ಸುರಪುರ: ನರೇಂದ್ರ ಮೋದಿಯವರ ಕೇಂದ್ರ ಸರಕಾರ ಬಜೆಟ್ ಮಂಡಿಸಿದ ಒಂದೆ ದಿನದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡುವ ಮೂಲಕ ಜನರ ಮೇಲೆ ಹೊರೆ ಹಾಕಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಸೇನೆ ರಾಜ್ಯ ಕಾರ್ಯಾಧ್ಯಕ್ಷ ವೆಂಕೋಬ ದೊರೆ ಬೇಸರ ವ್ಯಕ್ತಪಡಿಸಿದರು.
ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಸೇನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಮೋದಿಯವರು ಡಿಸೇಲ್,ಪೆಟ್ರೋಲ್ ಬೆಲೆಗಳನ್ನು ಬಜೆಟ್ ಘೋಷಿಸಿದ ದಿನವೇ ಹೆಚ್ಚಿಸುತ್ತಾರೆ.ಆದರೆ ಅದೇ ಬಜೆಟಲ್ಲಿ ಘೋಷಿಸಿದ ಇತರೆ ಯೋಜನೆಗಳ ಜಾರಿಗು ಇದೇ ರೀತಿ ತುರ್ತು ಕ್ರಮ ಕೈಗೊಳ್ಳಬೇಕು.ಆದರೆ ಆದಾಯ ಬರುವುದಕ್ಕೆ ಕಾಳಜಿ ತೋರುತ್ತಾರೆ,ಜನರಿಗೆ ಸೌಲಭ್ಯಗಳ ನೀಡುವಲ್ಲಿ ನಿಷ್ಕಾಳಜಿ ತೋರುತ್ತಾರೆ.ಗೃಹಸಾಲ ತೆರಿಗೆ ವಿನಾಯಿತಿ,ಶೂನ್ಯ ಬಂಡವಾಳ ಬೇಸಾಯ ಯೋಜನೆ,ಮೀನುಗಾರರ ಸಂಪದ ಯೋಜನೆ,ಪಿ.ಎಂ.ಜಿ.ಇ.ಎಸ್ ಮನೆ ಯೋಜನೆ,ಮಹಿಳಾ ಸಂಘದ ಸದಸ್ಯರಿಗೆ ಒಮದು ಲಕ್ಷ ಸಾಲ ಇವೆಲ್ಲವುಗಳನ್ನು ಕೂಡಲೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿನ ಶಾಸಕರ ಕುದುರೆ ವ್ಯಾಪಾರ ನಡೆದಿದೆ.ಇದರಿಂದ ರಾಜ್ಯದ ಅಭೀವೃಧ್ಧಿ ಕುಂಠಿತವಾಗುತ್ತಿದೆ.ಅಲ್ಲದೆ ರಾಜಕೀಯ ಅರಾಜಕತೆ ಸೃಷ್ಟಿ ಮಾಡುವ ಮೂಲಕ ಬಿಜೆಪಿ ಪಕ್ಷ ರಾಜ್ಯದ ರೈತರಿಗೆ ಮಳೆಯಿಲ್ಲದೆ ಚಿಂತೆಯಲ್ಲಿರುವಾಗ ಈರೀತಿಯಾಗಿ ಸರಕಾರದ ಅಸ್ಥಿರಗೊಳಿಸುವುದನ್ನು ಜನ ನೋಡಿ ಬೇಸತ್ತಿದ್ದಾರೆ ಎಂದು ಪಕ್ಷದ ವಿರುಧ್ಧ ಅಸಮಧಾನಗೊಂಡು ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತ ಕೇಂದ್ರ ಸರಕಾರದ ವಿರುಧ್ಧ ಘೋಷಣೆಗಳ ಕೂಗಿ,ನಂತರ ಪ್ರಾದೇಶಿಕ ಆಯುಕ್ತರಿಗೆ ಬರೆದ ಮನವಿಯನ್ನು ತಹಸೀಲ್ ಕಚೇರಿ ಸಿಬ್ಬಂದಿ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ರಾಜಾ ಪಿಡ್ಡನಾಯಕ,ವೆಂಕಟೇಶ ಭಕ್ರಿ,ಗೋಪಾಲ ಬಾಗಲಕೋಟೆ,ಮಾನಯ್ಯ ದೊರೆ,ಕೃಷ್ಣಾ ದಿವಾಕರ,ಕೇಶಣ್ಣ ದೊರೆ,ಬಸವರಾಜ ಕವಡಿಮಟ್ಟಿ,ದೇವಪ್ಪ ದೇವರಮನಿ ಸೇರಿದಂತೆ ಇತರರಿದ್ದರು.