ದೇಶದ ಆರ್ಥಿಕ ಬಲವರ್ಧನೆ ಸಹಕಾರ ಕ್ಷೇತ್ರದ ಕೊಡುಗೆ: ಜ್ಯಾಂತೀಕರ್

0
6

ಆಳಂದ: ದೇಶದ ಆರ್ಥಿಕ ಬಲವರ್ಧನೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಈ ಕ್ಷೇತ್ರವನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮುನ್ನೆಡೆಸುವುದು ಇಂದಿನ ಅಗತ್ಯವಾಗಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ನಿರ್ದೇಶಕ ಗುರುನಾಥ ಜ್ಯಾಂತೀಕರ್ ಅವರು ಹೇಳಿದರು.

ಪಟ್ಟಣದ ಎ.ವಿ. ಪಾಟೀಲ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸರಸಂಬಾದ ಶ್ರೀಧನಲಕ್ಷ್ಮೀ ಸಹಕಾರ ನಿ. ಆಯೋಜಿಸಿದ್ದ ತನ್ನ 4ನೇ ಶಾಖೆ ಆರಂಭ ಹಾಗೂ 19ನೇ ವಾರ್ಷಿಕ ಮಹಾಸಭೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

Contact Your\'s Advertisement; 9902492681

ಜನ ಸಾಮಾನ್ಯರ ಮೇಲೆ ಸಮಾಜದಲ್ಲಿನ ಹಣಕಾಸಿನ ಶೋಷಣೆ ತಡೆಯುವಲ್ಲಿ ಸಹಕಾರ ಕ್ಷೇತ್ರವೂ ಪ್ರಮುಖ ಪಾತ್ರವಹಿಸಿದೆ. ಸರಸಂಬಾ ಸಹಕಾರ ನಿ. ಹಳ್ಳಿಯಿಂದ ಪಟ್ಟಣದವರೆಗೆ ತನ್ನ ಶಾಖೆಗಳನ್ನು ತೆರೆಯುವುದು ಇದರಲ್ಲಿ ಪರಿಶ್ರಮ ಮತ್ತು ಪ್ರಮಾಣಿಕತೆ ಅಡಗಿದೆ. ದೇಶದಲ್ಲಿ 8ಲಕ್ಷ ಸಹಕಾರ ಸಂಘ 31 ಕೋಟಿ ಸದಸ್ಯರಿದ್ದು ಸುಮಾರು 60 ಸಾವಿರ ಉದ್ಯೋಗ ನೀಡಿದೆ. ರಾಜ್ಯದಲ್ಲೂ 500 ಸಂಘವಿದ್ದು, ಇವುಗಳ ಮೂಲಕ ಮಿಟರ್ ಬಡ್ಡಿ ನಿಯಂತ್ರಿಸುವಲ್ಲಿ ಸಹಕಾರ ಸಂಸ್ಥೆ ಪ್ರಮುಖ ಪಾತ್ರವಹಿಸುತ್ತಿವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಆಳಂದ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು, ನೇತೃತ್ವ ವಹಿಸಿದ್ದ ಮಳಖೇಡದ ಸೈಯದ್ ಶಹಾ ಮುಸ್ತಫಾ ಖಾದರಿ, ಉದ್ಘಾಟನೆ ನೆರವೇರಿಸಿದ ಶಾಸಕ ಸುಭಾಷ ಗುತ್ತೇದಾರ, ರಾಜ್ಯ ಸಹಕಾರಿ ನಿರ್ದೇಶಕ ಸಂಜೀವ ಮಹಾಜನ್, ವ್ಯವಸ್ಥಾಪಕ ಶರಣಗೌಡ ಜಿ. ಪಾಟೀಲ, ಡಿಸಿಸಿ ಉಪಾಧ್ಯಕ್ಷ ಸುರೇಶ ಸಜ್ಜನ್, ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಎಸ್.ಎಸ್. ಪಾಟೀಲ, ಪ್ರಾಂತೀಯ ವ್ಯವಸ್ಥಾಪಕ ರಾಜಶೇಖರ ಹೆಚ್, ಮಲ್ಲಿಕಾರ್ಜುನ ವಿ. ಮಹಾಂತಗೋಳ ಮತ್ತಿತರು ವೇದಿಕೆಯಲ್ಲಿದ್ದು ಮಾತನಾಡಿದರು.

ಶ್ರೀಧನಲಕ್ಷ್ಮೀ ಸಹಕಾರಿ ಅಧ್ಯಕ್ಷ ಮಹಾಂತಪ್ಪ ಆಲೂರೆ ಅಧ್ಯಕ್ಷತೆ ವಹಿಸಿ ಸಂಸ್ಥೆ ಸಾಧನೆ ಮೆಟ್ಟಲಿಗೆ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸರ್ವ ಸದಸ್ಯರ ಪ್ರಮಾಣಿಕತೆ ಕಾರಣವಾಗಿದೆ ಎಂದರು.

ನಿರ್ದೇಶಕ ಸೂರ್ಯಕಾಂತ ಎಂ. ಪಾಟೀಲ, ಸೋಮಲಿಂಗ ಎಸ್. ಕವಲಗಿ, ಶ್ರೀಕಾಂತ ಬಿ. ದೇಶಟ್ಟಿ, ಪರಮೇಶ್ವರ ಎಚ್. ಮುನ್ನೋಳ್ಳಿ, ಹಣಮಂತ ಎಲ್. ಹೋಟಕರ್, ಕುಪೇಂದ್ರ ವಿ. ಪಾಟೀಲ, ವಿಜಯಾನಂದ ಕೆ. ಮಾಶ್ಯಾಳೆ, ಮಲ್ಲಿನಾಥ ಕೆ. ಗೋವಿನ, ಜಗನಾಥ ಎನ್. ದೇಶಮುಖ, ಪ್ರಥ್ವೀರಾಜ ಎಸ್. ಮೂಲಗೆ, ಬಸವರಾಜ ಎಸ್. ಜಮಾದಾರ, ಚಂದ್ರಶೇಖರ ಜಿ. ಪಾಟೀಲ, ನಾಗೇಂದ್ರ ಮುಗಳೆ, ಸಂಜುಬಾಯಿ ಮೈಂದರ್ಗಿ, ಕವಿತಾ ಎಂ. ಹಿರೇಮಠ, ದೀಪಾ ಮಾಡ್ಯಾಳೆ, ವಿಜಯಲಕ್ಷ್ಮಿ ಬಿ. ಕೊರಳ್ಳಿ ಸೋಮನಾಥ ನಿಂಬರಗಿ ಮತ್ತಿತರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಸದಸ್ಯರಿಗೆ ಮರಣೋತ್ತರ ನಿಧಿ ಚೆಕ್ ಅನ್ನು ಆಯಾ ಕುಟುಂಬಕ್ಕೆ ನೀಡಲಾಯಿತು. ಮಂಜುನಾಥ ನಿರೂಪಿಸಿದರು. ಸೋಮನಾಥ ಕವಲಗಿ ಸ್ವಾಗತಿಸಿದರು. ಯೋಗಿರಾಜ ಮಾಡಿಯಾಳ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here