ಆಯುಷ್ಮಾನ ಭಾರತ ಆರೋಗ್ಯ ಯೋಜನೆ ಲಾಭ ಪಡೆಯಲು ಕರೆ

0
18

ಆಳಂದ: ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಹಾಗೂ ಕೇಂದ್ರ ಸರ್ಕಾರದ ಆಯುಷ್ಮಾನ ಭಾರತ ಯೋಜನೆ ಅಡಿಯಲ್ಲಿ ಜನಸಾಮಾನ್ಯರಿಗೆ 5 ಲಕ್ಷ ರೂ.ಗಳ ವೆಚ್ಚದಲ್ಲಿ ಉಚಿತವಾಗಿ ಇರುವ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಗ್ರೇಡ್-2 ತಹಸೀಲ್ದಾರ ಬಸವರಾಜ ರಕ್ಕಸಗಿ ಅವರು ಇಂದಿಲ್ಲಿ ಕರೆ ನೀಡಿದರು.

ಪಟ್ಟಣದಲ್ಲಿ ಮಂಗಳವಾರ ತಾಲೂಕು ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕ ಆಸ್ಪತ್ರೆ ಆಳಂದ ಆಶ್ರಯದಲ್ಲಿ ಹಮ್ಮಿಕೊಂಡ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಕಾರ್ಯಕ್ರಮದ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಸರ್ಕಾರಿ ಮತ್ತು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ತಮ್ಮ ಪಡಿತರ ಚೀಟಿ ಮತ್ತು ಆಧಾರ ಕಾರ್ಡ್ ಹಾಜರು ಪಡಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು. ಯೋಜನೆಗಳ ಮಾಹಿತಿ ಕೊರತೆಯಿಂದಾಗಿ ಬಡವರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಅಧಿಕ ಹಣ ನೀಡುವುದಕ್ಕಿಂತ ಸರ್ಕಾರದ ಸೌಲಭ್ಯವನ್ನು ಆರೋಗ್ಯದ ತುರ್ತು ಪರಿಸ್ಥಿತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ| ಚಂದ್ರಕಾಂತ ನರಿಬೋಳ ಅವರು ಮಾತನಾಡಿ, ಆಯುಷ್ಮಾನ ಭಾತರ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಬಡವರಿಗೆ 291 ಚಿಕ್ಸತಾ ವಿಧಾನಗಳ ಕ್ಲಿಷ್ಟಕರ ದ್ವ್ವಿತೀಯ ಹಂತದ 254 ಚಿಕಿತ್ಸೆ ಕೈಗೊಳ್ಳಲು ಅವಕಾಶವಿದೆ. ಮಾರಣಾಂತಿಕ ಕಾಯಿಲೆ ಹೃದಯರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಮುಂತಾದ ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕ್ಸಿಗಳು ಮತ್ತು 36 ಉಪ ಚಿಕಿತ್ಸಾ ವಿಧಾನ ಸೇರಿ ಒಟ್ಟು 1650 ಚಿಕಿತ್ಸೆ ಸೌಲಭ್ಯಗಳ ಅವಕಾಶವಿದೆ. ಇದಕ್ಕೆ ಸಂಬಧಿತ ಆಸ್ಪತ್ರೆ ಸೇರಿ ಅಧಿಕಾರಿಗಳಿಗೆ ಸಂಪರ್ಕಿಸಿ ಲಾಭ ಪಡೆಯಬೇಕು ಎಂದರು.

ಸಾರ್ವಜನಿಕ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಈರವ್ವ ಮೂಲಿಮನಿ, ತಜ್ಞ ವೈದ್ಯ ಡಾ| ಪ್ರಮೋದ, ಆರೋಗ್ಯಶಿಕ್ಷಣಾಧಿಕಾರಿ ವಿಜಲಕ್ಷ್ಮೀ ನಂದಿಕೋಲ ಮಠ, ಆಶಾ ಮೇಲ್ವಿಚಾರಕಿ ದೇವಕಿ, ಸುದಿಪ, ಪ್ರಕಾಶ, ರಾಹುಲ, ಗುರುರಾಜ, ಪಂಡಿತ ನಿಂಬಾಳ, ಕಲ್ಯಾಣಿ ಹರಳಯ್ಯ, ಸಾವಿತ್ರಿ ಮತ್ತು ಸುಮಂಗಲಾ ಸೇರಿದಂತೆ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ತಹಸೀಲ್ದಾರ ಕಚೇರಿಯಿಂದ ಪ್ರಮುಖ ರಸ್ತೆಗಳ ಮೂಲಕ ಜಾಥಾ ಕೈಗೊಳ್ಳಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here