ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಘಟಕದಿಂದ ಮೈತ್ರಿ ಸರಕಾರ ಅಭದ್ರಗೊಳಿಸಿ ಸರಕಾರ ರಚನೆಗೆ ಬಿಜೆಪಿ ಮುಂದಾಗುತ್ತಿರುವ ಕುಟು ನೀತಿಯನ್ನು ಖಂಡಿಸಿ, ಬಿಜೆಪಿ ಅಸಂವಿಧಾನಿಕ ನಡೆಯನ್ನು ವಿರೋಧಿಸಿ ಇಂದು ನಗರದ ಕಾಂಗ್ರೆಸ್ ಕಚೇರಿ ಎದುರಿನ ಜಿಲ್ಲಾ ಆಸ್ಪತ್ರೆಯ ರಸ್ತೆ ತಡೆದು ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಸೈಯದ್ ಅಹ್ಮದ್ ಮಾತನಾಡಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ರಚನೆಯಾದ ಮೊದಲದಿನದಿಂದ ಸರಕಾರ ಅಭದ್ರಗೊಳಿಸುವ ನಿಟ್ಟಿನಲ್ಲಿ ರಣತಂತ್ರ ಹೆಣೆಯುವ ಮೂಲಕ ಸರಕಾರಕ್ಕೆ ಅಭದ್ರಗೊಳಿಸುವ ಕೆಲಸ ನಡೆಸುತ್ತಲ್ಲೇ ಬಂದಿದ್ದಾರೆ.
ಈ ಮತ್ತೆ ಯಡಿಯೂರಪ್ಪ ಅವರು ನಮ್ಮ ಪಕ್ಷದ ಶಾಸಕರನ್ನು ಖರೀದಿಸಿ ಸರಕಾರ ರಚನೆಗೆ ಮುಂದಾಗಿರುವುದು ಅಸಂವಿಧಾನ. ಜನರ ತೀರ್ಪುಗೆ ತಲೆ ಬಾಗಿ ರಾಜ್ಯ ಸರಕಾರ ಮೈತ್ರಿ ಸರಕಾರ ರಚನೆಯಾಗಿದೆ. ಆದರೆ ಬಿಜೆಪಿಗೆ ಇದು ಅರಗಿಸಿಕೊಳಲು ಸಾಧ್ಯವಾಗದೆ ಮೈತ್ರಿ ಸರಕಾರವನ್ನು ಕೆಡವಲು ತಪ್ಪು ದಾರಿ ಅನುಸರಿಸುತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದರು.
ಮೈತ್ರಿ ಸರಕಾರದ ಶಾಸಕರನ್ನು ಬಿಜೆಪಿಯ ರಾಜ್ಯಸಭಾ ಸದಸ್ಯನ ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೊಗಿ ರೆಸಾರ್ಟ್ ನಲ್ಲಿ ಕುಡಾಹಾಕಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಈ ಬೆಳವಣಿಗಳಿಗೆ ಕೇಂದ್ರದ ಬಿಜೆಪಿ ನಾಯಕರು ಕುಮ್ಮಕು ನೀಡುತಿದ್ದಾರೆಂದು ಅವರು ಅವರು ಈ ಸಂದರ್ಭದಲ್ಲಿ ಆರೋಪಿಸಿದರು.
ಸಂವಿಧನ ಪ್ರಕರಾರ ಆಯ್ಕೆಯಾದ ಸರಕಾರವನ್ನು ವಿರೋಧ ಪಕ್ಷದ ನಾಯಕರು ಮತ್ತು ಕೇಂದ್ರದ ಅಮಿತ್ ಶಾ, ಮೋದಿ ಅವರು ಈ ನೀತಿ ಅನುಸರಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿಯ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ವಿವಿಧ ಘಟಕದ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.