ಕಲಬುರಗಿ: ಬಹೆಮನಿ ಫೌಂಡೆಶನ್ ಖಿಲಾ ವತಿಯಿಂದ 7ನೇ ಜಶನ್ ಎ ರಹಮತ್ ಉಲ್ ಲಿಲ್ ಆಲಮೀನ್ (ಸ.ಅ) ಅಂಗವಾಗಿ ಪ್ರತಿಷ್ಠಿತ ಹಜರತ್ ಅಬುಬಕರ್ ಸಿದ್ದಿಖಿ (ರಜಾ) ಪ್ರಶಸ್ತಿಯನ್ನು ಖಾಜಿ ಮೊಹಮ್ಮದ್ ಹಫೀಜ್ ಉಲ್ ಹಸನ್ ಸಿದ್ದಿಖಿ ಶಾಹಿದ್ ಪ್ರದಾನ ಮಾಡಲಿದ್ದು, ಈ ಸಂದರ್ಭದಲ್ಲಿ ಅಬ್ದುಲ್ ಅಜೀಜ್ ರಜಪುತ್ ಚಿಸ್ತಿ ರಚಿಸಿದ ಸೋಫಿಸ್ ಆಫ್ ದಕ್ಕನ್ ಗುಲ್ಬರ್ಗಾ, ಬೀದರ್, ಬಿಜಾಪುರ ಪುಸ್ತಕ ಬಿಡುಗಡೆ, ಲೈಫ್ ಟೈಮ್ ಅಚೀವ್ ಮೆಂಟ್ ಪ್ರಶಸ್ತಿ ಹಾಗೂ ಗುಲ್ಬರ್ಗಾ ಅನಮೋಲ್ ರತನ್ ಪ್ರಶಸ್ತಿ ಪ್ರದಾನ ಕಾರ್ಯಾಕ್ರಮ ಹಮ್ಮಿಕೊಳ್ಳಲಾಗಿದೆ
ಅಕ್ಟೋಬರ್ 17 ರಂದು ಪೂರ್ವಾಹ್ನ 11:30ಕ್ಕೆ ನಗರದ ಮೆಟ್ರೋ ಫಂಕ್ಷನ್ ಹಾಲ್ ನಲ್ಲಿ ಶಖ್ ರೋಜಾ ದರ್ಗಾದ ಪೀಠಾಧಿಪತಿಗಳಾದ ಹಜರತ್ ಡಾ. ಶಾ ಮೊಹಮ್ಮದ್ ಅಫಜಲವುದ್ದೀನ್ ಜುನೈದಿ ಸಿರಾಜ್ ಬಾಬಾ ಹಾಗೂ ಹಜರತ್ ಸೈಯದ್ ಶಾ ಯದ್ದುಲ್ಲಾಹ ಹುಸೈನಿ ನಿಜಾಮ್ ಬಾಬಾ ಅವರು ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದ್ದು, ಸಿದ್ದಿಖಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಖಾಜಿ ಮೊಹಮ್ಮದ್ ಹಫೀಜ್ ಉಲ್ ಹಸನ್ ಸಿದ್ದಿಖಿ ಶಾಹಿದ್ ಅವರಿಗೆ ಪ್ರತಿಷ್ಠಿತ ಹಜರತ್ ಅಬುಬಕರ್ ಸಿದ್ದಿಖಿ (ರಜಾ) ಪ್ರಶಸ್ತಿ ಪ್ರದಾನ ಮಾಡಲಾವುದು ಎಂದು ಬಹೆಮನಿ ಫೌಂಡೇಶನ್ ಖಿಲಾ ಸಂಸ್ಥಾಪಕ ಅಧ್ಯಕ್ಷರಾದ ಖಾಜಿ ರೀಜ್ವಾನ್ ಉರ್ ರಹೆಮಾನ್ ಸಿದ್ದಿಖಿ ಮಸೂದ್ ಅವರು ತಿಳಿಸಿದ್ದಾರೆ.
ಲೈಫ್ ಟೈಮ್ ಅಚೀವ್ ಮೆಂಟ್ ಪ್ರಶಸ್ತಿ: ಡಾ. ಶಮೀಮ್ ಸುರೈಯ್ಯಾ, ಡಾ. ಸೈಯದ್ ರಹಮತುಲ್ಲಾ, ಎಂಡಿ ಅಬ್ದುಲ್ ಹಕೀಮ್ ಶಾಕೀರ್, ಕಮಲಾ ದೇವಿ ಶುಕ್ಲಾ ಅವರಿಗೆ ಪ್ರದಾನ ಮಾಡಲಿದ್ದು, ಈ ವೇಳೆಯಲ್ಲಿ ಕಲಬುರಗಿಯ ಪ್ರಥಮ ಮಹಿಳಾ ಐಎಎಸ್ ಆಗಿರುವ ಜಹೇರಾ ನಸೀಮ್, ಹಿರಿಯ ವೈದ್ಯ ಡಾ. ರಮೇಶ್ ಯಳಸಂಗಿಕರ್ ಎಂ.ಡಿ, ಹಿರಿಯ ನ್ಯಾಯವಾದಿ ಡಾ. ಮಕ್ಸೂದ್ ಅಫಜಲ್ ಜಾಗಿರದಾರ್, ಬರಹಗಾರರ ಎಂ.ಡಿ ಅಮಜದ್ ಹುಸೈನ್ ಜಾವೀದ್ ಎಂ.ಕಾಂ, ಇತಿಹಾಸಕಾರರ ಡಾ. ಶಶಿ ಶೇಖರ್ ರೆಡ್ಡಿ, ಸಾಹಿತಿ ನೂರುದ್ದೀನ್ ನೂರ್, ಹಿರಿಯ ಕಲಾವಿದ ಡಾ. ಎಸ್.ಎಂ ನೀಲಾ, ಉನ್ಯಾಸಕ ಡಾ. ಅನೀಸ್ ಸಿದ್ದಿಖಿ, ಸೈಯದ್ ಶಾ ಫರಿದೋದ್ದಿನ್ ಸಾಗಿ ಸರಮಸ್ತ್, ಶಿಕ್ಷಕಿ ನವೀದ್ ಅನಜುಮ್ ಅವರು ಸೇರಿದಂತೆ 10 ಜನರಿಗೆ ಗುಲ್ಬರ್ಗಾ ಅನಮೋಲ್ ರತನ್ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಬೀದರ್ ಜಿಲ್ಲಾ ಪಂಚಾಯತ್ ಸಿಇಓ ಜಾಹೇರಾ ನಸೀಮ್, ಜಿಲ್ಲಾ ಸದರ್ ಖಾಜಿಯಾಗಿರುವ ಡಾ. ಖಾಜಿ ಹಮಿದ್ ಫೈಸಲ್ ಸಿದ್ದಿಖಿ, ಅಬ್ದುಲ್ ಅಜೀಜ್ ರಾಜಪುತ್ ಚಿಸ್ತಿ, ಸೈಯದ್ ಮಜಹರ್ ಹುಸೈನಿ, ಪ್ರೊ. ಸಂಜಯ ಮೈಕಲ್, ಫಾದರ್ ಸ್ಟೈನಿ ಲೊಬೋ, ದೀಪ್ ಸಿಂಗ್, ಮೊಹಮ್ಮದ್ ಮುಕರಮುಲ್ ಹಕ್ ಸಿದ್ದಿಖಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಖಿರತ್, ಅಜಾನ್, ನಾಥ್ ಸ್ಪಚ್, ಪ್ರಬಂಧ ಸ್ಪರ್ಧೆಯಲ್ಲಿ ವಿಜೆತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಫಜಲ್ ಅಹ್ಮದ್ ತಿಮ್ಮಾಪುರಿ, ಅಲೀಮ್ ಅಹ್ಮದ್, ಮುಬೀನ್ ರಿಯಾಜ್, ಸಲಾವುದ್ದೀನ್ ಗುತ್ತೇದ್ದಾರ್, ಅನವರ್ ಸಿಲೆದಾರ್, ನವಾಬ್ ಖಾನ್, ಮೊಹಸೀನ್ ಗೋಟೂರಿ, ಎಂ.ಡಿ ರಾಯೀಸ್ ಅಹ್ಮದ್, ಫವಾದ್ ಉರ್ ರಹೆಮಾನ್ ಸಿದ್ದಿಖಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.