ಕಲಬುರಗಿ ಸಾಂಸ್ಕೃತಿಕ ಜಿಲ್ಲೆಯನ್ನಾಗಿಸುವ ಪಣ: ಕಸಾಪ ಅಭ್ಯರ್ಥಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ

0
46

ಕಲಬುರಗಿ: ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕೃತಿಯ ಉಳಿವು ಹಾಗೂ ಕನ್ನಡತನದ ಸಾಕಾರದ ಮೂಲಧ್ಯೇಯದೊಂದಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇನೆ. ಕಳೆದ ಎರಡು ದಶಕದಿಂದ ಭಾಷೆಯ ಸಂರಕ್ಷಣೆ ಸೇರಿದಂತೆ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರಿಂದ, ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ಜಿಲ್ಲೆಯನ್ನಾಗಿಸುವ ಪಣ ತೊಟ್ಟಿದ್ದೇನೆ. ಹಾಗಾಗಿ, ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ನನಗೆ ಬೆಂಬಲ ನೀಡಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ವಿಶ್ವಾಸ ನನಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಪ್ರಚಾರ ಕಛೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಅನೇಕ ವರ್ಷಗಳಿಂದ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆಸಿದ ವಿನೂತನ ಕಾರ್ಯಕ್ರಮಗಳೇ ನನಗೆ ಶ್ರೀರಕ್ಷೆಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Contact Your\'s Advertisement; 9902492681

ಸಾಹಿತ್ಯ ಪ್ರೇರಕರಾದ ಸಂದೇಶ ತಿಪ್ಪಣಪ್ಪ ಕಮಕನೂರ, ರಾಮು ರೆಡ್ಡಿ ಗುಮ್ಮಟ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಹಿರಿಯ ಕವಿ ನಾಗೇಂದ್ರಪ್ಪ ಮಾಡ್ಯಾಳೆ, ಉದ್ಯಮಿ ಸುದರ್ಶನ್ ಜತ್ತನ್, ನಾಲ್ಕು ಚಕ್ರ ಸಂಸ್ಥೆಯ ಮಾಲಾ ದಣ್ಣೂರ, ಮಾಲಾ ಕಣ್ಣಿ, ಪ್ರಮುಖರಾದ ಕಲ್ಯಾಣಕುಮಾರ ಶೀಲವಂತ, ಡಾ.ಶರಣರಾಜ್ ಛಪ್ಪರಬಂದಿ, ಪ್ರಭುಲಿಂಗ ಮೂಲಗೆ, ಸಂತೋಷ ಕುಡಳ್ಳಿ, ಶರಣಬಸವ ಜಂಗಿನಮಠ, ಶಿವಲೀಲಾ ತೆಗನೂರ, ವಿಶಾಲಾಕ್ಷಿ ದೇಸಾಯಿ, ವಿಜಯಲಕ್ಷ್ಮೀ ಹಿರೇಮಠ, ರವೀಂದ್ರಕುಮಾರ ಭಂಟನಳ್ಳಿ, ಶರಣಬಸಪ್ಪ ನರೂಣಿ, ಶಿವಪುತ್ರ ಹಾಗರಗಿ, ಶಿವಶರಣಪ್ಪ ಹಡಪದ, ಸಂತೋಷ ಗುಡಿಮನಿ, ರವಿಕುಮಾರ  ಶಹಾಪುರಕರ್, ಮನೋಹರ ಪೊದ್ದಾರ, ಎಸ್.ಎಂ.ಪಟ್ಟಣಕರ್, ಸಿದ್ದಣ್ಣಗೌಡ ಪಾಟೀಲ ಯಡ್ಡಳ್ಳಿ, ಪ್ರಭವ ಪಟ್ಟಣಕರ್, ಶಿವಾನಂದ ಮಠಪತಿ, ಮಂಜುನಾಥ ಕಂಬಾಳಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here