ಭಾಲ್ಕಿ: ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ೭೭೦ ಶರಣರು ಒಗ್ಗೂಡಿ ಕಲ್ಯಾಣ ಕ್ರಾಂತಿಯನ್ನು ಮಾಡಿದರು. ಅನುಭವಮಂಟಪದಲ್ಲಿ ವಚನ ಸಾಹಿತ್ಯ ಉದಯವಾಯಿತ್ತು. ಶರಣರು ಸಮಸಮಾಜದ ನಿರ್ಮಾಣಕ್ಕಾಗಿ ಸಿದ್ಧರಾದರು. ಶರಣರ ಕ್ರಾಂತಿ ಸಹಿಸಲಾಗದ ಸನಾತನವಾದಿಗಳು ವೀರ ಶರಣರಾದ ಹರಳಯ್ಯ ಮತ್ತು ಮಧುವಯ್ಯ ಇವರಿಗೆ ಏಳೆಹೊಟಿ ಶಿಕ್ಷೆಯನ್ನು ನೀಡಿದರು.
ಅಸಂಖ್ಯಾತ ಶರಣರ ಹತ್ಯಾಕಾಂಡವನ್ನು ನಡೆಸಿದರು. ಆದರೂ ಶರಣರು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ವಚನ ಸಾಹಿತ್ಯದ ರಕ್ಷಣೆ ಮಾಡಿದರು. ಹಾಗಾಗಿ ಅವರ ತ್ಯಾಗ-ಬಲಿದಾನ ಸಂಕೇತವಾಗಿ ಮರಣವೇ ಮಹಾನವಮಿ ಹಾಗೂ ಕಲ್ಯಾಣಕ್ರಾಂತಿ ವಿಜಯೋತ್ಸವ. ಆಚರಿಸುತ್ತಾ ಬಂದಿದ್ದೇವೆ.
ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯಸನ್ನಿಧಾನದಲ್ಲಿ ಪ್ರತಿವರ್ಷದಂತೆ, ಈ ವರ್ಷವೂ ಭಾಲ್ಕಿ ನಗರದ ಹಿರೇಮಠ ಸಂಸ್ಥಾನದಲ್ಲಿ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ (ವಿಜಯ ದಶಮಿ) ದಿನಾಂಕ: ೧೫-೧೦-೨೦೨೧ ರಂದು ಆಚರಿಸಲಾಗುತ್ತಿದೆ. ಶುಕ್ರವಾರ ಸಾ. ೪-೦೦ ಗಂಟೆಗೆ ಹಿರೇಮಠ ಸಂಸ್ಥಾನದಿಂದ ವಚನ ಸಾಹಿತ್ಯದ ಪಲ್ಲಕಿ ಮೆರವಣಿಗೆ ಚೌಡಿ, ಗಡಿ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಚನ್ನಬಸವಾಶ್ರಮ ತಲುಪುವುದು.
ಸಾಯಂಕಾಲ ೫-೦೦ ಗಂಟೆಗೆ ಚನ್ನಬಸವಾಶ್ರಮದಲ್ಲಿ ಕಲ್ಯಾಣ ಕ್ರಾಂತಿ ವಿಜಯೋತ್ಸವ ಹಾಗೂ ಬನ್ನಿ ಗಿಡದ ಪೂಜೆ ನೇರವೇರಿಸಿ, ಬನ್ನಿ ವಿನಿಮಯ ಮಾಡಿಕೊಳ್ಳವುದು. ಸಕಲರು ಈ ಮೆರವಣಿಗೆ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.