ಕಲಬುರಗಿ: ನನ್ನ ಅಧಿಕಾರಿ ಅವಧಿಯಲ್ಲಿ ಬಡವರಿಗೆ ನೀಡುತ್ತಿದ್ದ 7 ಕೆ.ಜಿ ಅಕ್ಕಿಯಲ್ಲಿ ರಾಜ್ಯದ ಬಿಜೆಪಿ ಸರ್ಕಾರ 2 ಕೆ.ಜಿ. ಕಡಿತ ಮಾಡಿದೆ. ಜನರ ತೆರಿಗೆ ಹಣದಲ್ಲಿ ಜನರಿಗೆ ರೇಷನ್ ನೀಡಲು ಇವರಿಗೇನು ಕಷ್ಟು, ಇವರು ಅಧಿಕಾರದಲ್ಲಿರಲು ಯೋಗ್ಯೆನೆ ಇಲ್ಲ ಎಂದು ಗುಡುಗಿದ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು, ಮುಂದೆ ಅಧಿಕಾರಕ್ಕೆ ಬಂದರೆ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಎಂದು ಅವರು ಘೋಸಿಷಿದರು.
ಪಟ್ಟಣದ ಜಯ ಪ್ರಕಾಶ ನಾರಾಯಣ ಪ್ರೌಢಶಾಲೆಯಲ್ಲಿ ಸಮತಾಲೋಕ ಶಿಕ್ಷಣ ಸಮಿತಿ ಕಲಬುರಗಿ ಆಯೋಜಿಸಿದ್ದ ಶಿರಪುರ ಮಾದರಿಯ ಆಳಂದ ತಾಲೂಕಿನ ಅಂತರ್ಜಲ ಸಮೃದ್ಧಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅಧಿಕಾರದಲ್ಲಿ ಕೃಷಿ ಭಾಗ್ಯ ಯೋಜನೆ ಅನುಷ್ಠಾನಕ್ಕೆ ತಂದು ಮಳೆ ಆಧಾರಿತ ಕೃಷಿ ಪ್ರದೇಶಕ್ಕೆ ಅನುಕೂಲ ಕಲ್ಪಿಸಲು ರಾಜ್ಯದಲ್ಲಿ 2 ಲಕ್ಷ ಕೃಷಿ ಹೂಂಡಾ ನಿರ್ಮಾಣಕ್ಕೆ ಅನುದಾನ ಕೊಟ್ಟರೆ, ಈ ಬಿಜೆಪಿ ಸರ್ಕಾರ ಈಗ ಕಿಂಚಿತ ಹಣ ನೀಡದೆ ನಿಷ್ಕಾಳವಹಿಸಿದೆ ಎಂದು ಟೀಕಿಸಿದರು.
ಬಿಜೆಪಿ ಆರ್‍ಎಸ್‍ಎಸ್ ಮುಖವಾಡದ ಸರ್ಕಾರ, ಇದು ಹಿಂದು ಮುಸ್ಲಿಂರಿಗೆ ಜಗಳ ಹಚ್ಚಿ ತಮಾಸೆ ನೋಡುವ ಸರ್ಕಾರವಿದೆ. ಜನ ಸಾಮಾನ್ಯರ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿದೆ. ರೈತರು ಪ್ರತಿಭಟಿಸುವ ಜಾಗದಲ್ಲಿ ಉತ್ತರ ಪ್ರದೇಶದಲ್ಲಿ ಕೇಂದ್ರ ಮಂತ್ರಿಯ ಮಗ ಆಶೀಸ್ ಮಿಶ್ರಾ ರೈತರ ಮೇಲೆ ಕಾರು ಹಾಯ್ದು ರೈತರು ಸತ್ತಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಮನುಷ್ಯತ್ವ ಮಾನಮರೆಯಾದ ಇದ್ದಿದ್ದರೆ ಒಂದು ಕ್ಷಣವೂ ಅಧಿಕಾರದಲ್ಲಿ ಇರದಂತ ನಾಲಾಯಕವಾಗಿದೆ. ಸಚಿವ ಮಿಶ್ರಾ ಅವರ ರಾಜೀನಾಮೆ ಪಡೆಯಬೇಕು ಇಲ್ಲ ಪ್ರಧಾನಮಂತ್ರಿಗಳು ಸಚಿವ ಸಂಪೂಟ್ಟದಿಂದ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಆಳಂದ ತಾಲೂಕಿಗೆ ಅಧಿಕಾರದಲ್ಲಿ ಅಂತರ್ಜಲ ಕಾಮಗಾರಿಗೆ ಹಾಗೂ ಅಮರ್ಜಾ ಅಣೆಕಟ್ಟೆಗೆ ಭೀಮಾ ನದಿನೀರು ತರುವ ಯೋಜನೆಗೂ ಹಣ ನೀಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಗುಡಗಿದರು.
ದೇಶದಲ್ಲಿ ಆರ್.ಎಸ್.ಎಸ್. ಮುಖವಾಡದ ಬಿಜೆಪಿ ಕೋಮುವಾದಿ ಸಂವಿಧಾನ ವಿರೋಧ ಕೆಲಸ ಮಾಡಿದೆ. ಸಂವಿಧಾನವೂ ಎಲ್ಲರು ಸಮಾನತೆ ಬಯಸಿದೆ. ಬಾಬಾಸಾಹೇಬ ಅಂಬೇಡ್ಕರ್ ಅವರ ನೀಡಿದ ಸಂವಿಧಾನ ಭದ್ರವಾಗಿರಬೇಕು. ಆದರೆ ಬಿಜೆಪಿ ಸಂವಿಧಾನ ಬದಲಾವಣೆಯ ದುಸಾಸಕ್ಕೆ ಕೈ ಹಾಕುತ್ತಿದೆ. ಇದೇನಾದರು ಮುಂದುವರೆಸಿದರೆ ದೇಶದಲ್ಲಿ ಕ್ರಾಂತಿಯನ್ನೇ ಎದುರಿಸಬೇಕಾಗುತ್ತದೆ ಎಂದ ಅವರು, ಈ ದೇಶದ ಜಾತಿ ಜನಾಂಗಕ್ಕೆ ಸಂಪತು ಹಂಚಿಕೆ ಆಗದೆ ಹೋದರೆ ಯಾರು ಸಹ ಶಾಂತಿ ಸಮಾಧಾನದಿಂದ ಇರಲು ಸಾಧ್ಯವಿಲ್ಲ. ಜನರು ಜಾಗೃತರಾಗಬೇಕು.
ಕಾಂಗ್ರೆಸ್ ಅಧಿಕಾರದಲ್ಲಿ 160ರ ಅಶ್ವಾಸನಗಿಂತ 165 ಅಶ್ವಾಸನೆಗಳು ಈಡೇರಿಸದ ಯಾವುದಾದರು ಸರ್ಕಾರವಿದ್ದರೆ ಅದು ಕಾಂಗ್ರೆಸ್ ಸರ್ಕಾರವಿದೆ. ಚುನಾವಣೆಯಲ್ಲಿ ಜನವಿರೋಧಿ ರೈತ ವಿರೋಧಿ ಸರ್ಕಾರಕ್ಕೆ ತಕ್ಕ ಪಾಠಕಲಿಸಬೇಕು ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು. ಮಾಜಿ ಶಾಸಕ ಬಿ.ಆರ್. ಪಾಟೀಲ, ಜೇವರ್ಗಿ ಶಾಸಕ ಡಾ| ಅಜಯಸಿಂಗ್, ಅಫಜಲಪೂರ ಶಾಸಕ ಎಂ.ವೈ. ಪಾಟೀಲ, ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ, ಶಾಸಕಿ ಕನಿಜಾ ಫಾತಿಮಾ, ಅಲಂ ಪ್ರಭು ಪಾಟೀಲ ಮತ್ತಿತರು ಪಾಲ್ಗೊಂಡಿದ್ದರು.