ಮಳೆಯಿಂದ ಜೆಸ್ಕಾಂಗೆ ೫೦ ಲಕ್ಷ ರೂ. ಹಾನಿ: ಕುಲಕರ್ಣಿ

0
20

ಆಳಂದ: ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿನ ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಇಂದಿಲ್ಲಿ ಒತ್ತಾಯಿಸಿದರು.

ಪಟ್ಟಣದ ಜೆಸ್ಕಾಂ ಕಚೇರಿ ಆವರಣದಲ್ಲಿ ಮಂಗಳವಾರ ಗುಲಬರ್ಗಾ ವಿದ್ಯುಶ್ಚಕ್ತಿ ಸರಬರಾಜ ಕಂಪನಿ ಕಾರ್ಯ ಮತ್ತು ಪಾಲನೆ ಉಪವಿಭಾಗವು ಕಲಬುರಗಿ ಕಾರ್ಯನಿರ್ವಾಹಕ ಅಭಿಯಂತರ ಸಂತೋಷ ಚವ್ಹಾಣ ಅಧ್ಯಕ್ಷತೆಯಲ್ಲಿ ಜೆಸ್ಕಾಂ ಗ್ರಾಹಕರ ಸಂವಾದ ಸಭೆಯಲ್ಲಿ ರೈತರು ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.

Contact Your\'s Advertisement; 9902492681

ಎಲ್ಲೊಂದರಲ್ಲಿ ಕಂಬಗಳು ಬಾಗಿನಿಂತು ತಂತಿಗಳು ನೆಲಕ್ಕಪಿಸುತ್ತಿವೆ. ಜನ ಜಾನುವಾರು ಜೀವನ ಭಯದಲ್ಲಿ ಕಾಲ ಕಾಳೆಯುವಂತಾಗಿದೆ. ಪಂಪಸೆಟ್‌ಗಳಿಗೆ ಸಕಾಲಕ್ಕೆ ವಿದ್ಯುತ್ ಪೂರೈಕೆ ಇಲ್ಲದೆ ಬೆಳೆ ಬೆಳೆಯಲು ಆಗುತ್ತಿಲ್ಲ. ಇರುವ ಟ್ರಾನ್ಸಫಾರಂಗಳಿಗೆ ಪಂಪಸೆಟ್‌ಗಳು ಹೆಚ್ಚಾಗಿ ಭಾರವಾಗುತ್ತಿದೆ. ಉಚಿತವಾಗಿ ಪಂಪಸೆಟ್‌ಗಳಿ ಹೆಚ್ಚಿನ ಟ್ರಾನ್ಸಫಾರಂ ಒದಗಿಸಿ ಅನುಕೂಲ ಮಾಡಬೇಕು ಎಂದು ಕಿಸಾನಸಭಾ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ, ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ, ವಿಶ್ವನಾಥ ಜಮಾದಾರ ಕಲ್ಯಾಣಿ ತುಕಾಣಿ ಅವರು ಒತ್ತಾಯಿಸಿದರು.
ಪಂಪಸೆಟ್‌ಗೆ ಸಂಬಂಧಿತ ಟ್ರಾನ್ಸಫಾರಂ ಸುಟ್ಟು ಮೂರು ದಿನಗಳಲ್ಲೇ ದುರಸ್ತಿಕೈಕೊಂಡು ವಿದ್ಯುತ್ ಪೂರೈಸಬೇಕು. ತಪ್ಪಿದ್ದಲ್ಲಿ ಸಿಬ್ಬಂದಿಗೆ ದಂಡವಿಧಿಸಿಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.

ಹಣಕೊಟ್ಟರೆ ಟ್ರಾನ್ಸಾಫಾರಂ ಕೆಲಸ ಮಾಡುತ್ತಾರೆ ಎಂಬ ಸಭೆಯಲ್ಲಿ ರೈತರ ಆರೋಪಕ್ಕೆ ಜೆಸ್ಕಾಂ ಎಇಇ ಮಾಣಿಕರಾವ್ ಕುಲಕರ್ಣಿ ಅವರು ಹಣ ಕೊಡುವುದು ಮತ್ತು ಪಡೆಯುವುದು ಎರಡೂ ಅಪರಾಧವಾಗಿದೆ. ಇಂಥ ಪ್ರಕರಣಗಳಿದ್ದರೆ ಗಮನಕ್ಕೆ ತರಬೇಕು ಎಂದು ಗ್ರಾಹಕರಿಗೆ ಹೇಳಿದರು.

ನಾಗಣ್ಣಾ ಬಾಲಖೇಡೆ, ಖಲೀಲ ಉಸ್ತಾದ ಹೆಬಳಿ, ಮೋಘಾ ಬಿ. ಗ್ರಾಮದ ಮುಖಂಡ ನಾಗರಾಜ ಡಿ. ಪಾಟೀಲ, ಶಿವಶರಣ ಮೂಲಗೆ, ಲಕ್ಕಪ್ಪಾ ಮೇಲಿನಕೇರಿ ಅವರು ಹೊಸ ಆರ್‌ನಂಬರಗೆ ಅರ್ಜಿ ಸಲ್ಲಿಸಿದ ರೈತರಿಗೆ ನಂಬರ ಒದಗಿಸಿ ಸಕಾಲಕ್ಕೆ ವಿದ್ಯುತ್ ಒದಗಿಸಬೇಕು. ವಿದ್ಯುತ್ ಪೂರೈಕೆ ಇಲ್ಲದಿರುವುದು ಬೆಳೆಗಾರರಿಗೆ ತೊಂದರೆ ಆಗುತ್ತಿದೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಸೌಭಾಗ್ಯದಡಿ ಸಂಪರ್ಕ ಕಲಿಸಿರುವ ಗ್ರಾಹಕರಿಗೆ ಬಿಲ್ ನೀಡಕೂಡದು ಎಂದು ಅಧಿಕಾರಿಗಳ ಗಮನಕ್ಕೆ ತಂದರು.

ಸಮಸ್ಯೆಗಳನ್ನು ಆಲಿಸಿದ ಸಂತೋಷ ಚವ್ಹಾಣ ಅವರು ಹಾಜರಿದ್ದ ವಿವಿಧ ಶಾಖಾಧಿಕಾರಿಗಳು ಸ್ಪಂದಿಸುವಂತೆ ಸೂಚನೆ ನೀಡಿದರು. ಆಳಂದ ಜೆಸ್ಕಾಂ ಶಾಖೆಯ ಸಿದ್ರಾಮಪ್ಪ ನಿಂಬಾಳ, ಎಇ ವಿಕಾಸ, ಮಾದನಹಿಪ್ಪರಗಾದ ಪರಮೇಶ್ವರ ಬಡಿಗೇರ್, ಸರಸಂಬಾದ ಯಲ್ಲಾಲಿಂಗ ಶಿರೂರ, ಆಳಂದ ಶಶಿ ಸರಸಂಬಿ ಮತ್ತಿತರು ಹಾಜರಿದ್ದರು.

೫೦ಲಕ್ಷ ರೂ ಹಾನಿ: ಮಳೆಯಿಂದ ತಾಲೂಕಿನಲ್ಲಿ ಜೆಸ್ಕಾಂಗೆ ಸುಮರು ೫೦ ಲಕ್ಷ ರೂಪಾಯಿ ಹಾನಿಯಾಗಿದೆ. ೭೦೦ ಕಂಬದ ಪರಿವರ್ತಕ ಹಾಳಾಗಿವೆ. ಅನೇಕರ ಐಪಿಸೆಟ್ ಕೆಟ್ಟಸ್ಥಿತಿಯಲಿವೆ. ಅಮರ್ಜಾ ಅಣೆಕಟ್ಟೆ ನೀರು ಹರಿಬಿಟ್ಟಿದ್ದರಿಂದ ಭೂಸನೂರ ವಲಯದಲ್ಲಿ ವಿದ್ಯುತ್ ಕಂಬಗಳು ಕೊಚ್ಚಿಹೋಗಿವೆ. ಜೊತೆಗೆ ರೈತರ ಪಂಪಸೆಟ್‌ಗಳು ವಿದ್ಯುತ್ ಪರಿಕರಗಳು ನಷ್ಟವಾಗಿವೆ. ನೀರಿನ ಪ್ರವಾಹದಲ್ಲಿನ ಟ್ರಾನ್ಸಫಾರಂ ಮತ್ತು ವಿದ್ಯುತ್ ತಂತಿಗಳ ಸರಿಪಡಿಸಿ ಕಡಿತಗೊಂಡ ವಿದ್ಯುತ್ ಪೂರೈಕೆಗೆ ಸಿಬ್ಬಂದಿಗಳು ಸರಿಪಡಿಸಲು ಶ್ರಮಿಸುತ್ತಿದ್ದಾರೆ. ಸಮಸ್ಯೆಗಳಿದ್ದರೆ ಶಖಾಧಿಕಾರಿಗಳು ಅಥವಾ ಕಾರ್ಮಿಕ ಮಿತ್ರರ ಗಮನಕ್ಕೆ ತರಬೇಕು.-ಮಾಣಿಕರಾವ್ ಕುಲಕರ್ಣಿ ಜೆಸ್ಕಾಂ ಎಇಇ ಆಳಂದ.

ಪತ್ರಿಕೆ ವರದಿ ಸ್ಪಂದಿಸಿದೆ. ರುದ್ರವಾಡಿ ಗ್ರಾಮದ ನನ್ನ ಹೊಲದಲ್ಲಿ ಎರಡು ವರ್ಷಗಳಿಂದ ವಿದ್ಯುತ್ ತಂತಿ ಬಾಗಿದ ಕಂಬ ಸರಿಪಡಿಸುವಂತೆ ಅರ್ಜಿ ಸಲ್ಲಿಸಿದರೆ ಸ್ವೀಕರಿಸಿಲ್ಲ. ಪೋಸ್ಟ್ ರಿಜೀಟ್ರರ್ ಮೂಲಕ ಅರ್ಜಿ ಸಲ್ಲಿಸಿದರು ಸ್ಪಂದಿಸಿಲ್ಲ ೪ ಸಾವಿರ ರೂ. ಕೇಳಿದ್ದರು. ಆದರೆ ಬೇಸತ್ತು ನೀಡಿದ ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡ ೨ದಿನಗಳಲ್ಲಿ ದುರಸ್ತಿ ಮಾಡಿದ್ದಾರೆ. ಈ ಪರಿಸ್ಥಿತಿ ಎಲ್ಲಡೆ ಇದೆ ಹೀಗಾದರೆ ಹೇಗೆ ಸುಧಾರಿಸಬೇಕು.- ಚಂದ್ರಕಾಂತ ಖೋಬ್ರೆ ರುದ್ರವಾಡಿ ರೈತರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here