರ, ಹಜರತ್ ಖಾಜಾ ಬಂದೇನವಾಜ (ರ.ಅ) ಅವರು ಕಾರ್ಯಾಸ್ಥಾನವಾಗಿ ಈ ನೆಲ ಸಂಸ್ಕೃತಿ, ಶಾಂತಿ, ಸೌಹಾರ್ದತೆಯ ಮೂಲಕ ಮಾನವೀಯತೆ ಪಾಠ ಕಲಿಸುತ್ತದೆ. ಇಲ್ಲಿ ಆಶಾಂತಿ ಸೃಷ್ಟಿಗೆ ಅವಕಾಶ ನೀಡಬಾರದು, ಪೊಲೀಸ್ ಇಲಾಖೆ ಅತ್ಯಂತ ಮುತುವರ್ಜಿ ವಹಿಸಿ ಇಲ್ಲಿನ ಕೋಮು ಸೌಹಾರ್ದತೆಯನ್ನು ಕಾಪಾಡಬೇಕು. ಸುಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಸೌಹಾರ್ದತೆ ಕಾಪಾಡವ ವಿಶೇಷ ತಂತ್ರಗಳನ್ನು ಬಳಸಬೇಕು ಎಂದು ಸಲಹೆ ನೀಡಿರುವುದಾಗಿ ತಿಳಿಸಿದರು.
ಆರು ಸಮುದಾಯದ ಧಾರ್ಮಿಕ ಸಾಮಾಜಿಕ ಹಾಗೂ ಸಂಸ್ಥೆಗಳ ರಕ್ಷಣೆಯ ಜವಾಬ್ದಾರಿ ನಮ್ದಾಗಿದೆ ಎಂದು ಸ್ಪಷ್ಟಪಡಿಸಿದರು.
ಕಲಬುರಗಿ ಜಿಲ್ಲೆಯ ಮೊಹಲ್ಲಾಹ, ಮಸೀದಿ, ಚರ್ಚ್, ಗುರುದ್ವಾರ ಹಾಗೂ ಶಾದಿ ಮಾಹಲ್ ಗೆ ಭೇಟಿ ನೀಡಿ ಶುದ್ಧ ಕುಡಿಯುವ ನೀರು, ಶುದ್ಧ ಗಾಳಿ, ಸುಸಜ್ಜಿತ ಮನೆ ಮತ್ತು ಆರೋಗ್ಯ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಯೋಗದ ಕಾರ್ಯದರ್ಶಿ ಮೊಹಮ್ಮದ್ ನಜೀರ್, ಶಾಸಕಿ ಕನೀಜ್ ಫಾತೀಮಾ, ಶಾಸಕ ಎಂ.ವೈ ಪಾಟೀಲ್ ಇದ್ದರು.