ಕಲಬುರಗಿ: ಖ್ಯಾತ ಉದ್ಯಮಿ ಪದ್ಮಶ್ರೀ ಡಾ.ಕಲ್ಪನಾ ಸರೋಜಾ ಅವರ ಕರೋನಾ ಸಂದರ್ಭದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅಮೇರಿಕಾ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಹುಮ್ಯಾನಿಟಿ ಪದವಿ ನೀಡಿ ಗೌರವಿಸಿದೆ.
ಗ್ಲೋಬಲ್ ಪೀಸ್ ಅಮೇರಿಕಾಕ್ಕೆ ಸಂಯುಕ್ತ ರಾಷ್ಟ್ರಗಳ ಒಕ್ಕೂಟದಲ್ಲಿ ಇತ್ತಿಚಿಗೆ ಮುಂಬೈಯಲ್ಲಿ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸುಮಾರು 120 ದೇಶಗಳು ಭಾಗವಹಿಸಿದ್ದವು. ಒಟ್ಟು 46 ವಿಶ್ವವಿದ್ಯಾಲಯಗಳ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು, ವಿಶ್ವ ಶಾಂತಿಗಾಗಿ ಅಮೇರಿಕನ್ ಡಿಪ್ಲೊಮ್ಯಾಟಿಕ್ ಮಿಷನ್ ಹಮ್ಮಿಕೊಂಡಿತ್ತು. ವಿಶ್ವದಾದ್ಯಂತ ಶಾಂತಿ ಪರಿವರ್ತನೆಯ ನಾಗರೀಕತೆಯನ್ನು ನಿರ್ಮಿಸುವ ಉದ್ದೇಶ ಕಾರ್ಯಕ್ರಮ ಹೊಂದಿತ್ತು. ಡಬ್ಲು ಡಬ್ಲು ಆಟಗಾರ ಖಲೀಲ ಸೇರಿದಂತೆ ದೇಶವಿದೇಶದ ಚಲನಚಿತ್ರದ ಖ್ಯಾತ ನಟರು, ರಾಜಕಾರಣಿಗಳು ಗಣ್ಯವ್ಯಕ್ತಿಗಳು ಭಾಗವಹಿಸಿದರು.
ಇವರ ಈ ಸಾಧನೆಗೆ ಗುಲ್ಬರ್ಗ ವಿಶ್ವವಿದ್ಯಾಲಯ ಸಮಾಜ ವಿಜ್ಞಾನ ನಿಕಾಯದ ಡೀನ್ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ವಿ.ಟಿ.ಕಾಂಬಳೆ ಹಾಗೂ ಬೀದರ ಜಿಲ್ಲಾ ಘಟಕ ದೀಕ್ಷಾಭೂಮಿ ಅಧ್ಯಕ್ಷರಾದ ಡಾ. ಅಶೋಕಕುಮಾರ ಕಾಂಬಳೆ ಹರ್ಷವ್ಯಕ್ತಪಡಿಸಿದ್ದಾರೆ.